- ಬಿ ಎಲ್ ಸಂತೋಷ್ ಪರ ವಕಾಲತ್ತು ವಹಿಸಿದ ಶೋಭಾ ಕಂದ್ಲಾಜೆ
- ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಖಂಡಿಸಿದ ಕೇಂದ್ರ ಸಚಿವೆ
ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡು ಈಗ ಹೊರ ಹೋಗಿರುವ ಜಗದೀಶ್ ಶೆಟ್ಟರ್‌ಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ಕೇಂದ್ರ ಸಚಿವೆ, ಕೇವಲ ಶಾಸಕ ಸ್ಥಾನಕ್ಕಾಗಿ ಕಾಂಗ್ರೆಸ್ ಸೇರಿದ್ದು ಎಷ್ಟು ಸರಿ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ವಿರೋಧಿಸುತ್ತಿದ್ದವರೇ ಇಂದು ಆ ಪಕ್ಷಕ್ಕೆ ಹೋಗಿದ್ದಾರೆ. ಧ್ವಜ ಬದಲಾದಂತೆ ಆಲೋಚನೆ ಬದಲಾಗುತ್ತಾ..? ಶೆಟ್ಟರ್ ಕಾಂಗ್ರೆಸ್ ಸೇರಿರೋದು ಬೇಸರ ತರಿಸಿದೆ ಎಂದರು.
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶೆಟ್ಟರ್‌ಗೆ ಇಲ್ಲಿನ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಶೋಭಾ ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? :ಇಡೀ ಬಿಜೆಪಿ ಬಿ ಎಲ್ ಸಂತೋಷ್ ಕಪಿಮುಷ್ಠಿಯಲ್ಲಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಬಿ.ಎಲ್. ಸಂತೋಷ್ ಸಮರ್ಥಿಸಿಕೊಂಡ ಸಚಿವೆ ಶೋಭಾ, “ಸಂತೋಷ್ ಅವರು ಎಂದಿಗೂ ಜಗದೀಶ್ ಶೆಟ್ಟರ್ ವಿರೋಧಿಯಲ್ಲ. ಅವರು ಶಾಸಕರಾಗಿಲ್ಲ, ಸಂಸದರಾಗಿಲ್ಲ. ಎಲ್ಲಿಯೂ ಸ್ಪರ್ಧೆ ಮಾಡುತ್ತಿಲ್ಲ. ಇಷ್ಟು ವರ್ಷ ಸಂತೋಷ್ ಕೆಲಸ ಮಾಡಿದ್ದು ಪಕ್ಷ ಸಂಘಟನೆಗಾಗಿ. ಸಂತೋಷ್ ಅವರು ಒಂದು ವಿಚಾರದಿಂದ ಬಂದಿದ್ದಾರೆ. ಆ ವಿಚಾರದಿಂದ ಬಂದವರನ್ನು ಗೆಲ್ಲಿಸಬೇಕು ಅನ್ನೋದು ಅವರ ಉದ್ದೇಶ ಅಷ್ಟೆ” ಎಂದು ಹೇಳಿದರು.