ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಪ್ರಧಾನ ಮಂತ್ರಿಯಾದ ದಿನವೇ ‘ಪಾಕ್ ಆಕ್ರಮಿತ ಕಾಶ್ಮೀರ’ (ಪಿಒಕೆ) ಭಾರತದ ಭಾಗವಾಗಲಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, “ರಾಹುಲ್ ಗಾಂಧಿ ಅವರು ಧೈರ್ಯಶಾಲಿ ಮತ್ತು ದೃಢನಿಶ್ಚಯವುಳ್ಳ ನಾಯಕರಾಗಿದ್ದಾರೆ. ಭಾರತದ ಕುರಿತು ಅವರ ಬದ್ಧತೆ ಗಮನಾರ್ಹವಾಗಿದೆ. ಅವರಿಗೆ ಅಧಿಕಾರ ದೊರೆಯಬೇಕು” ಎಂದಿದ್ದಾರೆ.
“ರಾಹುಲ್ ಅವರಿಗೆ ಭಾರತದವನ್ನು ಮುನ್ನಡೆಸುವ ಅಧಿಕಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸಿಕ್ಕರೆ, ಆ ದಿನವೇ, ಪಿಒಕೆ ಭಾರತದ ಭಾಗವಾಗುತ್ತದೆ” ಎಂದು ತಿವಾರಿ ಹೇಳಿದ್ದಾರೆ.