ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 96 ಕ್ಷೇತ್ರಗಳ ಮತದಾರರು ಇಂದು (ಮೇ 13) ನಾಲ್ಕನೇ ಹಂತದ ಚುನಾವಣೆಯಲ್ಲಿ ನಡೆಯುತ್ತಿದೆ. ಜೊತೆಗೆ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿಯೂ ಕೂಡಾ ಏಕಕಾಲಕ್ಕೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ.
ಆಂಧ್ರ ಪ್ರದೇಶ (25), ಬಿಹಾರ (5), ಜಾರ್ಖಂಡ್ (4), ಮಧ್ಯಪ್ರದೇಶ (8), ಮಹಾರಾಷ್ಟ್ರ (11), ಒಡಿಶಾ (4), ತೆಲಂಗಾಣ (17), ಉತ್ತರ ಪ್ರದೇಶ (13) , ಪಶ್ಚಿಮ ಬಂಗಾಳ (8), ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ (1) ಇಂದು ಮತದಾನ ನಡೆಯುತ್ತಿದೆ.
#WATCH | Telangana: A senior citizen voter in a wheelchair assisted by polling volunteers at a polling booth in JubileeHills in Hyderabad. #LokSabhaElections2024 pic.twitter.com/7cbHFJNGya
— ANI (@ANI) May 13, 2024
96 ಸ್ಥಾನಗಳಲ್ಲಿ ನಲವತ್ತೆರಡು ಕ್ಷೇತ್ರಗಳು (ಶೇ. 44) ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಹರಡಿಕೊಂಡಿವೆ. ಈ ಹಂತದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಮತದಾನ ಮುಕ್ತಾಯವಾಗಲಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಕಾಂಗ್ರೆಸ್ ಅನ್ನು ಹಾಡಿ ಹೊಗಳಿ ಬಿಜೆಪಿಯನ್ನು ತೆಗಳಿದ ಚಕ್ರವರ್ತಿ ಸೂಲಿಬೆಲೆ!
2019 ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಮೊದಲ ಚುನಾವಣೆ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶದ ಎರಡು ಲೋಕಸಭಾ ಸ್ಥಾನಗಳಲ್ಲಿ ಒಂದಾದ ಶ್ರೀನಗರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಇನ್ನು ಅನಂತನಾಗ್-ರಾಜೌರಿ ಕ್ಷೇತ್ರದಲ್ಲಿ ಮೇ 25ರಂದು ಮತದಾನ ನಡೆಯಲಿದೆ.
ಈ ಹಂತದ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್‌ನಂತಹ ಅಲಿಪ್ತ ಪಕ್ಷಗಳು ಪ್ರಾಬಲ್ಯ ಹೊಂದಿವೆ. ಈ ಎರಡೂ ಪಕ್ಷಗಳು ಕೂಡಾ ಸಂಸತ್ತಿನಲ್ಲಿ ಅನೇಕ ಬಾರಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಬೆಂಬಲ ನೀಡಿದೆ. ಆದರೆ ಈ ಚುನಾವಣೆಯಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಕೂಟವಾಗಲಿ ಅಥವಾ ಇಂಡಿಯಾ ಮೈತ್ರಿಕೂಟವಾಗಲಿ ಯಾವುದಕ್ಕೂ ಬಹಿರಂಗವಾಗಿ ಬೆಂಬಲ ಘೋಷಿಸಿಲ್ಲ.