ಕತಾರ್ನಲ್ಲಿ ಇಸ್ರೇಲ್ ಪರ ಗೂಢಚರ್ಯೆ ನಡೆಸಿದ ಆರೋಪದಡಿ ಎಂಟು ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಕತಾರ್ನ ನ್ಯಾಯಾಲಯವೊಂದು ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ದೇಶಾಂಗ ವ್ಯವಹಾರಗಳ ಸಚಿವಾಲಯ, ತೀರ್ಪಿಗೆ ಸಂಬಂಧಿಸಿ ಭಾರತವು ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ಗುರುವಾರ ದೆಹಲಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ, ನವೆಂಬರ್ 7 ರಂದು ಕತಾರ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದ ಎಂಟು ನೌಕಾಪಡೆಯ ಯೋಧರಿಗೆ ಭಾರತವು ಎರಡನೇ ಕಾನ್ಸುಲರ್ ಪ್ರವೇಶವನ್ನು ಪಡೆದುಕೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಕತಾರ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
#WATCH Delhi: On death sentence to 8 Indians in Qatar, MEA Spokesperson Arindam Bagchi says, “As we had informed earlier, the court of first instance of Qatar passed a judgment on October 26 in the case involving 8 Indian employees, the judgment is confidential and has only been… pic.twitter.com/Xsbdk01vWf
— ANI (@ANI) November 9, 2023
‘ಕತಾರ್ ಎಂಟು ಭಾರತೀಯ ಉದ್ಯೋಗಿಗಳ ಮೇಲೆ ತೀರ್ಪು ನೀಡಿದ ನ್ಯಾಯಾಲಯದ ಮೊದಲ ನಿದರ್ಶನವಾಗಿದೆ. ಕತಾರ್ ನೀಡಿರುವ ತೀರ್ಪು ಗೌಪ್ಯವಾಗಿದೆ ಮತ್ತು ಕಾನೂನು ತಂಡದೊಂದಿಗೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ನಾವು ಕತಾರ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಬಾಗ್ಚಿ ಹೇಳಿದರು.
ಭಾರತೀಯ ಅಧಿಕಾರಿಗಳು ಎಂಟು ವ್ಯಕ್ತಿಗಳ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ, ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ್ದು, ಭಾರತವು ಅವರಿಗೆ ಕಾನೂನು ನೆರವು ನೀಡುವುದನ್ನು ಮುಂದುವರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ವಿದೇಶಾಂಗ ವಕ್ತಾರರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ?
ಕಳೆದ ಅಕ್ಟೋಬರ್ 26ರಂದು ಬಹಿರಂಗಪಡಿಸದ ಆರೋಪದ ಮೇಲೆ ಕತಾರ್ನ ನ್ಯಾಯಾಲಯವು ಎಂಟು ನೌಕಾಪಡೆಯ ಯೋಧರಿಗೆ ಮರಣದಂಡನೆ ವಿಧಿಸಿತ್ತು.
ಅವರೆಲ್ಲರೂ ದೋಹಾದ ದಹ್ರಾ ಗ್ಲೋಬಲ್ನ ಉದ್ಯೋಗಿಗಳಾಗಿದ್ದರು. ಕತಾರ್ನಲ್ಲಿದ್ದುಕೊಂಡು ಇಸ್ರೇಲ್ ಪರ ಬೇಹುಗಾರಿಕೆಗಾಗಿ ಆಗಸ್ಟ್ 2022 ರಲ್ಲಿ ಅವರನ್ನು ಬಂಧಿಸಲಾಗಿತ್ತು.
ಈ ತೀರ್ಪಿನ ಮಾಹಿತಿ ತಿಳಿಯುತ್ತಿದ್ದಂತೆಯೇ, ಭಾರತವು ತೀರ್ಪನ್ನು ಆಘಾತಕಾರಿ ಎಂದು ಕರೆದಿತ್ತು. ಈ ಪ್ರಕರಣದ ಸಂಬಂಧ ಕತಾರ್ನೊಂದಿಗೆ ಎಲ್ಲ ರೀತಿಯ ಮಾತುಕತೆ ನಡೆಸಲು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವ ಭರವಸೆ ನೀಡಿದೆ.
#WATCH Delhi: On death sentence to 8 Indians in Qatar, MEA Spokesperson Arindam Bagchi says, “As we had informed earlier, the court of first instance of Qatar passed a judgment on October 26 in the case involving 8 Indian employees, the judgment is confidential and has only been… pic.twitter.com/Xsbdk01vWf
— ANI (@ANI) November 9, 2023
ಬಂಧಿತ ಭಾರತೀಯರ ನೌಕಾಪಡೆಯ ಮಾಜಿ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಎಂದು ಗುರುತಿಸಲಾಗಿದೆ. ಎಲ್ಲರೂ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಗಳಾಗಿದ್ದು, ದೋಹಾದ ದಹ್ರಾ ಗ್ಲೋಬಲ್ನ ಉದ್ಯೋಗಿಗಳಾಗಿದ್ದರು.
ತೀರ್ಪಿನ ಪ್ರತಿ ಕುಟುಂಬಗಳಿಗೆ ಯಾಕೆ ನೀಡಿಲ್ಲ: ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಟ್ವೀಟ್
ತೀರ್ಪು ಗೌಪ್ಯವಾಗಿದೆ ಎಂದು ಅರಿಂದಮ್ ಬಾಗ್ಚಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ‘ಅದು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
“ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಮತ್ತು ‘ಸ್ನೇಹಿ ವಿದೇಶಿ ದೇಶದ’ ಎಂಟು ನಿವೃತ್ತ ಹಿರಿಯ ನೌಕಾ ಸಿಬ್ಬಂದಿಗೆ ಮರಣದಂಡನೆ ವಿಧಿಸಲು ಯಾವುದೇ ತೀರ್ಪು ಗೌಪ್ಯವಾಗಿರಬಹುದು. ಕಾನೂನು ಗೌಪ್ಯವಾಗಿರಲಿ, ಕುಟುಂಬಗಳಿಗೆ ತೀರ್ಪಿನ ಪ್ರತಿಯನ್ನು ಏಕೆ ನೀಡಿಲ್ಲ? ಸೆರೆವಾಸದಲ್ಲಿರುವ ನಿವೃತ್ತ ನೌಕಾಪಡೆಯ ಅಧಿಕಾರಿಗಳಿಗೆ ತೀರ್ಪಿನ ಅನುವಾದಿತ ಪ್ರತಿಯನ್ನು ನೀಡಲಾಗಿದೆಯೇ ಅಥವಾ ಅವರಿಗೂ ನೀಡದಂತೆ ಗೌಪ್ಯವಾಗಿಡಲಾಗಿದೆಯೇ?’ ಎಂದು ಪ್ರಶ್ನಿಸಿ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.