ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗರನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅಶ್ಲೀಲವಾಗಿ ನಿಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾರಿಗೆ ಬಸ್ ಟಿಕೆಟ್ ಬೆಲೆ ಏರಿಕೆ ವಿರುದ್ಧ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಪ್ರತಿಭಟನೆಯನ್ನು ನಿಲ್ಲಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ.
ಇದೇ ವಿಚಾರಕ್ಕೆ, ಪೊಲೀಸರೊಂದಿಗೆ ಆರ್ ಅಶೋಕ್ ಮತ್ತು ಬಿಜೆಪಿಗರು ವಾಗ್ದಾದ ನಡೆಸಿದ್ದಾರೆ. ಈ ವೇಳೆ, ಅಶೋಕ್ ಅವರ ಕೈಹಿಡಿದು ಕರೆದೊಯ್ಯಲು ಮುಂದಾದ ಪೊಲೀಸ್ ಅಧಿಕಾರಿಗೆ ಅಶೋಕ್ ಅಶ್ಲೀಲ ಮತ್ತು ಅವಾಚ್ಯವಾಗಿ ನಿಂದಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ, “ನಾನು ಅಪೊಸಿಷನ್ ಲೀಡ್ರು (ವಿಪಕ್ಷ ನಾಯಕ). ನನ್ನ ಮೈಮುಟ್ಟಿದ್ರೆ ಉಷಾರ್. ಚಪ್ಪಲಿಲಿ ಹೊಡಿತೀನಿ ನಿನ್ ಅ**ನ್” ಎಂದು ಆರ್ ಅಶೋಕ್ ನಿಂದಿಸಿದ್ದಾರೆ.
'@RAshokaBJP ಅವರೇ,
— Karnataka Congress (@INCKarnataka) January 3, 2025
ವಿಪಕ್ಷ ನಾಯಕರಾಗಿಬಿಟ್ಟರೆ ಕರ್ತವ್ಯದಲ್ಲಿರುವ ಪೋಲೀಸ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಬಹುದೇ? ನಿನ್ನ ಅ-___ ಅನ್ನೋದು ಎಷ್ಟು ಸರಿ?
ಗೂಂಡಾಗಿರಿ ವಿಪಕ್ಷ ನಾಯಕನ ಕೆಲಸವೇ?
ನಾಲಿಗೆ ಸಂಸ್ಕಾರ ಹೇಳುತ್ತದೆ, @CTRavi_BJP ನಂತರ ಈಗ ನಿಮ್ಮ ಸರದಿಯೇ? ನೀವು ವಿರೋಧಪಕ್ಷ ನಾಯಕನಾಗಿ ಉಳಿಯಲು ಅರ್ಹರಲ್ಲ ಎಂಬುದನ್ನು ನಿಮ್ಮ… pic.twitter.com/9aUNNex5cl
ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, “ಅಶೋಕ್ ಅವರೇ ವಿಪಕ್ಷ ನಾಯಕರಾಗಿಬಿಟ್ಟರೆ ಕರ್ತವ್ಯದಲ್ಲಿರುವ ಪೋಲೀಸ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಬಹುದೇ? ನಿನ್ನ ಅ**ನ್ ಅನ್ನೋದು ಎಷ್ಟು ಸರಿ? ಗೂಂಡಾಗಿರಿ ವಿಪಕ್ಷ ನಾಯಕನ ಕೆಲಸವೇ? ನಾಲಿಗೆ ಸಂಸ್ಕಾರ ಹೇಳುತ್ತದೆ. ಸಿ.ಟಿ ರವಿ ನಂತರ ಈಗ ನಿಮ್ಮ ಸರದಿಯೇ? ನೀವು ವಿರೋಧ ಪಕ್ಷದ ನಾಯಕನಾಗಿ ಉಳಿಯಲು ಅರ್ಹರಲ್ಲ ಎಂಬುದನ್ನು ನಿಮ್ಮ ನಡತೆ ಹೇಳುತ್ತಿದೆ. ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾರುದ್ದದ ಭಾಷಣ ಬಿಗಿಯುವ ನಿಮ್ಮ ನಾಯಕರ ಹೊಲಸು ನಾಲಿಗೆಯನ್ನು ಯಾವ ಫೆನಾಯಿಲ್‌ನಿಂದ ತೊಳೆಯಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದೆ.