ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸಿದರು.
ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಆಗಮಿಸಿದ ರಾಹುಲ್ ಗಾಂಧಿ, ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿ ಡಾ. ರೇಣು ರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರವನ್ನು ಸಲ್ಲಿಸಿದ ನಂತರ, ಸಂವಿಧಾನವನ್ನು ಎತ್ತಿಹಿಡಿಯುವ ಪ್ರಮಾಣವಚನವನ್ನು ಓದಿದರು.
Wayanad is my home, and the people of Wayanad are my family. From them, I have learned a great deal over the last five years and received an abundance of love and affection. It is with great pride and humility that I file my nomination for Lok Sabha 2024 once again from this… pic.twitter.com/rjgz0cYTyB
— Rahul Gandhi (@RahulGandhi) April 3, 2024
ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ಆಗಮಿಸಿದ್ದ ರಾಹುಲ್, ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕಲ್ಪೆಟ್ಟಾದಿಂದ ಸಿವಿಲ್ ಸ್ಟೇಷನ್‌ವರೆಗೆ ಬೃಹತ್ ರೋಡ್ ಶೋ ನಡೆಸಿದರು.
The streets of Wayanad are abuzz with enthusiasm as their leader,
Rahul Gandhi visits to file his nomination, today. His mere presence brings hope and optimism among people. #WayanadWelcomesRahul pic.twitter.com/aPLGU5M5NT— Bharat Jodo Nyay Yatra (@bharatjodo) April 3, 2024
ರೋಡ್‌ಶೋ ಅಂತ್ಯದ ವೇಳೆಗೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, “ವಯನಾಡ್‌ನಲ್ಲಿ ಅನೇಕ ಜೀವಗಳನ್ನು ಬಲಿತೆಗೆದುಕೊಂಡಿರುವ ಮಾನವ-ಪ್ರಾಣಿ ಸಂಘರ್ಷ ಸೇರಿದಂತೆ ಎಲ್ಲ ವಿಷಯಗಳಲ್ಲಿ ತಾನು ಯಾವಾಗಲೂ ವಯನಾಡಿನ ಜನರೊಂದಿಗೆ ಇರುತ್ತೇನೆ. ವಯನಾಡ್‌ನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಷ್ಟ್ರ ಮತ್ತು ವಿಶ್ವದ ಗಮನಕ್ಕೆ ತರಲು ಸದಾ ಸಿದ್ಧ” ಎಂದು ಹೇಳಿದರು.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಈ ಚುನಾವಣೆಯು ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನವನ್ನು ರಕ್ಷಿಸಲು ಇರುವ ಹೋರಾಟವಾಗಿದೆ. ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಬಯಸುವ ಶಕ್ತಿಗಳು ಒಂದೆಡೆ ಇದೆ. ಇನ್ನೊಂದೆಡೆ ದೇಶದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಸ್ವರೂಪವನ್ನು ರಕ್ಷಿಸುವವರ ಶಕ್ತಿ ಇದೆ” ಎಂದು ಹೇಳಿದರು.
VIDEO | “This election is a fight for democracy and the Constitution of India. On one side are the forces who want to destroy the democracy and the Constitution of this country, and on the other side there is a force that is protecting the Constitution and democratic nature of… pic.twitter.com/Cqqvwocr0j
— Press Trust of India (@PTI_News) April 3, 2024
ವಯನಾಡ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಮತ್ತು ಸಿಪಿಐ ನಾಯಕಿ ಅನ್ನಿ ರಾಜಾ ವಿರುದ್ಧ ರಾಹುಲ್ ಸ್ಪರ್ಧಿಸಲಿದ್ದಾರೆ. 2019ರಲ್ಲಿ ಇದೇ ಕ್ಷೇತ್ರದಿಂದ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ರಾಹುಲ್ ಗಾಂಧಿ ಗೆದ್ದಿದ್ದರು.
ಇದನ್ನು ಓದಿದ್ದೀರಾ? ಬೆಂಗಳೂರು | ಹೈಕೋರ್ಟ್ ಜಡ್ಜ್ ಮುಂದೆಯೇ ಕೈ ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಒಟ್ಟು 10,92,197 ಮತಗಳಲ್ಲಿ 7,06,367 ಮತಗಳನ್ನು ಗಳಿಸಿದ್ದರೆ, ತಮ್ಮ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದ ಸಿಪಿಐನ ಪಿಪಿ ಸುನೀರ್ 2,74,597 ಮತಗಳನ್ನು ಪಡೆದಿದ್ದರು. ಕೇರಳದಲ್ಲಿ ಏಪ್ರಿಲ್ 26ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
