- ಮೋದಿ ಉಪನಾಮ ಪ್ರಕರಣ; ಜೈಲು ಶಿಕ್ಷೆ ವಿಧಿಸಿದ್ದ ಗುಜರಾತ್ ಸೆಷನ್ಸ್ ನ್ಯಾಯಾಲಯ
- ಮತ್ತೊಂದು ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ತಡೆಯಾಜ್ಞೆ ನೀಡಿದ್ದ ಪಾಟ್ನಾ ಹೈಕೋರ್ಟ್
ಮೋದಿ ಉಪನಾಮ ಮಾನಹಾನಿ ಪ್ರಕರಣಕ್ಕೆ ತಡೆ ನೀಡಲು ಸೂರತ್ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆ ಗುಜರಾತ್ ಹೈಕೋರ್ಟ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ ಸೂರತ್ ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಜೈಲು ಶಿಕ್ಷೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದು, ಶಿಕ್ಷೆ ರದ್ದಾದರೆ ಸಂಸದ ಸ್ಥಾನ ಮರಳಿ ಬರಲು ಸಹಾಯವಾಗುತ್ತದೆ.
ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿರುವುದರಿಂದ ರಾಹುಲ್ ಗಾಂಧಿ ಅವರಿಗೆ ಗರಿಷ್ಠ ಎರಡು ವರ್ಷ ಶಿಕ್ಷೆ ವಿಧಿಸಿರುವುದರಿಂದ ಕಳೆದ ತಿಂಗಳು ಅವರನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ವಿಚಾರಣಾ ನ್ಯಾಯಾಲಯವು ತನ್ನನ್ನು ಕಠೋರವಾಗಿ ನಡೆಸಿಕೊಂಡಿದೆ, ಸಂಸದನ ಸ್ಥಾನಮಾನದಿಂದ ತಾವು ಸಾರ್ವಜನಿಕವಾಗಿ ಹೆಚ್ಚು ಪ್ರಭಾವಿತವಾಗಿರುವುದಾಗಿ ರಾಹುಲ್ ಗಾಂಧಿ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿಯಲ್ಲಿ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ವಾಟರ್ ಮೆಟ್ರೋ | ದೇಶದ ಮೊದಲ ಜಲಸಾರಿಗೆಗೆ ಪ್ರಧಾನಿ ಮೋದಿ ಇಂದು ಚಾಲನೆ ; ಏನಿದರ ವಿಶೇಷ?
ಆದಾಗ್ಯೂ, ನ್ಯಾಯಾಧೀಶ ರಾಬಿನ್ ಮೊಂಗೇರಾ ರಾಹುಲ್ ಗಾಂಧಿಯವರ ಮೇಲ್ಮನವಿಯನ್ನು ಒಪ್ಪಲಿಲ್ಲ. ನೀವು ಲೋಕಸಭಾ ಸದಸ್ಯರಾಗಿದ್ದವರು ಹಾಗೂ ದೇಶದ ಎರಡನೇ ಅತಿ ದೊಡ್ಡ ರಾಜಕೀಯ ಪಕ್ಷವೊಂದರ ಅಧ್ಯಕ್ಷರೂ ಆಗಿದ್ದವರು. ಹೀಗಾಗಿ, ಪದಗಳನ್ನು ಬಳಸುವಾಗ ನೀವು (ರಾಹುಲ್) ಎಚ್ಚರದಿಂದ ಇರಬೇಕಿತ್ತು. ರಾಹುಲ್ ಅವರಂತಹ ವ್ಯಕ್ತಿಯಿಂದ ಸಭ್ಯ ನಡವಳಿಕೆಗೆ ಸಂಬಂಧಿಸಿ ಅಧಿಕ ನಿರೀಕ್ಷೆ ಇರುತ್ತದೆ. ಈ ಹಿನ್ನೆಲೆ ಕಾನೂನಿನಡಿ ಅವಕಾಶವಿರುವಷ್ಟು ಪ್ರಮಾಣದ ಶಿಕ್ಷೆಯನ್ನು ವಿಚಾರಣಾ ನ್ಯಾಯಾಲಯ ವಿಧಿಸಿದೆ’ ಎಂದು ತಿಳಿಸಿದ್ದರು.
ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಮತ್ತೊಂದು ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪಾಟ್ನಾ ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ರಾಜ್ಯಸಭಾ ಸಂಸದ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.