ಈದಿನ ವಿಶೇಷ | ರಾಹುಲ್ ಗಾಂಧಿ ಎಂದರೆ ‘ಮ್ಯಾನ್ ಆಫ್ ದಿ ಪಾಲಿಟಿಕ್ಸ್’

Date:

Advertisements

ಗುಜರಾತ್ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿತ್ತು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ತೆಲಂಗಾಣವನ್ನು ತಲುಪಿತ್ತು. ಅದೇ ಸಮಯದಲ್ಲಿ ಗುಜರಾತಿನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು ಬರೋಬ್ಬರಿ 141 ಜನ ಜೀವ ಕಳೆದುಕೊಂಡಿದ್ದರು. ಬ್ರಿಟಿಷ್ ಕಾಲದಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಈ ಸೇತುವೆಯನ್ನು ನವೀಕರಿಸಿ ಒಂದು ವಾರದ ಬಳಿಕ ಜನರ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಛತ್ ಪೂಜೆಗೆಂದು ಐನೂರಕ್ಕೂ ಹೆಚ್ಚು ಜನ ಸೇರಿದಾಗ ತೂಕ ತಡೆಯಲಾಗದೆ ಮತ್ತು ಕಳಪೆ ನವೀಕರಣ ಕಾಮಗಾರಿಯಿಂದಾಗಿ ಸೇತುವೆ ಮುರಿದು ಬಿದ್ದಿತ್ತು.

ಭಾರತ್ ಜೋಡೋ ಯಾತ್ರೆಯಲ್ಲಿದ್ದ ರಾಹುಲ್ ಗಾಂಧಿಯವರಲ್ಲಿ ಈ ಘಟನೆಯ ಬಗ್ಗೆ ಪತ್ರಕರ್ತರು ಕೇಳಿದಾಗ, “ಇದು ನೋವಿನ ಸಂಗತಿ. ಇದರಲ್ಲಿ ರಾಜಕೀಯ ಮಾಡಿದರೆ ಸತ್ತವರನ್ನು ಅವಮಾನಿಸಿದಂತೆ. ಮೃತರಿಗೆ ಸಂತಾಪಗಳು. ನಾನು ಇದರಲ್ಲಿ ರಾಜಕಾರಣ ಮಾಡಲು ಬಯಸುವುದಿಲ್ಲ” ಎಂದರು. ಎರಡು ನಿಮಿಷ ಮೌನಾಚರಣೆ ಮಾಡಿದರು. ಚುನಾವಣೆಯ ಸರಕನ್ನಾಗಿಸಬಹುದಾಗಿದ್ದ ವಿಷಯವನ್ನು ರಾಜಕೀಯದ ಕೆಸರೆರಚಾಟಕ್ಕೆ ಬಳಸಬಾರದೆಂಬ ನಿಲುವೇ ಅನೇಕರಿಗೆ ರಾಜಕೀಯ ಅಪ್ರಬುದ್ಧತೆಯಂತೆ ಕಾಣಬಹುದು. ಆದರೆ ರಾಹುಲ್ ಅವರಿಗೆ ಅಂತಹ ಕೀಳುಮಟ್ಟದ ರಾಜಕೀಯ ಬೇಕಿರಲಿಲ್ಲ. ಈ ಮನುಷ್ಯ ಇರುವುದೇ ಹೀಗೆ.

ಈಗ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಹೊಮ್ಮಿರುವ ರಾಹುಲ್ ಎದುರು ಹಾಥರಸ್‌ನ ಕಾಲ್ತುಳಿತದ ಘಟನೆ ಬಂತು. ಬೂದಿ ಬಾಬನ ಮಾತು ಕೇಳಲು ಹೋಗಿ 121 ಜನ ಉಸಿರಾಟ ನಿಲ್ಲಿಸಿದ್ದಾರೆ. ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿರುವ ರಾಹುಲ್, “ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ” ಎಂದಿದ್ದು, ಸಂತ್ರಸ್ತರ ಸಾವಿಗೆ ಸ್ಪಂದಿಸಲು ಮುಂದಾಗಿದ್ದಾರೆ. ರಾಜ್ ಕೋಟ್ ಬೆಂಕಿ ದುರಂತ, ಮೋರ್ಬಿ ದುರಂತದ ಸಂತ್ರಸ್ತರನ್ನು ಭೇಟಿಯಾಗಲು ಮುಂದಾಗಿದ್ದಾರೆ. ರಾಜಕೀಯ ನಾಯಕನಾಗಿ ಜನರ ಸಾವುಗಳಿಗೆ ಸ್ಪಂದಿಸಬೇಕೆಂಬ ಕಳಕಳಿಯ ಹೊರತಾಗಿ ರಾಜಕೀಯಕ್ಕೆ ಇವುಗಳನ್ನು ಬಳಸುವ ಇರಾದೆ ಅವರಲ್ಲಿ ಕಾಣುತ್ತಿಲ್ಲ. ರಾಹುಲ್ ಜಾಗದಲ್ಲಿ ಒಂದು ವೇಳೆ ಕರ್ನಾಟಕದ ಬಿಜೆಪಿ ನಾಯಕರಾಗಲೀ, ಬೇರೆ ರಾಜ್ಯಗಳ ಬಿಜೆಪಿ ನಾಯಕರಾಗಲೀ ಇದ್ದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿದರೂ ಒಂದು ಮಟ್ಟಿಗಿನ ಪಸೆ ಇಲ್ಲದ ಜನಪ್ರೇಮ, ಬೂಟಾಟಿಕೆಯಿಂದ ಕೂಡಿದ ಮತ್ತು ಕಾರುಣ್ಯವಿಲ್ಲದ ಕಣ್ಣೀರು ಕಣ್ಣಮುಂದೆ ನಿಲುಕುತ್ತದೆ. ಶವರಾಜಕಾರಣದ ಹೊಸ ರೂಪಗಳು ರಾಚುತ್ತವೆ.

Advertisements

ಅವಮಾನ, ಟ್ರೋಲಿಂಗ್, ನಿಂದನೆಗಳನ್ನು ಸಹಿಸಿ ಮಿಂದೆದ್ದ ರಾಹುಲ್, ಕಾಂಗ್ರೆಸ್ಸಿನ ರಾಜಕಾರಣದಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಮೊನ್ನೆ ಸದನದಲ್ಲಿ ರಾಹುಲ್ ಮಾಡಿದ ಭಾಷಣದ ತಿರುಳನ್ನೇ ತಿರುಚಿ, ಅವರನ್ನು ಹಿಂದೂ ವಿರೋಧಿಯ ಗೂಟಕ್ಕೆ ಬಡಿಯುವ ವ್ಯರ್ಥ ಪ್ರಯತ್ನವನ್ನು ಬಿಜೆಪಿ ಮತ್ತು ಅದರ ಐಟಿ ಸೆಲ್ ಮಾಡಿದೆ. ಬಿಜೆಪಿಯ ಟ್ರೋಲ್ ಪಡೆ ರಾಹುಲ್ ಅವರನ್ನು ‘ಪಪ್ಪು’ ಎಂದು ಬಿಂಬಿಸಲು ದಶಕದಿಂದ ಮಾಡಿರುವ ಕೆಟ್ಟ ಕೆಲಸಕ್ಕೂ ಮೋದಿಯವರು ಸಂಸತ್ತಿನಲ್ಲಿ ನಿಂತು, ರಾಹುಲ್ ಅವರನ್ನು ‘ಬಾಲಬುದ್ಧಿಯವ’ ಎಂದಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹಿಂದುತ್ವದ ಅಂಚುಗಳು (ಫ್ರಿಂಜ್ ಎಲಿಮೆಂಟ್‌ಗಳು) ಮಾಡುತ್ತಿದ್ದ ಕೆಲಸವನ್ನು ಮೋದಿಯೇ ಕೈಗೆತ್ತಿಕೊಳ್ಳುವಷ್ಟು ರಾಹುಲ್ ಬೆಳೆದಿದ್ದಾರೆ ಎಂಬುದು ಸ್ಪಷ್ಟ. ವಿರೋಧ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಎಲ್ಲ ಸೂಚನೆಗಳು ರಾಹುಲ್ ಅವರಿಂದ ಸಿಕ್ಕಿವೆ. ದೇಶದ ಉದ್ದಲಕ್ಕೂ ಸಂಚರಿಸಿರುವ ಅವರಿಗೆ ನಿಜ ಭಾರತ ದರ್ಶನದ ಅನುಭವವಿದೆ.

ಬಿಜೆಪಿ ಮತ್ತು ಸಂಘಪರಿವಾರ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ. ಅಹಿಂಸೆ, ಪ್ರೀತಿ ಮತ್ತು ಸತ್ಯವೇ ಹಿಂದೂಗಳ ತಳಹದಿ. ಆದರೆ ಬಿಜೆಪಿ, ಆರ್ ಎಸ್ ಎಸ್ ಅಸತ್ಯ, ಹಿಂಸೆ ಮತ್ತು ದ್ವೇಷವನ್ನೇ ಉಸಿರಾಡುತ್ತಿವೆ ಎಂಬ ಕಹಿ ಸತ್ಯವನ್ನು ಹೇಳಿದ ಕೂಡಲೇ, “ರಾಹುಲ್ ಗಾಂಧಿ ಹಿಂದೂಗಳನ್ನು ಅವಮಾನಿಸಿದ್ದಾರೆ” ಎಂದು ಉಯಿಲಿಡುತ್ತಿದ್ದಾರೆ. ರಾಹುಲ್ ಎತ್ತಿದ ಗಂಭೀರ ಸಮಸ್ಯೆಗಳಿಗೆ ಉತ್ತರ ಕೊಡದೆ, ಜಾರಿಕೊಂಡಿರುವ ಮೋದಿಯವರು ಮತ್ತದೇ ಮಾತಿನ ಜಾಲ ಸೃಷ್ಟಿಸುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ರಾಹುಲ್ ಅವರ ಕಪ್ಪು, ಬಿಳುಪಿನ ಕುರುಚಲು ಗಡ್ಡದಲ್ಲಿ ಅವರ ಪ್ರಬುದ್ಧ ರಾಜಕಾರಣದ ಕ್ಷಕಿರಣಗಳು ಹೊಮ್ಮುತ್ತಿದ್ದರೆ, ರಾಹುಲ್ ಗಾಂಧಿಯ ಇಮೇಜ್ ತಿರುಚುವ ಕಸರತ್ತನ್ನು ಬಿಜೆಪಿ ಮಾಡುತ್ತಿದೆ.

ಫುಟ್ಬಾಲ್ ದಂತಕತೆ ಪೀಲೆ ಬಗ್ಗೆ ಒಂದು ಪ್ರಶಂಸೆ ಇದೆ. ಸಾಕರ್ ಜಗತ್ತಿನ ಎಲ್ಲ ರೀತಿಯ ಆಧುನಿಕ ಪಟ್ಟುಗಳನ್ನು ಆವಿಷ್ಕಾರ ಮಾಡಿದ್ದು ಪೀಲೆ ಎನ್ನುತ್ತಾರೆ. ಸದ್ಯದ ಆಧುನಿಕ ರಾಜಕಾರಣದಲ್ಲಿ ಜನಮನ ಗೆಲ್ಲಲು ರಾಹುಲ್ ಗಾಂಧಿಯವರು ಹಲವು ಹೊಸಹೊಸ ಪಟ್ಟುಗಳನ್ನು ಆವಿಷ್ಕರಿಸುತ್ತಿದ್ದಾರೆ. ಸದನ ಮುಗಿದ ಮೇಲೆ ಕಟ್ಟಡ ಕಾರ್ಮಿಕರನ್ನು ಭೇಟಿಯಾಗಿ ಗುದ್ದಲಿ, ಮಟ್ಟಗೋಲು, ಕರ್ನೆಯನ್ನು ಹಿಡಿದು ಅವರ ಕಷ್ಟವನ್ನು ಆಲಿಸಿದ್ದಾರೆ. ಹಾಥರಸ್‌ಗೆ ಹೋಗಿ ಸಂತ್ರಸ್ತರನ್ನು ಕಂಡಿದ್ದಾರೆ. ರಾಹುಲ್ ನಡೆಸಿದ ಎರಡು ಯಾತ್ರೆಗಳು ಭಾರತೀಯ ರಾಜಕಾರಣದ ಹೊಸ ದಾಖಲೆ. ಈ ಹಿಂದೆ ಸದನದಲ್ಲೇ ಮೋದಿಯವರನ್ನು ಅಪ್ಪಿಕೊಂಡು ರಾಜಕೀಯದಲ್ಲಿ ಪ್ರೀತಿಯ ಅರ್ಥ ಹೊಮ್ಮಿಸಿದ್ದರು. ದ್ವೇಷಕ್ಕೆ ಬದಲಾಗಿ ಪ್ರೇಮ ಎಂದರು. ಮೋದಿಯವರು ಇವುಗಳನ್ನು ನೆನೆದು ಆಶ್ಚರ್ಯ ಮತ್ತು ಆಘಾತಗೊಳ್ಳದಿದ್ದರೆ ಸಾಕು. ಜನರ ಬಗ್ಗೆ ಕಾರುಣ್ಯವಿದ್ದರೆ ಮಾತ್ರ ರಾಹುಲ್ ಗಾಂಧಿಯವರಂತಹ ಮನಸ್ಸು ಬೆಳೆಯುತ್ತದೆ, ಜನರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಕೋವಿಡ್‌ನಂತಹ ಕಾಲದಲ್ಲೂ ನವಿಲಿನೊಂದಿಗೆ ಆಟವಾಡುವ ‘ಬಾಲಬುದ್ಧಿ’ ಪ್ರದರ್ಶನವಾಗುತ್ತದೆ.

ರಾಹುಲ್ ಈಗ ‘Man of The Politics’ (ರಾಜಕೀಯ ಸರ್ವಶ್ರೇಷ್ಠ) ಆಗಿ ಹೊಮ್ಮಿದ್ದಾರೆ. ಅವರ ನಡೆಯಲ್ಲಿ ಸೈದ್ಧಾಂತಿಕ ಹೋರಾಟದ ಸ್ಪಷ್ಟತೆ ಮತ್ತು ಬದ್ಧತೆ ಇರಡೂ ಇವೆ. ಬಿಜೆಪಿಯ ಮೂಲ ತಳಹದಿಯಾದ ಜಾತಿ ಅಸಮಾನತೆಯ ಸ್ಥೀರೀಕರಣ ಮತ್ತು ಮುಸ್ಲಿಮರನ್ನು ಹೊರಗಿಡುವ ಜನಾಂಗೀಯವಾದದ ಬುಡಕ್ಕೆ ನೇರವಾಗಿ ರಾಹುಲ್ ಕೈಹಾಕಿದ್ದಾರೆ. ಶಿವನ ಚಿತ್ರವನ್ನಿಡಿದು ಅವರು ಮಾಡಿದ ಅದ್ಭುತ ವಿಶ್ಲೇಷಣೆಯು ರಾಮ್ ಮನೋಹರ ಲೋಹಿಯಾರಂತಹ ಅಪ್ರತಿಮ ನಾಯಕನನ್ನು ನೆನಪಿಸುತ್ತಿದೆ. ಸೆಕ್ಯುಲರ್ ಭಾರತದ ಸದನದಲ್ಲಿ ‘ಜೈ ಶ್ರೀರಾಮ್’ ಎಂದು ಗದ್ದಲ ಎಬ್ಬಿಸುವಾಗ ರಾಹುಲ್ ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ‘ಜೈ ಸಂವಿಧಾನ’ ಎಂದು ಉತ್ತರಿಸಿದ್ದಾರೆ. ಈ ಬೆಳವಣಿಗೆಗಳು ಪ್ರಜಾಪ್ರಭುತ್ವ ಭಾರತದ ಪ್ರಬುದ್ಧ ರಾಜಕಾರಣದ ಉಳಿವಿಗೆ ಒಂದೊಂದೇ ಮೆಟ್ಟಿಲಿನಂತೆ ಭಾಸವಾಗುತ್ತಿವೆ. ಎಲ್ಲ ಅಪಪ್ರಚಾರಗಳನ್ನು ಮೆಟ್ಟಿ ರಾಹುಲ್ ತಮ್ಮ ಹೋರಾಟವನ್ನು ಮುನ್ನಡೆಸುತ್ತಾರೆಂಬ ಭರವಸೆಯೇ ಈ ದೇಶದ ಭವಿಷ್ಯ.

-ಪಿಪೀಲಿಕ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ಕೋವಿಡ್ ಕಾಲದಲ್ಲಿ ನವಿಲಿನ ಜೊತೆ ಆಡುವ ‘ಸುಳ್ಳು ಬುದ್ಧಿಯ ಬುಡ್ದಾ’ ಮುದುಕ….

  2. ನವಿಲಿನ ಜೊತೆ ಆಡುವ ‘ಸುಳ್ಳು ಬುದ್ಧಿಯ ಬುಡ್ದಾ’ ಮುದುಕ….

  3. ಇದನ್ನು ಬರೆದೆವ ಮತ್ತು ಅವನಿಗೆ ಕಾಮೆಂಟಲ್ಲಿ ಸಪೋರ್ಟ್ ಮಾಡಿದವರೆಲ್ಲ ಒಂದ್ಸಾರಿ ನೀವೆಷ್ಟು ಜನಕ್ಕೆ ಹುಟ್ಟಿದಿರಾ ಅಂತ ಆಲೋಚನೆ ಮಾಡೋ ಸಮಯ ಬಂದಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

Download Eedina App Android / iOS

X