18ನೇ ಲೋಕಸಭೆಯ ವಿಪಕ್ಷ ನಾಯಕನಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಯ್ಕೆಯಾಗಿರುವುದಾಗಿ ವರದಿಯಾಗಿದೆ.
ದೆಹಲಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್‌ನ ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ಈ ಸಭೆಯ ಬಳಿಕ ಮಾತನಾಡಿದ್ದ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, “ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳುವಂತೆ ಸರ್ವಾನುಮತದಿಂದ ರಾಹುಲ್ ಗಾಂಧಿಯವರಿಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದ್ದರು.
#WATCH | Congress general secretary KC Venugopal says “Congress MP Rahul Gandhi has been appointed as the LoP in the Lok Sabha..” pic.twitter.com/llhssszwAV
— ANI (@ANI) June 25, 2024
ಇಂದು(ಜೂನ್ 25) ಕೂಡ ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆಸಲಾಗಿತ್ತು. ಈ ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, “ಉತ್ತರ ಪ್ರದೇಶದ ರಾಯ್‌ಬರೇಲಿಯ ಸಂಸದರಾಗಿರುವ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ನೇಮಿಸಲಾಗಿದೆ. ಈ ಬಗ್ಗೆ ಹಂಗಾಮಿ ಸ್ಪೀಕರ್ ಭತೃಹರಿ ಮಹತಾಬ್ ಅವರಿಗೆ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದ್ದಾರೆ.
आज कांग्रेस अध्यक्ष श्री @kharge और श्री @RahulGandhi की मौजूदगी में INDIA गठबंधन के फ्लोर लीडर्स की बैठक हुई।
इस बैठक में INDIA गठबंधन के वरिष्ठ नेता मौजूद रहे।
📍 नई दिल्ली pic.twitter.com/wo8bAnPFrZ
— Congress (@INCIndia) June 25, 2024

‘ಪಪ್ಪು’ ಎಂದು ಗೇಲಿ ಮಾಡಿದರು. ‘ಮೂರ್ಖರ’ ನಾಯಕ ಎಂದು ಕರೆದರು. ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಿದರು. ಮನೆಯನ್ನು ಖಾಲಿ ಮಾಡಿಸಿದರು. ಹೆದರಲಿಲ್ಲ – ಜಗ್ಗಲಿಲ್ಲ – ಅಂಜಲಿಲ್ಲ !
ಭಾರತ್ ಜೋಡೋ ಯಾತ್ರೆ , ಭಾರತ್ ನ್ಯಾಯ ಯಾತ್ರೆ ಕೈಗೊಂಡರು. ದೇಶದ ಉದ್ದಗಲಕ್ಕೂ ಪ್ರೀತಿಯ ಸಂದೇಶವನ್ನು ಸಾರಿದರು. ಬಡವರನ್ನು ಅಪ್ಪಿದರು. ಕಷ್ಟದಲ್ಲಿರುವವರಿಗೆ ಧೈರ್ಯ ತುಂಬಿದರು. ಜನರನ್ನು ಒಂದುಗೂಡಿಸಿದರು. ಕೋಟ್ಯಂತರ ಜನರ ಹೃದಯವನ್ನು ಗೆದ್ದರು.
ಚುನಾವಣೆಯನ್ನು ಎದುರಿಸಿದರು. ಎರಡೂ ಕ್ಷೇತ್ರಗಳಲ್ಲಿ ಅದ್ಭುತವಾದ ವಿಜಯವನ್ನು ಸಾಧಿಸಿದರು. ರಾಯ್ ಬರೇಲಿಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪಪ್ಪು ಎಂದು ಕರೆಯಲ್ಪಟ್ಟ , ಮೂರ್ಖರ ನಾಯಕ ಎಂದು ಝರಿಯಲ್ಪಟ್ಟ ಜನ ನಾಯಕ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗುವ ಮೂಲಕ ತಾನು ಯಾರೆಂಬುದನ್ನು ಮೋದಿ ಹಾಗೂ ಅವರ ಅಂಧಾಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ.