- ಬರೊಡಾ, ಮದೀನಾಗಳಲ್ಲಿನ ಗ್ರಾಮಗಳ ರೈತರ ಜೊತೆ ರಾಹುಲ್ ಬಿತ್ತನೆ
- ಮೇನಲ್ಲಿ ದೆಹಲಿ-ಚಂಡೀಗಢ ಹೆದ್ದಾರಿಯಲ್ಲಿ ಚಾಲಕರ ಜೊತೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದ ರಾಹುಲ್
ಹರಿಯಾಣದ ಸೋನಿಪತ್ ಜಿಲ್ಲೆಗೆ ಶನಿವಾರ (ಜುಲೈ 8) ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿಢೀರ್ ಭೇಟಿ ನೀಡಿದ್ದು ಗ್ರಾಮಸ್ಥರನ್ನು ಭೇಟಿಯಾಗಿ ರೈತರೊಂದಿಗೆ ಸಂವಾದ ನಡೆಸಿದ್ದಾರೆ.
ಇದೇ ವೇಳೆ ರೈತರ ಜೊತೆ ಗದ್ದೆಯಲ್ಲಿ ಬಿತ್ತನೆ ಮಾಡುವ ಪ್ರಕ್ರಿಯೆಗೆ ಕೈಜೋಡಿಸಿದ್ದಾರೆ. ಗದ್ದೆಯಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ರಾಹುಲ್ ಗಾಂಧಿ ಅವರು ದೆಹಲಿಯಿಂದ ಶಿಮ್ಲಾಗೆ ತೆರಳುತ್ತಿದ್ದ ಮಾರ್ಗದಲ್ಲಿ ಬರೋಡಾದ ನಾನಾ ಗ್ರಾಮಗಳ ರೈತರನ್ನು ಭೇಟಿಯಾಗಿದ್ದಾರೆ.
ಸೋನಿಪತ್‌ಗೆ ಭೇಟಿ ನೀಡಿರುವ ರಾಹುಲ್ ಅವರು ಬರೋಡಾ ಮತ್ತು ಮದೀನಾಗಳಲ್ಲಿನ ಗದ್ದೆಗಳಲ್ಲಿ ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಗಬೀರ್ ಸಿಂಗ್ ಮಲಿಕ್ ತಿಳಿಸಿದ್ದಾರೆ.
ರಾಹುಲ್ ಅವರು ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವುದು, ಬಿತ್ತನೆ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈತರ ಜತೆ ಸೇರಿ ರಾಹುಲ್ ಅವರು ಬಿತ್ತನೆ ಹಾಗೂ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವ ಫೋಟೋಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಒಂದೇ ದಿನ 5 ಕೋಟಿ ದಾಟಿದ ಮೆಟಾದ ‘ಥ್ರೆಡ್ಸ್’ ಬಳಕೆದಾರರು | ಟ್ವಿಟರ್‌ನಿಂದ ಬೆದರಿಕೆ
ಕಳೆದ ಮೇನಲ್ಲಿ ಟ್ರಕ್ ಚಾಲಕರ ಸಮಸ್ಯೆಗಳನ್ನು ಅರಿತುಕೊಳ್ಳಲು ರಾಹುಲ್ ಗಾಂಧಿ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು.
ಭಾರತ್ ಜೋಡೋ ಯಾತ್ರೆ ವೇಳೆಯೂ ರಾಹುಲ್ ಅವರು ಮಾರ್ಗಮಧ್ಯದಲ್ಲಿ ಅನೇಕ ಜನರ ಜತೆ ಸಂವಾದ ನಡೆಸಿದ್ದರು.