ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
“ರಾಹುಲ್ ಗಾಂಧಿ ಸಾಗುತ್ತಿದ್ದ ಬಸ್ ಅಡ್ಡಗಟ್ಟಿ, ಅವರ ಮೇಲೆ ದಾಳಿ ನಡೆಸಲು ಬಿಜೆಪಿಗರು ಮುಂದಾಗಿದ್ದಾರೆ. ಯಾತ್ರೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
“ಅಸ್ಸಾಂನ ಶಂಕರ ದೇವಾಲಯಕ್ಕೆ ರಾಹುಲ್ ಗಾಂಧಿಗೆ ಪ್ರವೇಶ ನಿರಾಕರಿಸಲಾಗಿದೆ. ನಮ್ಮ ನ್ಯಾಯ ಯಾತ್ರೆಯ ಉದ್ದಕ್ಕೂ ಅಸ್ಸಾಂ ಮುಖ್ಯಮಂತ್ರಿ ತಮ್ಮ ಗೂಂಡಾಗಳ ಮೂಲಕ ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನ ಶಾಂತಿಯುತ ಯಾತ್ರೆಗೆ ಅಡ್ಡಿಪಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಪಾರಸಮಲ್ ಸುಖಾಣ, ಕೆ.ಶಾಂತಪ್ಪ, ಜಯಣ್ಣ, ಮಹ್ಮದ್ ಶಾಲಂ, ಅಮರೇಗೌಡ ಹಂಚಿನಾಳ, ಬಸವರಾಜ ಪಾಟೀಲ್ ದರೂರು, ಆಂಜನೆಯ್ಯ ಕುರುಬದೊಡ್ಡಿ, ಜಿ.ಶಿವಮೂರ್ತಿ, ಜಯಂತರಾವ್ ಪತಂಗೆ, ಶ್ರೀನಿವಾಸ ಪೊತಗಲ್, ಅರುಣ್ ದೋತರಬಂಡಿ, ಜಿ.ರಮೇಶ ಯಾದವ್, ನಾಗವೇಣ , ರಾಣ ರಿಚರ್ಡ್, ಶಶಿಕಲಾ ಭೀಮರಾಯ, ನಿರ್ಮಲ ಬೆಣ್ಣೆ, ತಿಮ್ಮಪ್ಪಸ್ವಾಮಿ, ಲಕ್ಷ್ಮಿರೆಡ್ಡಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ : ಹಫೀಜುಲ್ಲ