- ಬಿಎಸ್ಪಿಯ ಮುಸ್ಲಿಂ ಸಂಸದ ದಾನಿಶ್ ಅಲಿಯನ್ನು ಭಯೋತ್ಪಾದಕ ಎಂದು ಕರೆದಿದ್ದ ರಮೇಶ್ ಬಿಧುರಿ
- ನನ್ನಂತಹ ಚುನಾಯಿತ ಸದಸ್ಯನ ಸ್ಥಿತಿ ಹೀಗಾದರೆ ಸಾಮಾನ್ಯ ವ್ಯಕ್ತಿಯ ಸ್ಥಿತಿ ಏನು? ದಾನಿಶ್ ಅಲಿ
ಬಿಎಸ್ಪಿಯ ಮುಸ್ಲಿಂ ಸಂಸದ ದಾನಿಶ್ ಅಲಿಯನ್ನು ಬಿಜೆಪಿಯ ಸಂಸದ ರಮೇಶ್ ಬಿಧುರಿ ಸಂಸತ್ತಿನ ವಿಶೇಷ ಅಧಿವೇಶನದಲ್ಲೇ ‘ಭಯೋತ್ಪಾದಕ’ ಎಂದು ಕರೆದು, ಹೀಯಾಳಿಸಿರುವ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎಬ್ಬಿಸಿದೆ.
ಬಿಜೆಪಿಯ ದೆಹಲಿ ಸಂಸದನಾಗಿರುವ ರಮೇಶ್ ಬಿಧುರಿ ಅವರು ಲೋಕಸಭೆಯಲ್ಲಿ ತಮ್ಮ ಮಾತಿನ ವೇಳೆ ಸಂಸತ್ತಿನ ಸಹೋದ್ಯೋಗಿ ಬಹುಜನ ಸಮಾಜ ಪಕ್ಷದ ದಾನಿಶ್ ಅಲಿ ಅವರನ್ನು “ಯೇ ಉಗ್ರವಾದಿ, ಯೇ ಆತಂಕ್ವಾದಿ, ಮುಲ್ಲಾ ಆತಂಕವಾದಿ, ಭರ್ವಾ (ವೇಶ್ಯಾವಾಟಿಕೆ ದಂಧೆ ನಡೆಸುವವ) ಮತ್ತು ಕತ್ವಾ (ಮುಂಜಿ ಮಾಡಿಸಿದವ)” ಎಂದು ಹಿಂದಿಯಲ್ಲಿ ಉಲ್ಲೇಖಿಸಿ, ಅವಮಾನಗೈದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
An MP from India’s ruling BJP has caused outrage by using a series of racist slurs against Muslim MP Danish Ali during a debate in parliament about India’s moon mission ⤵️ pic.twitter.com/UL2iT6HWZP
— Al Jazeera English (@AJEnglish) September 22, 2023
ಹೊಸ ಸಂಸತ್ನ ಮೊದಲ ಅಧಿವೇಶನದಲ್ಲೇ ನಡೆದ ಈ ಬೆಳವಣಿಗೆ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ಅಲ್-ಜಝೀರಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಇದನ್ನು ವರದಿ ಮಾಡಿದೆ.
ಇನ್ನು ಈ ಘಟನೆಯ ಬಗ್ಗೆ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿರುವ ದಾನಿಶ್ ಅಲಿ, “ನನ್ನಂತಹ ಚುನಾಯಿತ ಜನಪ್ರತಿನಿಧಿಯ ಸ್ಥಿತಿಯೇ ಹೀಗಿರುವಾಗ ಸಾಮಾನ್ಯ ವ್ಯಕ್ತಿಯ ಸ್ಥಿತಿ ಏನಾಗಬಹುದು? ಸ್ಪೀಕರ್ ವಿಚಾರಣೆ ನಡೆಸಿ ನನಗೆ ನ್ಯಾಯ ಸಿಗುತ್ತದೆ ಎಂದು ನಂಬುತ್ತೇನೆ. ಒಂದು ವೇಳೆ ನ್ಯಾಯ ಸಿಗದೇ ಇದ್ದರೆ ನಾನು ಸಂಸತ್ತನ್ನು ತೊರೆಯಲು ಯೋಚಿಸುತ್ತಿದ್ದೇನೆ. ಏಕೆಂದರೆ ಇದನ್ನು ನನಗೆ ಸಹಿಸಲಾಗುತ್ತಿಲ್ಲ” ಎಂದು ತಿಳಿಸಿದ್ದಾರೆ.
#WATCH | On remarks by BJP MP Ramesh Bidhuri, BSP MP Danish Ali says, "I sent my letter to the office of Lok Sabha Speaker and I am confident that Lok Sabha Speaker will take cognizance of the incident and will take appropriate action. I have given notice. All things are on… pic.twitter.com/tFANw97Uv3
— ANI (@ANI) September 22, 2023
“ನಾನು ಈಗಾಗಲೇ ಲೋಕಸಭಾ ಸ್ಪೀಕರ್ ಅವರಿಗೆ ನೀಡಿರುವ ಪತ್ರದಲ್ಲಿ ಬಿಜೆಪಿಯ ಸಂಸದ ರಮೇಶ್ ಬಿಧುರಿ ನೀಡಿರುವ ಹೇಳಿಕೆಯನ್ನು ಕಡತದಿಂದ ತೆಗೆಯಲು ಹಾಗೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದೇನೆ. ಈ ಬಗ್ಗೆ ಎಲ್ಲ ದಾಖಲೆಗಳನ್ನು ನೀಡಿದ್ದೇವೆ. ಮೊದಲ ಬಾರಿಗೆ ದೇಶದ ಸಂಸತ್ನ ಇತಿಹಾಸದಲ್ಲಿ ಚುನಾಯಿತ ಸಂಸದನೋರ್ವನಿಗೆ ಈ ರೀತಿಯ ಭಾಷೆಯನ್ನು ಬಳಸಲಾಗಿದೆ. ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ” ಎಂದು ತಮಗಾದ ನೋವನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ.
Shri @ombirlakota ji, please take it seriously as this is the first attack on parliamentary democracy in the new Parliament building. Shri @rameshbidhuri must be punished as per the rules to save the dignity of the House. pic.twitter.com/YWnPjc7jbR
— Kunwar Danish Ali (@KDanishAli) September 22, 2023
“ಬಿಜೆಪಿ ಹೈಕಮಾಂಡ್ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುತ್ತಾ ಅಥವಾ ಭಡ್ತಿ ನೀಡಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರಾ ಎಂದು ನೋಡಬೇಕಿದೆ. ಏಕೆಂದರೆ ಈ ರೀತಿ ದ್ವೇಷ ಹರಡುವುದು ಅವರ ನಡುವೆ ಪೈಪೋಟಿಯಾಗಿ ಪರಿಣಮಿಸಿದೆ. ಬಿಜೆಪಿ ನಾಯಕರು ಹೊರಗೆ ಮಾತ್ರವಲ್ಲದೆ ಸಂಸತ್ತಿನ ಒಳಗೂ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರೆ ಏನರ್ಥ?” ಎಂದು ಬಿಎಸ್ಪಿಯ ಸಂಸದ ದಾನಿಶ್ ಅಲಿ ಕೇಳಿದರು.
Abusing Muslims, OBCs an integral part of BJP culture – most now see nothing wrong with it. @narendramodi has reduced Indian Muslims to living in such a state of fear in their own land that they grin & bear everything.
— Mahua Moitra (@MahuaMoitra) September 22, 2023
Sorry but I’m calling this out. Ma Kali holds my spine. pic.twitter.com/3NAqi5FWPy
ಇದು ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚಳವಾಗುತ್ತಿರುವ ದ್ವೇಷ ಭಾಷಣಕ್ಕೆ ಸ್ಪಷ್ಟ ಉದಾಹರಣೆ ಎಂದಿರುವ ಹಲವು ನೆಟ್ಟಿಗರು, ಬಿಜೆಪಿ ಸಂಸದನ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಅಧಿವೇಶನದಲ್ಲೇ ಸಂಸದ ದಾನಿಶ್ ಅಲಿಯನ್ನು ‘ಭಯೋತ್ಪಾದಕ’ ಎಂದ ಬಿಜೆಪಿ ಸಂಸದ ರಮೇಶ್ ಬಿಧುರಿ!
ಈ ನಡುವೆ #ArrestRameshBidhuri ಎಂಬ ಹ್ಯಾಷ್ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿದ್ದು, ಬಿಜೆಪಿ ಸಂಸದನನ್ನು ಬಂಧಿಸಿ, ಸಂಸದ ಸ್ಥಾನದಿಂದ ಉಚ್ಛಾಟಿಸುವಂತೆ ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಚಂದ್ರಯಾನದ ಯಶಸ್ಸು ಕುರಿತು ಚರ್ಚೆಯ ಸಂದರ್ಭದಲ್ಲಿ ರಮೇಶ್ ಬಿಧುರಿ ಆಕ್ಷೇಪಾರ್ಹ ಪದಗಳನ್ನು ಬಳಸಿರುವ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
#ArrestRameshBidhuri for spewing hateful and for using harmful slurs at a Muslim MP inside the Parliament. pic.twitter.com/Wpm30zGWF7
— Mohammed Zubair (@zoo_bear) September 22, 2023
“ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿ. ರಾಜನಾಥ್ ಸಿಂಗ್ ಅವರ ಕ್ಷಮೆಯಾಚನೆ ಸ್ವೀಕಾರಾರ್ಹವಲ್ಲ ಮತ್ತು ಅರೆಮನಸ್ಸಿನದು. ಇದು ಸಂಸತ್ತಿಗೆ ಮಾಡಿದ ಅವಮಾನ. ಇದು ಅಮಾನತುಗೊಳಿಸಬಹುದಾದ ಸ್ಪಷ್ಟ ಪ್ರಕರಣ. ಬಿಧುರಿ ಹೇಳಿಕೆಯಿಂದ ಪ್ರತಿಯೊಬ್ಬ ಭಾರತೀಯನಿಗೂ ಅವಮಾನವಾಗಿದೆ” ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ನಡುವೆ ಸಂಸದ ರಮೇಶ್ ಬಿಧುರಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ.