‘ಜಾತಿಗಣತಿಯಿಂದ ದೇಶದ ಏಕತೆಗೆ ಅಪಾಯ’ ಎಂದ ಆರ್‌ಎಸ್‌ಎಸ್‌!

Date:

Advertisements

2024ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಜಾತಿಗಣತಿಯ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಈ ನಡುವೆ ಜಾತಿಗಣತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್‌, “ಜಾತಿಗಣತಿಯಿಂದ ದೇಶದ ಏಕತೆಗೆ ಅಪಾಯವಿದೆ” ಎಂದು ತಿಳಿಸಿದೆ.

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದರ್ಭ ಸಹ ಸಂಘಚಾಲಕ ಶ್ರೀಧರ ಗಾಡ್ಗೆ, “ಜಾತಿ ಗಣತಿಯಿಂದ ಏನನ್ನೂ ಸಾಧಿಸಲಾಗದು. ಅದರ ಅವಶ್ಯಕತೆಯೂ ಇಲ್ಲ. ಅದರಿಂದ ಯಾವ ಲಾಭವೂ ಇಲ್ಲ. ನಮಗೆ ಅದರಿಂದ ಹಾನಿ ಮಾತ್ರ ಕಾಣುತ್ತಿದೆ” ಎಂದು ಹೇಳಿದ್ದಾರೆ.

“ಜಾತಿ ಆಧಾರಿತ ಜನಗಣತಿಯಿಂದ ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ದತ್ತಾಂಶ ಒದಗಿಸಬಹುದು. ಇಂತಹ ಕಸರತ್ತು, ರಾಜಕೀಯವಾಗಿ ಕೆಲವು ವ್ಯಕ್ತಿಗಳಿಗೆ ಮಾತ್ರ ಲಾಭವಾಗಬಹುದು. ಆದರೆ, ಇದು ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ಒಳಿತಲ್ಲ” ಎಂದು ತಿಳಿಸಿದರು.

Advertisements

“ನಮಗೆ ಜಾತಿ ಗಣತಿಯ ಅವಶ್ಯಕತೆ ಇಲ್ಲವೆನಿಸುತ್ತದೆ. ಇದಕ್ಕೆ ಬೇರೆ ಕಾರಣವೇನಿಲ್ಲ, ಜಾತಿ ಆಧಾರಿತ ಸಮೀಕ್ಷೆಯಿಂದ ನಾವು ಏನು ಸಾಧಿಸಬಹುದು? ಇದು ತಪ್ಪು. ಅಸಮಾನತೆ, ದ್ವೇಷ, ಜಗಳ ಇರಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು” ಎಂದು ಶ್ರೀಧರ ಗಾಡ್ಗೆ ತಿಳಿಸಿದರು.

ಅಮಿತ್ ಶಾ ಹೇಳಿಕೆಯನ್ನು ಪ್ರಸ್ತಾಪಿಸಿದ ಗಾಡ್ಗೆ, “ರಾಜಕೀಯ ಪಕ್ಷಗಳು ತಮ್ಮದೇ ಆದ ನಿಲವು ಹೊಂದಿರಬಹುದು. ಆದರೆ ಆರ್‍‌ಎಸ್‌ಎಸ್‌ ಜಾತಿ ಆಧರಿತ ಗಣತಿಯನ್ನು ಖಂಡತುಂಡವಾಗಿ ವಿರೋಧಿಸುತ್ತದೆ. ಆರ್‍‌ಎಸ್‌ಎಸ್‌ ಸಾಮಾಜಿಕ ಸಮಾನತೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ನಮ್ಮ ದೇಶದಲ್ಲಿ ಜಾತಿ ಹೆಸರಿನಲ್ಲಿ ಒಡಕು ಮೂಡಿಸಲಾಗುತ್ತದೆ. ಸಮಾಜದಲ್ಲಿ ಜಾತಿ ಎನ್ನುವುದು ಅಸಮಾನತೆಯ ಮೂಲವಾದರೆ, ಜಾತಿಗಣತಿಯಂಥ ಕ್ರಮಗಳಿಂದ ಇದು ಮತ್ತಷ್ಟು ಉಲ್ಬಣಗೊಳ್ಳಲಿದೆ ಎನ್ನುವುದು ನಮ್ಮ ಸ್ಪಷ್ಟ ನಿಲುವು” ಎಂದು ಆರ್‌ಎಸ್‌ಎಸ್‌ ಮುಖಂಡ ಶ್ರೀಧರ ಗಾಡ್ಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನೆ ಶಾಸಕರು ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಮಂಗಳವಾರ ಭೇಟಿ ನೀಡಿ, ಸಭೆ ನಡೆಸಿದ ಬಳಿಕ ಈ ಹೇಳಿಕೆಯನ್ನು ಶ್ರೀಧರ ಗಾಡ್ಗೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಜಾತಿ ಗಣತಿಯಿಂದ ದೇಶಕ್ಕೆ ಯಾವ ಅಪಾಯವೂ ಇಲ್ಲ ಅಪಾಯ ಇರುವುದು ಸಂಘದ ಮನುವಾದಿ ಸಿದ್ಧಾಂತಗಳಿಗೆ,,, ಬಹುಸಂಖ್ಯೆಯ ದಲಿತ ಹಿಂದುಳಿದ ಮತ್ತು ತಳವರ್ಗದವರು ಜನಸಂಖ್ಯೆ ಅನುಪಾತದಲ್ಲಿ ರಾಜಕೀಯ ಅಧಿಕಾರ ಮತ್ತು ಸಂಪತ್ತಿನ ಹಂಚಿಕೆ ಬೇಡಿಕೆ ಸುರುವಾದರೆ,, ಇಲ್ಲಿಯವರೆಗೆ ಈ ವರ್ಗಗಳ ಮೇಲಿದ್ದ ತಮ್ಮ ನಿಯಂತ್ರಣ ಎಲ್ಲಿ ಕೈತಪ್ಪುವುದೋ ಅನ್ನುವ ಭಯ,,, ದೇಶದ ಒಗ್ಗಟ್ಟು ಅರ್ಥವೇನು,,ಬಲಿಷ್ಠ ಸಮುದಾಯಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಎಲ್ಲಾ ಅಧಿಕಾರ ಸಂಪತ್ತು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ ಅದ್ಕೆ ಸಂಚಕಾರ ಬರುವ ಭಯ,,ಸಂಘ ಯಾವಾಗಲೂ ಮೇಲ್ವರ್ಗದವರ ಪರವಾಗಿ ಇರುವುದು ಗುಟ್ಟೇನಲ್ಲ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X