ಆರ್‌ಎಸ್‌ಎಸ್‌ನಷ್ಟು ಭ್ರಷ್ಟರು ಯಾರೂ ಇಲ್ಲ. ಸುಮ್ಮನೆ ದೇಶಪ್ರೇಮ ಅಂತ ಹೇಳ್ತಾರೆ. ಅವರು ಅಷ್ಟೇ ಭ್ರಷ್ಟರು ಕೂಡ. ಅಂತ ಅಡ್ವಾಣಿಯನ್ನೇ ಹೊಡೆದು, ಕೆಳಗೆ ಹಾಕಿದ್ರು ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿದ್ದ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಎಸ್‌ಎಸ್ ಕುರಿತು ಚರ್ಚೆ ಆಗುವಂತೆ ಮಾಡಿದೆ.
ಈ ಹಿಂದೆ, ಗೌಪ್ಯ ಸಭೆಯೊಂದರಲ್ಲಿ ಸುರೇಶ್ ಗೌಡ ಮಾತನಾಡಿದ್ದರು. ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದನ್ನು ಸಭೆಯಲ್ಲಿದ್ದವರೇ ವಿಡಿಯೋ ಮಾಡಿ, ಹರಿಬಿಟ್ಟಿದ್ದರು. ಆ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ವಿಡಿಯೋದಲ್ಲಿ, “ಯಡಿಯೂರಪ್ಪಗೆ ಹೈಕಮಾಂಡ್ ಹೊಡೆದಿದ್ದು ಯಾಕೆ? ಬಲಿಷ್ಟ ಆದ ತಕ್ಷಣ ಹೈಕಮಾಂಡ್‌ಗೆ ಗೌರವ ಕೊಡಲಿಲ್ಲ ಅಂದ್ರೆ ಯಾರು ಅಂತನೂ ನೋಡದೆ ಹೊಡೆದು ಕಳೆಗೆ ಹಾಕ್ತಾರೆ. ಅಂತ ಅಡ್ವಾಣಿಗೆ ಹೊಡೆದರು ಆರ್‌ಎಸ್‌ಎಸ್‌ನವರು. ಇದು ಕಾಮನ್ ಫೆನಾಮಿನ, ಸಂಘಟನೆಯಲ್ಲಿ ಯಾವಾಗ ಒಬ್ಬ ನಾನು ಅಂತ ಮುಂದೆ ಹೋಗ್ತಾನೆ, ಅವನನ್ನು ಹೊಡೆದು ಕೆಳಗೆ ಹಾಕ್ತಾರೆ. ನಾನು ಅಂತ ಅನ್ನೋಕೆ ಯಾವಾಗಲೂ ಬಿಡಲ್ಲ” ಎಂದು ಸುರೇಶ್ ಗೌಡ ಹೇಳಿದ್ದಾರೆ.
“ಆರ್‌ಎಸ್‌ಎಸ್‌ನಷ್ಟು ಕರಪ್ಟು (ಭ್ರಷ್ಟರು) ಯಾರೂ ಇಲ್ಲ. ಸುಮ್ನೆ ಹೇಳ್ತಾರೆ ದೇಶಪ್ರೇಮ ಅಂತ. ಅವರು ಅಷ್ಟೇ ಭ್ರಷ್ಟರು. ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ನವರು ನಂಬರ್‌ಗಳನ್ನೇ ತೆಗಿರೀ. ಬೇಕಿದ್ರೆ ಯಡಿಯೂರಪ್ಪನೇ ಹೆಸರುಗಳ ಪಟ್ಟಿ ಕೊಡ್ತಾರೆ. ಜಮೀನ್ ಯಾರಿಗೆ ಎಷ್ಟ್ ಕೊಟ್ಟೆ, ಹೊಸದಿಗಂತಕ್ಕೆ ಎಷ್ಟ್ ಕೊಟ್ಟೆ ಅಂತ ಯಡಿಯೂರಪ್ಪ ಹೇಳ್ತಾರೆ. ಹೊಸದಿಗಂತಕ್ಕೆ ಯಡಿಯೂರಪ್ಪ 5 ಕೋಟಿ ರೂ. ಕೊಟ್ಟಿದ್ದಾರೆ” ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಬಿಜೆಪಿ ಶಾಸಕ ಸುರೇಶ ಗೌಡರು ಆರ್ ಎಸ್ ಎಸ್ ನ ಗುಪ್ತಸೂಚಿಗಳ ಬಗ್ಗೆ ಬಾಯ್ತಪ್ಪಿ ಆಡಿದ ಮಾತುಗಳಲ್ಲ, ಬಾಯ್ತೆರೆದು ಮಾತಾಡಿದ್ದಾರೆ.
— Hariprasad.B.K. (@HariprasadBK2) April 2, 2025
ಸಂಘ ಪರಿವಾರದ ಕರ್ಮಕಾಂಡದ ಯಶೋಗಾಥೆಯ ಬಗ್ಗೆ ಬಿಜೆಪಿ ಶಾಸಕ ಸುರೇಶ ಗೌಡ ಒಂದೊಂದು ಆಣಿಮುತ್ತುಗಳನ್ನು ಉದುರಿಸಿದ್ದಾರೆ.
ಶೂದ್ರರು,ಹಿಂದುಳಿದವರು,ಶೋಷಿತ ಸಮುದಾಯದ ಬಿಜೆಪಿ ಪಕ್ಷದ್ದೇ ರಾಜಕೀಯ ನಾಯಕರನ್ನು… pic.twitter.com/TjSVngMmw4
ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು ಈ ವಿಡಿಯೋ ಹಂಚಿಕೊಂಡಿದ್ದು, “ಬಿಜೆಪಿ ಶಾಸಕ ಸುರೇಶ ಗೌಡರು ಆರ್ ಎಸ್ ಎಸ್ ನ ಗುಪ್ತಸೂಚಿಗಳ ಬಗ್ಗೆ ಬಾಯ್ತಪ್ಪಿ ಆಡಿದ ಮಾತುಗಳಲ್ಲ, ಬಾಯ್ತೆರೆದು ಮಾತಾಡಿದ್ದಾರೆ. ಸಂಘ ಪರಿವಾರದ ಕರ್ಮಕಾಂಡದ ಯಶೋಗಾಥೆಯ ಬಗ್ಗೆ ಬಿಜೆಪಿ ಶಾಸಕ ಸುರೇಶ ಗೌಡ ಒಂದೊಂದು ಆಣಿಮುತ್ತುಗಳನ್ನು ಉದುರಿಸಿದ್ದಾರೆ. ಶೂದ್ರರು,ಹಿಂದುಳಿದವರು,ಶೋಷಿತ ಸಮುದಾಯದ ಬಿಜೆಪಿ ಪಕ್ಷದ್ದೇ ರಾಜಕೀಯ ನಾಯಕರನ್ನು ಬುಡಮೇಲು ಮಾಡಿದ ಕುತಂತ್ರಗಾರಿಕೆಯ ಪರಂಪರೆಯನ್ನು ಹಾಡಿ ಹೊಗಳಿದ್ದಾರೆ. ಇಡೀ ಜಗತ್ತಿನಲ್ಲೇ ಶ್ರೀಮಂತ ಸಂಘವಾಗಲು ಆರ್ ಎಸ್ ಎಸ್ ತಾನು ಮಾಡುವ ಭ್ರಷ್ಟಾಚಾರಗಳಿಗೆ ಎಲ್ಲೇ ಇಲ್ಲ. ಬಿಜೆಪಿ ಪಕ್ಷದ ನಾಯಕರೇ ಸಂಘ ಪರಿವಾರದ ಅಸಲಿ ಮುಖವಾಡಗಳನ್ನು ಬಿಚ್ಚಿಡಬೇಕು. ಸತ್ಯ ಕಹಿ ಆಗಿರುತ್ತೆ, ಸ್ವಲ್ಪ ಅರಗಿಸಿಕೊಳ್ಳಬೇಕು” ಎಂದಿದ್ದಾರೆ.