ಭಾಷಾ ಪ್ರಚಾರ ಸಮಿತಿಯ ಅಧ್ಯಕ್ಷ RSS ಅನುಯಾಯಿ: ಕೇಂದ್ರ ವಿವಿ ಉಪಕುಲಪತಿಗಿಂತ ಹೆಚ್ಚಿನ ವೇತನ

Date:

Advertisements
2021ರ ನವೆಂಬರ್ 15ರ ಸಚಿವಾಲಯದ ಆದೇಶದಲ್ಲಿ ಗೌರವಾರ್ಥ ಸದಸ್ಯರು ಎಂದಿದ್ದು, 2023ರ ಡಿಸೆಂಬರ್‌ನಿಂದ ಸಚಿವಾಲಯವು ಶಾಸ್ತ್ರಿ ಅವರಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಪಾವತಿಸಲು ಪ್ರಾರಂಭಿಸಿದೆ.

ಕೇಂದ್ರವು 2021ರಲ್ಲಿ ಆರ್‌ಎಸ್‌ಎಸ್ ಅನುಯಾಯಿ ಚಾಮು ಕೃಷ್ಣಶಾಸ್ತ್ರಿ ಅವರನ್ನು ಭಾಷಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ. ಅವರ ಬಯೋ-ಡೇಟಾ ಕೋರಿ ‘ಟೆಲಿಗ್ರಾಫ್’ ಪತ್ರಿಕೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದು ಈ ಮಾಹಿತಿ ನೀಡಲು ಸಚಿವಾಲಯ ನಿರಾಕರಿಸಿದೆ ಎಂದು ವರದಿಯಾಗಿದೆ.

ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಮಾರ್ಗಗಳನ್ನು ಸೂಚಿಸಲು ಶಿಕ್ಷಣ ಸಚಿವಾಲಯವು 2021ರ ನವೆಂಬರ್‌ನಲ್ಲಿ ಭಾರತೀಯ ಭಾಷಾ ಸಮಿತಿ (ಬಿಬಿಎಸ್) ಸ್ಥಾಪಿಸಿದೆ. ಅದರ ಅಧ್ಯಕ್ಷರನ್ನಾಗಿ ಕರಾವಳಿ ಮೂಲದ ಬಂಟ್ವಾಳದ ಚಕ್ರಕೋಡಿ ಮೂಡಂಬೈಲು ಕೃಷ್ಣಶಾಸ್ತ್ರಿ ಎಂಬುವವರನ್ನು ನೇಮಿಸಲಾಗಿದೆ. ಇವರು 2023ರ ಡಿಸೆಂಬರ್‌ನಿಂದ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿಗಿಂತ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದಾರೆ.

ಇದನ್ನು ಓದಿದ್ದೀರಾ? ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಆರ್‌ಎಸ್‌ಎಸ್‌ನವರಿಂದ: ಸಿದ್ದರಾಮಯ್ಯ ಕಿಡಿ

Advertisements

ಇನ್ನು ವೇತನವನ್ನು ನಿರ್ಧರಿಸುವ ಸೂತ್ರವನ್ನು ಒದಗಿಸುವ ವಿನಂತಿಯನ್ನೂ ಸಚಿವಾಲಯವು ನಿರ್ಲಕ್ಷಿಸಿದೆ. ಕೃ‍ಷ್ಣಶಾಸ್ತ್ರಿ ಅವರು ಆರ್‌ಎಸ್‌ಎಸ್ -ಸಂಯೋಜಿತ ಸಂಸ್ಕೃತ ಭಾರತಿಯ ಸದಸ್ಯರಾಗಿದ್ದಾರೆ. ಇದು ಮಕ್ಕಳ ಶಿಬಿರಗಳನ್ನು ನಡೆಸುತ್ತದೆ. ಈ ಮೂಲಕ ಮಕ್ಕಳಿಗೆ ತಮ್ಮ ಸಿದ್ಧಾಂತದ ಪ್ರಚಾರ ಮಾಡುತ್ತದೆ.

ಬಿಬಿಎಸ್ ಇತರ ಇಬ್ಬರು ಸದಸ್ಯರನ್ನು ಹೊಂದಿದೆ. ಇಬ್ಬರೂ ಪದನಿಮಿತ್ತ: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನಿರ್ದೇಶಕರು ಮತ್ತು ನವದೆಹಲಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾರೆ.

ಎಲ್ಲಾ ಸದಸ್ಯರು ಗೌರವಾರ್ಥವಾಗಿ ಕೆಲಸ ಮಾಡುತ್ತಾರೆ ಎಂದು ಬಿಬಿಎಸ್ ಅನ್ನು ಸ್ಥಾಪಿಸಿದ 2021ರ ನವೆಂಬರ್ 15ರ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಸಚಿವಾಲಯವು 2023ರ ಡಿಸೆಂಬರ್‌ನಿಂದ ಶಾಸ್ತ್ರಿ ಅವರಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಪಾವತಿಸಲು ಪ್ರಾರಂಭಿಸಿದೆ. ಕೇಂದ್ರ ವಿಶ್ವವಿದ್ಯಾಲಯದ ಉಪ ಕುಲಪತಿ ಮಾಸಿಕ 2.1 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ. ಇದಕ್ಕಿಂತ ಅಧಿಕ ವೇತನವನ್ನು ಈ ಆರ್‌ಎಸ್ಎಸ್‌ನ ಅನುಯಾಯಿ ಪಡೆಯುತ್ತಿದ್ದಾರೆ.

ಇನ್ನು ಆರ್‌ಟಿಐ ಅರ್ಜಿಗೆ ದೊರೆತ ಪ್ರತಿಕ್ರಿಯೆಯಲ್ಲಿ ಕೃಷ್ಣಶಾಸ್ತ್ರಿ ಅವರಿಗೆ ಸರ್ಕಾರಿ ವಸತಿ ಒದಗಿಸುವ ಸಚಿವಾಲಯದ ನಿರ್ಧಾರವೂ ಬಹಿರಂಗವಾಗಿದೆ. ಬಿಬಿಎಸ್ ಅನ್ನು ಸ್ಥಾಪಿಸುವ ನವೆಂಬರ್ 15ರ ಆದೇಶ ಮತ್ತು 2023ರ ಡಿಸೆಂಬರ್ 28ರ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸುವ, ಅವರಿಗೆ 2.5 ಲಕ್ಷ ರೂಪಾಯಿ ಮಾಸಿಕ ಪಾವತಿಯನ್ನು ಘೋಷಿಸುವ ಆದೇಶದ ಪ್ರತಿಯನ್ನು ಸಚಿವಾಲಯವು ಒದಗಿಸಿದೆ.

ಇದನ್ನು ಓದಿದ್ದೀರಾ? ಬಿಜೆಪಿಯಿಂದ ಮತ್ತೊಬ್ಬ ಯೋಗಿಗೆ ಸಿಎಂ ಪಟ್ಟ? ಯಾರೀತ ಬಾಬಾ ಬಾಲಕನಾಥ?

ಆದರೆ ಕೃಷ್ಣಶಾಸ್ತ್ರಿ ಅವರ ಬಯೋ-ಡೇಟಾದ ಪ್ರತಿಯನ್ನು ಒದಗಿಸಲು ಅಥವಾ ಅವರ ವೇತನವನ್ನು ಯಾವ ಆಧಾರದ ಮೇಲೆ ನಿಗದಿಪಡಿಸಲಾಗಿದೆ ಎಂಬುದನ್ನು ಸಚಿವಾಲಯ ವಿವರಿಸಿಲ್ಲ. ಬಯೋ-ಡೇಟಾದ ಪ್ರತಿ ಮತ್ತು ಇತರ ವಿವರಗಳನ್ನು ಕೋರಿ ಮಾಧ್ಯಮ ಮೇಲ್ಮನವಿ ಸಲ್ಲಿಸಿದ್ದು, ಈ ಮಾಹಿತಿ ಲಭ್ಯವಿಲ್ಲ ಎಂದು ಮೇಲ್ಮನವಿ ಪ್ರಾಧಿಕಾರದ ಸುಮನ್ ದೀಕ್ಷಿತ್ ಉತ್ತರಿಸಿದ್ದಾರೆ.

ಕೃಷ್ಣಶಾಸ್ತ್ರಿ ಅವರ ಸಂಶೋಧನಾ ಪ್ರಕಟಣೆಗಳ ವಿವರಗಳನ್ನು ಮತ್ತು ಅವರು ತಮ್ಮ ಬಯೋ-ಡೇಟಾವನ್ನು ಸರ್ಕಾರಕ್ಕೆ ಒದಗಿಸಿದ್ದಾರೆಯೇ ಎಂದು ಪ್ರಶ್ನಿಸಿ ಕೃಷ್ಣಶಾಸ್ತ್ರಿ ಅವರಿಗೆ ಇಮೇಲ್ ಅನ್ನೂ ಮಾಧ್ಯಮ ಸಂಸ್ಥೆ ಕಳುಹಿಸಿದೆ. ಆದರೆ ಕೃಷ್ಣಶಾಸ್ತ್ರಿ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X