ಲೋಕಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪುತ್ತಿದೆ. ‘ಚಾರ್ ಸೌ ಪಾರ್’ ಎನ್ನುತ್ತಿದ್ದ ಬಿಜೆಪಿ 244 ಸ್ಥಾನಕ್ಕೆ ಕುಸಿದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 295 ಸ್ಥಾನಗಳಲ್ಲಿ ನಿಂತಿದೆ. ಇಂಡಿಯಾ ಮೈತ್ರಿಕೂಟ 230 ಸ್ಥಾನಗಳನ್ನು ದಾಟಲು ಪ್ರಯತ್ನಿಸುತ್ತಿದೆ.
ಸ್ವತಂ ಬಲದಲ್ಲಿ ಅಧಿಕಾರ ರಚಿಸುತ್ತೇವೆ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಆದರೆ, ಸಾಧಾರಣ ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ 244 ಸ್ಥಾನದಲ್ಲಿಯೇ ಹೆಣಗಾಡುತ್ತಿದೆ.
ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಎನ್‌ಡಿಎ ಸರ್ಕಾರ ರಚನೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಬಿಜೆಪಿ ಎನ್‌ಡಿಎ ಸರ್ಕಾರವನ್ನು ರಚಿಸಿದರೂ, ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ, ಮೋದಿಯನ್ನು ಪದಚ್ಯುತಿಗೊಳಿಸಿ, ನಿತಿನ್ ಗಡ್ಕರಿಯನ್ನು ಪ್ರಧಾನಿ ಮಾಡಲು ಆರ್‌ಎಸ್‌ಎಸ್ ಚಿಂತನೆ ನಡೆಸಿದ ಎಂದು ತಿಳಿದುಬಂದಿದೆ.
HUGE BREAKING 🚨
Shocking move by RSS to dislodge Narendra Modi ⚡
RSS is allegedly planning to move a resolution to choose parliamentary leader within BJP.
Over 50% BJP MPs don’t want Modi as PM & might choose another RSS backed leader.
Biggest setback for Modi as he faces…
— Ankit Mayank (@mr_mayank) June 4, 2024
ಬಿಜೆಪಿಯೊಳಗೆ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಲು ಬಿಜೆಪಿ ನೂತನ ಸಂಸದರ ಸಭೆಯಲ್ಲಿ ನಿರ್ಣಯ ಮಂಡಿಸಲು ಆರ್‌ಎಸ್‌ಎಸ್ ಯೋಜಿಸುತ್ತಿದೆ ಎನ್ನಲಾಗುತ್ತಿದೆ.
50%ಕ್ಕಿಂತ ಹೆಚ್ಚು ಬಿಜೆಪಿ ಸಂಸದರು ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸುವುದಿಲ್ಲ. ಅವರೆಲ್ಲರೂ, RSS ಬೆಂಬಲಿತ ನಾಯಕನನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ.