ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುಂಪೊಂದು ಗುರುವಾರ ಸಂಜೆ ಥಳಿಸಿದೆ.
ಘಟನೆಯು ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದ್ದು ಮಕ್ಕಳ ಕಳ್ಳರೆಂದು ಶಂಕಿಸಿ ಗುಂಪೊಂದು ಸಾಧುಗಳ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ನಗ್ನಗೊಳಿಸಿ ಸಾರ್ವಜನಿಕವಾಗಿಯೇ ಹಲ್ಲೆ ನಡೆಸಿರುವ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
Viral videos with shocking palghar-like visuals claiming a group of hindu sadhus stripped and beaten by a mob in West Bengal’s Purulia district.https://t.co/ZhznwG5Bm9 pic.twitter.com/XFOC8KAPkL
— Megh Updates 🚨™ (@MeghUpdates) January 12, 2024
ಉತ್ತರ ಪ್ರದೇಶದ ಬರೇಲಿ ನಿವಾಸಿಗಳಾದ ವೃದ್ಧ ಸಂತ ಮತ್ತು ಇಬ್ಬರು ಯುವ ಸಂತರು ಬಾಡಿಗೆ ಕಾರಿನಲ್ಲಿ ಗಂಗಾಸಾಗರಕ್ಕೆ ಹೋಗುತ್ತಿದ್ದರು. ಬಂಕೂರದಿಂದ ಕಾಶಿಪುರ-ಬಂಕೂರ ರಸ್ತೆ ಮೂಲಕ ಗಂಗಾಸಾಗರ ಕಡೆಗೆ ಹೋಗಬೇಕಿತ್ತು. ಕಾಶಿಪುರದ ಗೌರಂಗ್ಡಿಹ್ ಎಂಬಲ್ಲಿ ಸಂತರಿಗೆ ಕೆಲವರು ಸ್ವಲ್ಪ ಹಣವನ್ನು ದಾನ ಮಾಡಿದ್ದಾರೆ. ಅದೇ ರೀತಿ ಮುಂದಿರುವ ಇಟ್ಟಿಗೆ ಕಾರ್ಖಾನೆ ಮಾಲೀಕರು ಹೆಚ್ಚಿನ ದಾನ ಧರ್ಮವನ್ನು ಮಾಡುತ್ತಾರೆ ಅಲ್ಲಿಗೆ ಹೋಗಿ ಎಂದು ಹೇಳಿದ್ದಾರೆ. ಆದರೆ ವಿಳಾಸ ಸರಿಯಾಗಿ ಗೊತ್ತಿರದ ಕಾರಣ ರಸ್ತೆಯಲ್ಲಿ ಹೋಗುತಿದ್ದ ಬಾಲಕಿಯರಲ್ಲಿ ಇಟ್ಟಿಗೆ ಕಾರ್ಖಾನೆ ಎಲ್ಲಿ ಎಂದು ಹಿಂದಿಯಲ್ಲಿ ಕೇಳಿದ್ದಾರೆ. ಆದರೆ ಅಲ್ಲಿಯ ಜನ ಮಕ್ಕಳ ಕಳ್ಳರೆಂದು ಅನುಮಾನ ಪಟ್ಟು ಗ್ರಾಮದ ಜನರನ್ನು ಒಟ್ಟು ಮಾಡಿದ್ದಾರೆ.
ವರದಿಗಳ ಪ್ರಕಾರ, ದಾರಿ ಮಧ್ಯೆ ಸಾಧುಗಳಿಗೆ ಹೇಗೆ ಹೋಗಬೇಕು ಅಂತ ಗೊಂದಲ ಆಗಿದೆ. ಅದಕ್ಕೆ ರಸ್ತೆಯ ಪಕ್ಕದಲ್ಲಿ ಆಡುತ್ತಿದ್ದ ಮೂವರು ಹೆಣ್ಮಕ್ಕಳ ಬಳಿ ಕೇಳಿದ್ದಾರೆ. ಆದರೆ ಬಾಲಕಿಯರು ಸಾಧುಗಳನ್ನು ನೋಡಿ ಹೆದರಿ, ಕಣ್ಣೀರು ಇಡುತ್ತ ಓಡಿ ಹೋಗಿದ್ದಾರೆ. ಇದರಿಂದ ಸ್ಥಳೀಯರಿಗೆ ಅನುಮಾನ ಬಂದಿದೆ. ಈ ವೇಳೆ ಗ್ರಾಮಸ್ಥರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಸಾಧುಗಳನ್ನು ಕಾಳಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಅಲ್ಲದೆ ವಾಹನವನ್ನೂ ಧ್ವಂಸಗೊಳಿಸಿದ್ದಾರೆ.
Absolutely shocking incident reported from Purulia in West Bengal. In a Palghar kind lynching, sadhus traveling to Gangasagar for Makar Sankranti, were stripped and beaten by criminals, affiliated with the ruling TMC.
In Mamata Banerjee’s regime, a terrorist like Shahjahan Sheikh… pic.twitter.com/DsdsAXz1Ys— Amit Malviya (@amitmalviya) January 12, 2024
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪುರುಲಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವಿಜಿತ್ ಬ್ಯಾನರ್ಜಿ, ”ಮೂವರು ಸಂತರು ವಾಹನದಲ್ಲಿ ಹೋಗುತ್ತಿದ್ದರು. ಗೌರಂಗ್ಡಿಹ್ ಬಳಿ ಸ್ಥಳೀಯ ಮೂವರು ಹುಡುಗಿಯರು ಕಾಳಿ ಮಂದಿರದ ಬಳಿ ಪೂಜೆಗೆಂದು ತೆರಳುತ್ತಿದ್ದಾಗ ಅವರ ಬಳಿ ಕಾರು ನಿಲ್ಲಿಸಿದ ಸಾಧುಗಳು ಏನನ್ನೋ ಕೇಳಿದರು. ಭಾಷಾ ಸಮಸ್ಯೆಯಿಂದ ಅಲ್ಲಿ ತಪ್ಪು ಕಲ್ಪನೆ ಉಂಟಾಗಿದೆ. ಸಾಧುಗಳು ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸಿದ ಹುಡುಗಿಯರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಬಂದು ಸಾಧುಗಳನ್ನು ದುರ್ಗಾ ಮಂದಿರದ ಬಳಿ ಕರೆದೊಯ್ದು ಹಲ್ಲೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅನ್ನಪೂರ್ಣಿ ‘ನಿಷೇಧ’- ಧರ್ಮಗಳ ನಡುವೆ ಬೆಂಕಿ ಇಟ್ಟು ಬೇಳೆ ಬೇಯಿಸುವ ಕೃತ್ಯ
ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಪೊಲೀಸರು ತೆರಳಿ, ಸಾಧುಗಳನ್ನು ರಕ್ಷಿಸಿದ್ದಾರೆ. ಹಲ್ಲೆಗೊಳಗಾದ ಸಾಧುಗಳು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ. ಇದುವರೆಗೆ 12 ಮಂದಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
#WATCH | West Bengal: On a viral video showing a group of sadhus being assaulted by a mob in the Purulia district, Purulia SP, Avijit Banerjee says, “Three saints were going in a vehicle…Near Gourangdih, three girls were heading to a local Kali mandir for pooja when the car… pic.twitter.com/0NpwmlXpmP
— ANI (@ANI) January 13, 2024
ಈ ಪ್ರಕರಣದಲ್ಲಿ ಹನ್ನೆರಡು ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ವದಂತಿಹಬ್ಬಿ ಕ್ರೋಧಿತ ಗುಂಪಿನಿಂದ ಹಲ್ಲೆ ನಡೆದಿದೆ. ಘಟನೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ.
VIDEO | “Some sadhus came to Purulia in a car with a UP number plate. They were assaulted by the locals on the suspicion of being abductors. 12 people have been arrested, and the case is being investigated,” says West Bengal Minister and TMC leader Shashi Panja on alleged assault… pic.twitter.com/8VPoAYJl3d
— Press Trust of India (@PTI_News) January 13, 2024
“ಮಮತಾ ಬ್ಯಾನರ್ಜಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹಿಂದೂಗಳಿಗೆ ಪ್ರಾಣಾಪಾಯವಿದೆ. ವ್ಯವಸ್ಥಿತವಾಗಿ ಈ ಕೃತ್ಯ ನಡೆಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಹಾಗಾಗಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ” ಎಂದು ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ.