ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗುವ ಪ್ರಯತ್ನದಲ್ಲಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಇದೀಗ ಸದನದಲ್ಲೇ ಸುಳ್ಳು ಹೇಳಿದ್ದಾರೆ. ವಕ್ಫ್ ಮಸೂದೆ ಪರವಾಗಿ, ವಕ್ಫ್ ಬೋರ್ಡ್ ವಿರುದ್ಧವಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಸಂಬಿತ್ ಅವರ ಈ ಸುಳ್ಳನ್ನು ‘ಆಲ್ಟ್ ನ್ಯೂಸ್’ ಬಯಳಿಗೆಳೆದಿದೆ.
ಇಸ್ಲಾಂ ದೇಶಗಳಾದ ಟರ್ಕಿ, ಲಿಬಿಯಾ, ಈಜಿಪ್ಟ್, ಸುಡಾನ್, ಲೆಬನಾನ್, ಸಿರಿಯಾ, ಜೋರ್ಡನ್, ಇರಾಕ್‌ನಲ್ಲಿ ವಕ್ಫ್ ಆಸ್ತಿ ಇಲ್ಲ. ಆದರೆ ಭಾರತದಲ್ಲಿ ಮಾತ್ರ ವಕ್ಫ್ ಬೋರ್ಡ್ ಇದೆ. ಅದಕ್ಕೆ ಕಾನೂನು ಸುರಕ್ಷತೆ ನೀಡಲಾಗಿದೆ ಎಂಬುದು ಈ ಬಿಜೆಪಿ ನಾಯಕರ ಪ್ರತಿಪಾದನೆ. ಪುರಿ ಕ್ಷೇತ್ರದ ಸಂಸದ ಸಂಬಿತ್ ಸಂಸತ್ತಿನಲ್ಲಿ ನಿಂತು ಹೀಗೆ ಹೇಳುವಾಗ, ಧ್ವನಿ ಎತ್ತರಿಸಿತ್ತು. ಅದಕ್ಕೆ ಬೆಂಬಲವಾಗಿ ಬಿಜೆಪಿಯ ಇತರ ಸದಸ್ಯರ ಮೇಜು ಕುಟ್ಟುವಿಕೆ, ಇವರ ಮಾತಿಗೆ ಪ್ರೋತ್ಸಾಹ ನೀಡುತ್ತಿತ್ತು. ಸುಳ್ಳು ಸತ್ಯವಾಗುವಂತೆ ಸದನದ ಬಹುಮತ ದನಿಗೂಡಿಸುತ್ತಿತ್ತು.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಜೂನ್ 24 ರಂದು ಸರ್ವಪಕ್ಷ ಸಭೆ ಕರೆದ ಗೃಹ ಸಚಿವ ಅಮಿತ್ ಶಾ
ಆದರೆ ಇದು ಶುದ್ಧ ಸುಳ್ಳು. ಸಂಬಿತ್ ಸುಳ್ಳನ್ನು ಬಯಲಿಗಳೆದಿರುವ ‘ಆಲ್ಟ್ ನ್ಯೂಸ್’ ನೈಜ ವಿಚಾರಗಳನ್ನು ಜನರಿಗೆ ತಿಳಿಸಿದೆ. ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವೇ ಈ ಸುಳ್ಳನ್ನು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಆ ಸಂದರ್ಭದಲ್ಲೂ ಕೇಂದ್ರದ ಸುಳ್ಳು ಪ್ರಚಾರ ಬಯಲಿಗೆಳೆಯಲಾಗಿತ್ತು. ಆದರೆ ಇದೀಗ ಸಂಸತ್ತಿನಲ್ಲೇ ಬಿಜೆಪಿ ನಾಯಕ ತನ್ನ ಹುಸಿ ಸುಳ್ಳುಗಳ ಸರಮಾಲೆ ಪೋಣಿಸುವುದನ್ನು ಮುಂದುವರೆಸಿದ್ದಾರೆ.
ವಾಸ್ತವವೇನೆಂದರೆ…
ವಾಸ್ತವವಾಗಿ ಟರ್ಕಿಯಲ್ಲಿ ವಕ್ಫ್ ಆಸ್ತಿಯನ್ನು ಡೈರೆಕ್ಟರ್ ಜನರಲ್ ಆಫ್ ಫೌಂಡೇಷನ್ ನಿರ್ವಹಿಸುತ್ತದೆ. ಲಿಬಿಯಾದಲ್ಲಿ ಅವ್ಕಾಫ್ ಮತ್ತು ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ, ಈಜಿಪ್ಟ್‌ನಲ್ಲಿ ಅವ್ಕಾಫ್ ಸಚಿವಾಲಯ ವಕ್ಫ್ ಆಸ್ತಿಯ ನಿರ್ವಹಣೆ ಮಾಡುತ್ತದೆ. ಉಳಿದಂತೆ ಸುಡಾನ್, ಲೆಬನಾನ್, ಸಿರಿಯಾ, ಜೋರ್ಡನ್, ಇರಾಕ್ ಎಲ್ಲಾ ದೇಶಗಳಲ್ಲಿಯೂ ವಕ್ಫ್ ಆಸ್ತಿಯನ್ನು ಸಚಿವಾಲಯ ಅಥವಾ ವಕ್ಫ್ ಬೋರ್ಡ್‌ಗಳು ನಿರ್ವಹಿಸುತ್ತದೆ.
ಇದನ್ನು ಓದಿದ್ದೀರಾ? ರಾಜಕೀಯ ಬಿಕ್ಕಟ್ಟಿನ ನಡುವೆ ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಾಯಕ ಸಂಬಿತ್ ಪಾತ್ರಾ
ಭಾರತದ ಸರ್ಕಾರದ ವಾರ್ತಾ ಇಲಾಖೆ (ಪಿಐಬಿ) ತಪ್ಪು ಮಾಹಿತಿಯೇನೋ ಪ್ರಕಟಿಸಿತು. ಆದರೆ ಆ ತಪ್ಪನ್ನು ಎತ್ತಿ ತೋರಿಸಿದಾಗ ತಿದ್ದಿಕೊಳ್ಳಬೇಕಲ್ಲವೇ? ಆದರೆ ಈವರೆಗೂ ತಿದ್ದಿಕೊಂಡಿಲ್ಲ. ಸುಳ್ಳನ್ನು ಸುಳ್ಳು ಎಂದು ಒಪ್ಪಿಕೊಂಡರೆ, ತಿದ್ದಿಕೊಂಡರೆ ಸೋಲು ಒಪ್ಪಿಕೊಂಡಂತೆ ಎಂದು ಭಾವಿಸುವ ಬಿಜೆಪಿ ನಾಯಕರು, ಸುಳ್ಳನ್ನೇ ಹಾಸಿಗೆಯನ್ನಾಗಿಸಿ ಆಡಳಿತ ನಡೆಸುತ್ತಿದ್ದಾರೆ. ಆ ಸುಳ್ಳಿನ ಸರದಾರನಾಗಿ ಸಂಬಿತ್ ಪಾತ್ರ ಈಗ ಮುನ್ನೆಲೆಗೆ ಬಂದಿದ್ದಾರೆ. ಮುಸ್ಲಿಮರ ವಿರುದ್ಧ, ವಕ್ಫ್ ವಿರುದ್ಧ ಬೇಕೆಂದೇ ಸುಳ್ಳು ಹೇಳುತ್ತಿದ್ದಾರೆ. ಕೊನೆಪಕ್ಷ ಇದು ಸುಳ್ಳು ಎಂದು ಸ್ಪೀಕರ್ ಅವರಿಗಾದರೂ ಅನ್ನಿಸಬಾರದೇ, ಬಿಜೆಪಿ ನಾಯಕರಿಗೆ ಬುದ್ಧಿ ಹೇಳಬಾರದೇ?
The Union government made the FALSE claim last year that countries like Turkey, Libya, Egypt, Sudan, Lebanon etc did not have a Waqf system. Alt News debunked it then. Now, BJP MP Sambit Patra has repeated it. WATCH:pic.twitter.com/4JQz8yk5Gj
— Mohammed Zubair (@zoo_bear) April 4, 2025
ಸಂಬಿತ್ ಪಾತ್ರಾ ಇದೇ ಮೊದಲು ಸುಳ್ಳು ಹೇಳಿರುವುದಲ್ಲ, ಈ ಹಿಂದೆ ಕಾಂಗ್ರೆಸ್ ನಾಯಕರ ಬಗ್ಗೆ ಅಪಪ್ರಚಾರ ಮಾಡಿ ವಾಗ್ದಾಳಿಗೆ ಗುರಿಯಾಗಿದ್ದರು. ಸಂದೀಪ್ ದೀಕ್ಷಿತ್ ಅವರನ್ನು ಕಾಂಗ್ರೆಸ್‌ನಿಂದ ತೆಗೆದುಹಾಕಲಾಗಿದ್ದು, ಬಳಿಕ ಮತ್ತೆ ಪಕ್ಷಕ್ಕೆ ಸೇರಿಸಲಾಗಿದೆ ಎಂಬ ನಕಲಿ ಸುದ್ದಿಯ ಪ್ರಚಾರವನ್ನು ಕೂಡಾ ಸಂಬಿತ್ ಮಾಡಿದ್ದರು. ಈ ಕಾರಣದಿಂದಾಗಿ ಸಂದೀಪ್ ದೀಕ್ಷಿತ್ ವಾಗ್ದಾಳಿಗೆ ಸಂಬಿತ್ ಗುರಿಯಾಗಿದ್ದರು. ಆದರೆ ಬಿಜೆಪಿಗೆ ಇಂತಹ ಸುಳ್ಳುಕೋರರೇ ಬಂಡವಾಳವಾಗಿರುವ ಕಾರಣ ಇನ್ನೂ ರಾಜಕೀಯದಲ್ಲಿ ಉಳಿದುಕೊಂಡಿದ್ದಾರೆ.
