ಇಸ್ಲಾಂ ದೇಶಗಳಲ್ಲಿ ವಕ್ಫ್ ಇಲ್ಲವಂತೆ: ಸದನದಲ್ಲೇ ಸುಳ್ಳು ಹೇಳಿದರೆ ಸಂಬಿತ್ ಪಾತ್ರಾ?

Date:

ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗುವ ಪ್ರಯತ್ನದಲ್ಲಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಇದೀಗ ಸದನದಲ್ಲೇ ಸುಳ್ಳು ಹೇಳಿದ್ದಾರೆ. ವಕ್ಫ್ ಮಸೂದೆ ಪರವಾಗಿ, ವಕ್ಫ್ ಬೋರ್ಡ್ ವಿರುದ್ಧವಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಸಂಬಿತ್ ಅವರ ಈ ಸುಳ್ಳನ್ನು ‘ಆಲ್ಟ್ ನ್ಯೂಸ್’ ಬಯಳಿಗೆಳೆದಿದೆ.

- Advertisement -

ಇಸ್ಲಾಂ ದೇಶಗಳಾದ ಟರ್ಕಿ, ಲಿಬಿಯಾ, ಈಜಿಪ್ಟ್, ಸುಡಾನ್, ಲೆಬನಾನ್, ಸಿರಿಯಾ, ಜೋರ್ಡನ್, ಇರಾಕ್‌ನಲ್ಲಿ ವಕ್ಫ್ ಆಸ್ತಿ ಇಲ್ಲ. ಆದರೆ ಭಾರತದಲ್ಲಿ ಮಾತ್ರ ವಕ್ಫ್‌ ಬೋರ್ಡ್ ಇದೆ. ಅದಕ್ಕೆ ಕಾನೂನು ಸುರಕ್ಷತೆ ನೀಡಲಾಗಿದೆ ಎಂಬುದು ಈ ಬಿಜೆಪಿ ನಾಯಕರ ಪ್ರತಿಪಾದನೆ. ಪುರಿ ಕ್ಷೇತ್ರದ ಸಂಸದ ಸಂಬಿತ್ ಸಂಸತ್ತಿನಲ್ಲಿ ನಿಂತು ಹೀಗೆ ಹೇಳುವಾಗ, ಧ್ವನಿ ಎತ್ತರಿಸಿತ್ತು. ಅದಕ್ಕೆ ಬೆಂಬಲವಾಗಿ ಬಿಜೆಪಿಯ ಇತರ ಸದಸ್ಯರ ಮೇಜು ಕುಟ್ಟುವಿಕೆ, ಇವರ ಮಾತಿಗೆ ಪ್ರೋತ್ಸಾಹ ನೀಡುತ್ತಿತ್ತು. ಸುಳ್ಳು ಸತ್ಯವಾಗುವಂತೆ ಸದನದ ಬಹುಮತ ದನಿಗೂಡಿಸುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಜೂನ್‌ 24 ರಂದು ಸರ್ವಪಕ್ಷ ಸಭೆ ಕರೆದ ಗೃಹ ಸಚಿವ ಅಮಿತ್‌ ಶಾ

ಆದರೆ ಇದು ಶುದ್ಧ ಸುಳ್ಳು. ಸಂಬಿತ್ ಸುಳ್ಳನ್ನು ಬಯಲಿಗಳೆದಿರುವ ‘ಆಲ್ಟ್ ನ್ಯೂಸ್’ ನೈಜ ವಿಚಾರಗಳನ್ನು ಜನರಿಗೆ ತಿಳಿಸಿದೆ. ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವೇ ಈ ಸುಳ್ಳನ್ನು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಆ ಸಂದರ್ಭದಲ್ಲೂ ಕೇಂದ್ರದ ಸುಳ್ಳು ಪ್ರಚಾರ ಬಯಲಿಗೆಳೆಯಲಾಗಿತ್ತು. ಆದರೆ ಇದೀಗ ಸಂಸತ್ತಿನಲ್ಲೇ ಬಿಜೆಪಿ ನಾಯಕ ತನ್ನ ಹುಸಿ ಸುಳ್ಳುಗಳ ಸರಮಾಲೆ ಪೋಣಿಸುವುದನ್ನು ಮುಂದುವರೆಸಿದ್ದಾರೆ.

ವಾಸ್ತವವೇನೆಂದರೆ…

ವಾಸ್ತವವಾಗಿ ಟರ್ಕಿಯಲ್ಲಿ ವಕ್ಫ್ ಆಸ್ತಿಯನ್ನು ಡೈರೆಕ್ಟರ್ ಜನರಲ್ ಆಫ್ ಫೌಂಡೇಷನ್ ನಿರ್ವಹಿಸುತ್ತದೆ. ಲಿಬಿಯಾದಲ್ಲಿ ಅವ್ಕಾಫ್ ಮತ್ತು ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ, ಈಜಿಪ್ಟ್‌ನಲ್ಲಿ ಅವ್ಕಾಫ್ ಸಚಿವಾಲಯ ವಕ್ಫ್ ಆಸ್ತಿಯ ನಿರ್ವಹಣೆ ಮಾಡುತ್ತದೆ. ಉಳಿದಂತೆ ಸುಡಾನ್, ಲೆಬನಾನ್, ಸಿರಿಯಾ, ಜೋರ್ಡನ್, ಇರಾಕ್‌ ಎಲ್ಲಾ ದೇಶಗಳಲ್ಲಿಯೂ ವಕ್ಫ್‌ ಆಸ್ತಿಯನ್ನು ಸಚಿವಾಲಯ ಅಥವಾ ವಕ್ಫ್‌ ಬೋರ್ಡ್‌ಗಳು ನಿರ್ವಹಿಸುತ್ತದೆ.

ಇದನ್ನು ಓದಿದ್ದೀರಾ? ರಾಜಕೀಯ ಬಿಕ್ಕಟ್ಟಿನ ನಡುವೆ ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಾಯಕ ಸಂಬಿತ್ ಪಾತ್ರಾ

ಭಾರತದ ಸರ್ಕಾರದ ವಾರ್ತಾ ಇಲಾಖೆ (ಪಿಐಬಿ) ತಪ್ಪು ಮಾಹಿತಿಯೇನೋ ಪ್ರಕಟಿಸಿತು. ಆದರೆ ಆ ತಪ್ಪನ್ನು ಎತ್ತಿ ತೋರಿಸಿದಾಗ ತಿದ್ದಿಕೊಳ್ಳಬೇಕಲ್ಲವೇ? ಆದರೆ ಈವರೆಗೂ ತಿದ್ದಿಕೊಂಡಿಲ್ಲ. ಸುಳ್ಳನ್ನು ಸುಳ್ಳು ಎಂದು ಒಪ್ಪಿಕೊಂಡರೆ, ತಿದ್ದಿಕೊಂಡರೆ ಸೋಲು ಒಪ್ಪಿಕೊಂಡಂತೆ ಎಂದು ಭಾವಿಸುವ ಬಿಜೆಪಿ ನಾಯಕರು, ಸುಳ್ಳನ್ನೇ ಹಾಸಿಗೆಯನ್ನಾಗಿಸಿ ಆಡಳಿತ ನಡೆಸುತ್ತಿದ್ದಾರೆ. ಆ ಸುಳ್ಳಿನ ಸರದಾರನಾಗಿ ಸಂಬಿತ್ ಪಾತ್ರ ಈಗ ಮುನ್ನೆಲೆಗೆ ಬಂದಿದ್ದಾರೆ. ಮುಸ್ಲಿಮರ ವಿರುದ್ಧ, ವಕ್ಫ್ ವಿರುದ್ಧ ಬೇಕೆಂದೇ ಸುಳ್ಳು ಹೇಳುತ್ತಿದ್ದಾರೆ. ಕೊನೆಪಕ್ಷ ಇದು ಸುಳ್ಳು ಎಂದು ಸ್ಪೀಕರ್ ಅವರಿಗಾದರೂ ಅನ್ನಿಸಬಾರದೇ, ಬಿಜೆಪಿ ನಾಯಕರಿಗೆ ಬುದ್ಧಿ ಹೇಳಬಾರದೇ?

ಸಂಬಿತ್ ಪಾತ್ರಾ ಇದೇ ಮೊದಲು ಸುಳ್ಳು ಹೇಳಿರುವುದಲ್ಲ, ಈ ಹಿಂದೆ ಕಾಂಗ್ರೆಸ್ ನಾಯಕರ ಬಗ್ಗೆ ಅಪಪ್ರಚಾರ ಮಾಡಿ ವಾಗ್ದಾಳಿಗೆ ಗುರಿಯಾಗಿದ್ದರು. ಸಂದೀಪ್ ದೀಕ್ಷಿತ್ ಅವರನ್ನು ಕಾಂಗ್ರೆಸ್‌ನಿಂದ ತೆಗೆದುಹಾಕಲಾಗಿದ್ದು, ಬಳಿಕ ಮತ್ತೆ ಪಕ್ಷಕ್ಕೆ ಸೇರಿಸಲಾಗಿದೆ ಎಂಬ ನಕಲಿ ಸುದ್ದಿಯ ಪ್ರಚಾರವನ್ನು ಕೂಡಾ ಸಂಬಿತ್ ಮಾಡಿದ್ದರು. ಈ ಕಾರಣದಿಂದಾಗಿ ಸಂದೀಪ್ ದೀಕ್ಷಿತ್ ವಾಗ್ದಾಳಿಗೆ ಸಂಬಿತ್ ಗುರಿಯಾಗಿದ್ದರು. ಆದರೆ ಬಿಜೆಪಿಗೆ ಇಂತಹ ಸುಳ್ಳುಕೋರರೇ ಬಂಡವಾಳವಾಗಿರುವ ಕಾರಣ ಇನ್ನೂ ರಾಜಕೀಯದಲ್ಲಿ ಉಳಿದುಕೊಂಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆಯ ಹಲ್ಲೆ ಆರೋಪಿ ಸಂಘಿ ಭಾರದ್ವಾಜ್‌ಗೆ 3 ವಾರ ಮಧ್ಯಂತರ ಜಾಮೀನು

ಜಂತರ್‌ ಮಂತರ್‌ನಲ್ಲಿ ನಡೆದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಪ್ರತಿಭಟನೆ ವೇಳೆ...

ಯುಪಿ ಪೊಲೀಸರ ‘ಮಧ್ಯರಾತ್ರಿ ದಾಳಿ’: ದೆಹಲಿ ಮಾಜಿ ಮೇಯರ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪತ್ರಕರ್ತರೊಬ್ಬರನ್ನು ಹುಡುಕುವ ನೆಪದಲ್ಲಿ ಉತ್ತರ ಪ್ರದೇಶ ಪೊಲೀಸರು ತಮ್ಮ ನಿವಾಸದ ಮೇಲೆ...

TMC ಬಂಡಾಯ ಸಂಸದರು ಬಿಜೆಪಿ ಸೇರಲಿದ್ದಾರೆ ಎಂದ ಬಸುನಿಯಾ; ಇಲ್ಲ ಎಂದ BJP

ತೃಣಮೂಲ ಕಾಂಗ್ರೆಸ್‌ (TMC) ತೊರೆದು ನ್ಯಾಷನಲಿಸ್ಟ್‌ ಸಿಟಿಜನ್ಸ್‌ ಪಾರ್ಟಿ ಆಫ್‌ ಇಂಡಿಯಾ...

ಮೋದಿ ಸರ್ಕಾರದ UPI ವಿನಾಯಿತಿ ಮೋಸ; ₹2,000 ಮೇಲ್ಪಟ್ಟ ಪಾವತಿಗಳಿಗೆ MDR ವಿಧಿಸಲು ಅನುಮತಿ

₹2,000 ಮೇಲ್ಪಟ್ಟ UPI ಪಾವತಿಗಳಿಗೆ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ವಿಧಿಸಲು...