ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್, ಪಂಜಾಬ್‌ನ ಖದೂರ್ ಸಾಹಿಬ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅಮೃತಪಾಲ್ ವಕೀಲರು ತಿಳಿಸಿದ್ದಾರೆ.
ಆದರೆ ಅಮೃತಪಾಲ್ ಸಿಂಗ್ ತಂದೆ ತಾರ್ಸೆಮ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಗುರುವಾರ ತಮ್ಮ ಮಗನನ್ನು ಭೇಟಿಯಾದ ನಂತರವೇ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ. ಜೊತೆಗೆ ಅಮೃತಪಾಲ್ ಸಿಂಗ್ ಈ ಹಿಂದೆ ರಾಜಕೀಯಕ್ಕೆ ಸೇರಲು ಯಾವುದೇ ಆಸಕ್ತಿಯನ್ನು ತೋರಿಸಿಲ್ಲ ಎಂದೂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ, ರಾಜ್ಯ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಅಸ್ಸಾಂ ಪ್ರತ್ಯೇಕತಾವಾದಿ ಗುಂಪು ಉಲ್ಫಾ ಸಹಿ
ಅಮೃತಪಾಲ್ ಸಿಂಗ್ ವಕೀಲ ರಾಜ್‌ದೇವ್ ಸಿಂಗ್ ಖಾಲ್ಸಾ ಅವರು ಬುಧವಾರ ದಿಬ್ರುಗಢ ಜೈಲಿನಲ್ಲಿ ಅಮೃತಪಾಲ್‌ರನ್ನು ಭೇಟಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ ಎಂದಿದ್ದಾರೆ.
“ನಾನು ದಿಬ್ರುಗಢ್ ಕೇಂದ್ರ ಕಾರಾಗೃಹದಲ್ಲಿ ಭಾಯಿ ಸಾಹಬ್ (ಅಮೃತಪಾಲ್ ಸಿಂಗ್) ಅವರನ್ನು ಭೇಟಿ ಮಾಡಿದ್ದೇನೆ. ಭೇಟಿ ವೇಳೆ ಖಾಲ್ಸಾ ಪಂಥ್‌ನ ಹಿತಾಸಕ್ತಿಯಿಂದ ಅವರು ಈ ಬಾರಿ ಖಾದೂರ್ ಸಾಹಿಬ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಾನು ಅವರಿಗೆ ವಿನಂತಿಸಿದೆ. ಅವರು ನನ್ನ ಮನವಿಯನ್ನು ಸ್ವೀಕರಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಸಿಖ್ ಪ್ರತ್ಯೇಕತಾವಾದಿಯ ಕೊಲ್ಲುವ ಸಂಚನ್ನು ವಿಫಲಗೊಳಿಸಿ ಭಾರತಕ್ಕೆ ಎಚ್ಚರಿಕೆ ನೀಡಿದ ಅಮೆರಿಕ
ವಾರಿಸ್ ಪಂಜಾಬ್ ಡಿ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್‌ನನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಬಂಧಿಸಲಾಗಿದ್ದು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದೆ. ಅಮೃತಪಾಲ್ ಅವರು ಪ್ರಸ್ತುತ ತಮ್ಮ ಒಂಬತ್ತು ಸಹಚರರೊಂದಿಗೆ ದಿಬ್ರುಗಢ ಜೈಲಿನಲ್ಲಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯನ್ನು ಹತ್ಯೆಗೈದ ಬಳಿಕ ಅಮೃತಪಾಲ್ ಸಿಂಗ್ ಕಳೆದ ವರ್ಷ ಮಾರ್ಚ್‌ನಲ್ಲಿ ಜಲಂಧರ್ ಜಿಲ್ಲೆಯಲ್ಲಿ ವಾಹನಗಳನ್ನು ಬದಲಿಸಿ, ರೂಪ ಬದಲಿಸಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಅದಾದ ಬಳಿಕ ಕಳೆದ ವರ್ಷ ಏಪ್ರಿಲ್ 23 ರಂದು ಮೊಗಾದ ರೋದ್ ಗ್ರಾಮದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಶೋಧ ಕಾರ್ಯಾಚರಣೆ ನಡೆಸಿ ಬಳಿಕ ಬಂಧಿಸಲಾಗಿದೆ.