ಒಟ್ಟು ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು ಅಮಿತ್ ಶಾ, ರಾಹುಲ್ ಗಾಂಧಿ, ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಆಡಳಿತಾರೂಢ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಕಣದಲ್ಲಿದ್ದರೆ, ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಎಸ್‌ಪಿಯ ಸಮಾಜವಾದಿ ಪಕ್ಷ ಸ್ಪರ್ಧಿಸಿದ್ದಾರೆ.
#WATCH | Tripura: Counting of Postal ballots being done as counting of votes for the #LokSabhaElections2024 begins.
(Visuals from a counting centre in Agartala) pic.twitter.com/aIhAA0nLp7
— ANI (@ANI) June 4, 2024
ಪ್ರಮುಖ ಹತ್ತು ಅಭ್ಯರ್ಥಿಗಳಿವರು
1. ನರೇಂದ್ರ ಮೋದಿ: ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಇಂಡಿಯಾ ಒಕ್ಕೂಟದ ಕಾಂಗ್ರೆಸ್ ನಾಯಕ ಅಜಯ್ ರಾಯ್ ಅವರು ಮೋದಿ ವಿರುದ್ಧ ಕಣದಲ್ಲಿದ್ದಾರೆ. 2014, 2019ರಲ್ಲಿ ಪ್ರಧಾನಿ ಮೋದಿ ವಾರಾಣಾಸಿಯಲ್ಲಿ ಜಯಗಳಿಸಿದ್ದಾರೆ.
2. ರಾಹುಲ್ ಗಾಂಧಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡು ಮತ್ತು ರಾಯ್‌ಬರೇಲಿ ಎರಡು ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ. ರಾಹುಲ್ 2019ರಲ್ಲಿ ಅಮೇಥಿಯಲ್ಲಿ ಸ್ಪರ್ಧಿಸಿದ್ದು ಸೋಲು ಕಂಡಿದ್ದರು. ಆದರೆ ವಯನಾಡಿನಲ್ಲಿ ಗೆಲುವು ಸಾಧಿಸಿದ್ದರು. ಪ್ರಸ್ತುತ ರಾಯ್‌ಬರೇಲಿಯಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್, ವಯನಾಡಿನಿಂದ ಬಿಜೆಪಿಯ ಕೆ ಸುರೇಂದ್ರನ್, ಸಿಪಿಐಎಂನ ಅನ್ನಿ ರಾಜಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
3. ಅಮಿತ್ ಶಾ: ಕೇಂದ್ರ ಗೃಹ ಸಚಿವ ಅಮಿತ್ ಶಾ 2019ರಲ್ಲಿ ಗಾಂಧಿನಗರದಿಂದ ಲೋಕಸಭೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಹಿಂದೆ ಬಿಜೆಪಿ ಅಧ್ಯಕ್ಷರಾಗಿದ್ದ ಶಾ ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ ವಿರುದ್ಧ ಕಣಕ್ಕಿಳಿದಿದ್ದಾರೆ.
Counting of votes for the #LokSabhaElections2024 begins. The fate of candidates on 542 of the 543 Parliamentary seats is being decided today. Postal ballot counting to begin first.
Counting is also being done for Andhra Pradesh and Odisha Assembly elections as well as… pic.twitter.com/3tu7Opjasf
— ANI (@ANI) June 4, 2024
4. ಸುಪ್ರಿಯಾ ಸುಳೆ ಮತ್ತು ಸುನೇತ್ರಾ ಪವಾರ್: ಬಾರಾಮತಿ ಕ್ಷೇತ್ರವು ‘ಪವಾರ್’ ಪರಂಪರೆಯ ಭವಿಷ್ಯವನ್ನು ನಿರ್ಧರಿಸುವ ಮತ್ತೊಂದು ಹಾಟ್ ಸೀಟ್ ಆಗಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರ ಸೋದರ ಸಂಬಂಧಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಈ ಸ್ಥಾನದಿಂದ ಸ್ಪರ್ಧಿಸಿದ್ದಾರೆ.
5. ಶಶಿ ತರೂರ್: ತಿರುವನಂತಪುರದಿಂದ ಮೂರು ಬಾರಿ ಸಂಸದರಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಬಿಜೆಪಿಯ ರಾಜೀವ್ ಚಂದ್ರಶೇಖರ್ ಮತ್ತು ಸಿಪಿಐ-ಎಂನ ಪನ್ನಿಯನ್ ರವೀಂದ್ರನ್ ವಿರುದ್ಧ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.
6. ಕೆ. ಅಣ್ಣಾಮಲೈ: ಬಿಜೆಪಿ ತಮಿಳುನಾಡು ಮುಖ್ಯಸ್ಥ ಕೊಯಮತ್ತೂರಿನಿಂದ ಸ್ಪರ್ಧಿಸುತ್ತಿರುವ ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಡಿಎಂಕೆ ನಾಯಕ ಗಣಪತಿ ಪಿ ರಾಜ್‌ಕುಮಾರ್ ಮತ್ತು ಎಐಎಡಿಎಂಕೆಯ ಸಿಂಗೈ ರಾಮಚಂದ್ರನ್ ವಿರುದ್ಧ ಸ್ಪರ್ಧಿಸಿದ್ದಾರೆ.
7. ರಾಜನಾಥ್ ಸಿಂಗ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಕ್ನೋದಿಂದ ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಿಎಂ ಬಿಜೆಪಿಯ ಮೊದಲ ಅವಧಿಯಲ್ಲಿ ಗೃಹ ಸಚಿವರಾಗಿ ಮತ್ತು ಎರಡನೇ ಅವಧಿಯಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರಾಜನಾಥ್ ಸಿಂಗ್ ವಿರುದ್ಧ ಎಸ್‌ಪಿ ಅಭ್ಯರ್ಥಿ ರವಿದಾಸ್ ಮೆಹ್ರೋತ್ರಾ ಮತ್ತು ಬಿಎಸ್‌ಪಿ ಅಭ್ಯರ್ಥಿ ಸರ್ವರ್ ಮಲಿಕ್ ಕಣದಲ್ಲಿದ್ದಾರೆ.
#WATCH | Tamil Nadu: Strong room being opened in Chennai district ahead of the counting of votes for the #LokSabhaElections2024
The counting of votes will begin at 8 am. pic.twitter.com/6KyZe9yguX
— ANI (@ANI) June 4, 2024
8. ಅಭಿಷೇಕ್ ಬ್ಯಾನರ್ಜಿ: ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಎರಡನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ. ಸಿಪಿಐ(ಎಂ) ಅಭ್ಯರ್ಥಿ ಪ್ರತೀಕುರ್ ರಹಮಾನ್ ಮತ್ತು ಬಿಜೆಪಿಯ ಅಭಿಜಿತ್ ದಾಸ್ ವಿರುದ್ಧ ಕಣಕ್ಕಿಳಿದಿದ್ದಾರೆ.
9. ಅಖಿಲೇಶ್ ಯಾದವ್: ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕನೌಜ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕರ್ಹಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಯಾದವ್ ಅವರು ಹಾಲಿ ಸಂಸದ ಮತ್ತು ಬಿಜೆಪಿ ನಾಯಕ ಸುಬ್ರತ್ ಪಾಠಕ್ ಅವರನ್ನು ಎದುರಿಸುತ್ತಿದ್ದಾರೆ.
10. ಅಸಾದುದ್ದೀನ್ ಓವೈಸಿ: ಹೈದರಾಬಾದ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದರಾಗಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿ ಅಭ್ಯರ್ಥಿ ಮತ್ತು ನಟಿ-ರಾಜಕಾರಣಿ ಮಾಧವಿ ಲತಾ ವಿರುದ್ಧ ಹಣಾಹಣಿಗೆ ಸಿದ್ಧವಾಗಿದ್ದಾರೆ.
543 ಲೋಕಸಭೆ ಕ್ಷೇತ್ರಗಳಿಗೆ 7 ಹಂತದಲ್ಲಿ ಚುನಾವಣೆ ನಡೆದಿದ್ದು ಜೂನ್ 4ರಂದು (ಇಂದು) ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಮೂರನೇ ಬಾರಿಗೆ ಗದ್ದುಗೆ ಪಡೆಯುವ ಯತ್ನದಲ್ಲಿದ್ದರೆ ಪ್ರಮುಖ ವಿಪಕ್ಷಗಳ ಇಂಡಿಯಾ ಒಕ್ಕೂಟವು ಎನ್‌ಡಿಎ ಕೂಟವನ್ನು ಕೆಳಗಿಳಿಸಿ ಅಧಿಕಾರವನ್ನು ಪಡೆಯಲು ಸಜ್ಜಾಗುತ್ತಿದೆ.