ಬಂಡಾಯ ನನಗೆ ಹೊಸದಲ್ಲ, ಮತ್ತೆ ಪಕ್ಷ ಸಂಘಟಿಸುತ್ತೇನೆ; ಅಜಿತ್‌ ನಡೆಗೆ ಶರದ್‌ ಪವಾರ್ ಪ್ರತಿಕ್ರಿಯೆ

Date:

Advertisements

ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಬಂಡಾಯ ನನಗೆ ಹೊಸದಲ್ಲ. ಪಕ್ಷವನ್ನು ಮತ್ತೆ ಸಂಘಟಿಸುತ್ತೇನೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಹೇಳಿದರು.

ಎನ್‌ಸಿಪಿಯಿಂದ ಬಂಡಾಯವೆದ್ದ ಅಜಿತ್‌ ಪವಾರ್‌ ಬಣ ಶಿಂಧೆ – ಫಡ್ನವಿಸ್ ಸರ್ಕಾರ ಸೇರ್ಪಡೆಯ ನಂತರ ಮಾಧ್ಯಗೋಷ್ಠಿಯಲ್ಲಿ ಶರದ್‌ ಪವಾರ್‌ ಮಾತನಾಡಿದರು.

“ಇದು ನನಗೆ ಹೊಸ ವಿಷಯವಲ್ಲ. 1980 ರಲ್ಲಿ ನಾನು ನೇತೃತ್ವ ವಹಿಸಿದ್ದ ಪಕ್ಷವು 58 ಶಾಸಕರನ್ನು ಹೊಂದಿತ್ತು. ನಂತರ ಎಲ್ಲರೂ ತೊರೆದು ಕೇವಲ 6 ಶಾಸಕರು ಉಳಿದಿದ್ದರು. ಆದರೆ ನಾನು ಸಂಖ್ಯಾಬಲವನ್ನು ಬಲಪಡಿಸಿದೆ ಮತ್ತು ನನ್ನನ್ನು ತೊರೆದವರು ಅವರ ಕ್ಷೇತ್ರಗಳಲ್ಲಿ ಸೋತರು” ಎಂದು ಶರದ್‌ ಪವಾರ್ ಹೇಳಿದರು.

Advertisements

“ಎರಡು ದಿನಗಳ ಹಿಂದೆ ಪ್ರಧಾನಿಯವರು ಎನ್‌ಸಿಪಿ ಬಗ್ಗೆ ಮಾತನಾಡಿದ್ದರು. ಅವರು ತಮ್ಮ ಹೇಳಿಕೆಯಲ್ಲಿ ಎರಡು ವಿಷಯಗಳನ್ನು ಹೇಳಿದ್ದರು. ಒಂದು ಎನ್‌ಸಿಪಿ ಮುಗಿದ ಪಕ್ಷ ಎಂದರು. ಜೊತೆಗೆ ಭ್ರಷ್ಟಾಚಾರದ ಆರೋಪಗಳನ್ನು ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ಅವರು ಕೆಲವು ಎನ್‌ಸಿಪಿ ಸಹೋದ್ಯೋಗಿಗಳನ್ನು ಭ್ರಷ್ಟಾಚಾರದ ಆರೋಪಗಳಿಂದ ಮುಕ್ತಗೊಳಿಸಿದ್ದಾರೆಂದು ನನಗೆ ಸಂತೋಷವಾಗಿದೆ. ಏಕೆಂದರೆ ಅವರು ಈಗ ಸರ್ಕಾರದಲ್ಲಿ ಮಂತ್ರಿಗಳಾಗಿ ಸೇರ್ಪಡೆಗೊಂಡಿದ್ದಾರೆ. ನಾನು ಅವರಿಗೆ ಕೃತಜ್ಞನಾಗಿದ್ದೇನೆ” ಎಂದು ಶರದ್‌ ಪವಾರ್ ವ್ಯಂಗ್ಯ ಮಾಡಿದರು.

ಈ ಸುದ್ದಿ ಓದಿದ್ದೀರಾ? ಶರದ್‌ ಪವಾರ್‌ಗೆ ಕೈಕೊಟ್ಟು ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಪಟ್ಟ ಅಲಂಕರಿಸಿದ ಅಜಿತ್‌ ಪವಾರ್

“ನನ್ನ ಮನೆ ವಿಭಜನೆಯಾಗಿದೆ ಎಂದು ನಾನು ಎಂದಿಗೂ ಹೇಳುವುದಿಲ್ಲ. ಇದು ನನ್ನ ಮನೆಗೆ ಸಂಬಂಧಿಸಿದ ವಿಷಯವಲ್ಲ. ಇದು ಜನರ ಸಮಸ್ಯೆ. ಬಿಟ್ಟು ಹೋದವರ ಭವಿಷ್ಯದ ಬಗ್ಗೆ ನನಗೆ ಚಿಂತೆಯಾಗಿದೆ. ಇದರ ಶ್ರೇಯಸ್ಸನ್ನು ಪ್ರಧಾನಿ ಮೋದಿಯವರಿಗೆ ನೀಡಲು ಬಯಸುತ್ತೇನೆ. ಅಜಿತ್‌ ಬಂಡಾಯವೆದ್ದಿರುವುದು ಅವರ ಸ್ವಂತದ ನಿರ್ಧಾರ. ಪಕ್ಷವು ಅಜಿತ್ ಪವಾರ್ ಅವರ ಕ್ರಮವನ್ನು ಅನುಮೋದಿಸಿಲ್ಲ” ಎಂದು ಶರದ್‌ ಪವಾರ್‌ ತಿಳಿಸಿದರು.

“ಇಂದು ನಡೆದ ಘಟನೆಯ ಬಗ್ಗೆ ನಾನು ಚಿಂತಿಸುವುದಿಲ್ಲ. ಚುನಾವಣಾ ಚಿಹ್ನೆಯ ಬಗ್ಗೆ ಅಜಿತ್ ಪವಾರ್ ಅವರೊಂದಿಗೆ ಜಗಳವಾಡುವುದಿಲ್ಲ, ಆದರೆ ಜನರ ಬಳಿಗೆ ಹೋಗುತ್ತೇನೆ. ಯಾರಾದರೂ ಎನ್‌ಸಿಪಿ ಮೇಲೆ ಮಾಲೀಕತ್ವವನ್ನು ಹೊಂದಲು ಯಾವುದೇ ತೊಂದರೆ ಇಲ್ಲ. ನಾವು ಜನರ ಬಳಿಗೆ ಹೋಗಿ ಅವರ ಬೆಂಬಲವನ್ನು ಕೇಳುತ್ತೇವೆ. ಅವರು ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ನಾಳೆ, ನಾನು ಮಹಾರಾಷ್ಟ್ರ ಮಾಜಿ ಸಿಎಂ ವೈ ಬಿ ಚವ್ಹಾಣ್ ಅವರ ಆಶೀರ್ವಾದ ಪಡೆದು ಸಾರ್ವಜನಿಕ ಸಭೆ ನಡೆಸುತ್ತೇನೆ. ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನನಗೆ ಕರೆ ಮಾಡಿ ಬೆಂಬಲ ನೀಡಿದ್ದಾರೆ” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎನ್‌ಸಿಪಿಯ ಜಿತೇಂದ್ರ ಅವ್ಹಾದ್ ಅವರನ್ನು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿದೆ ಎಂದು ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ತಿಳಿಸಿದ್ದಾರೆ.

ಇಡೀ ಎನ್‌ಸಿಪಿ ಮಹಾರಾಷ್ಟ್ರ ಸರ್ಕಾರದೊಂದಿಗಿದೆ; ಅಜಿತ್ ಪವಾರ್

ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್‌ ಪವಾರ್, “ಇಡೀ ಎನ್‌ಸಿಪಿ ಮಹಾರಾಷ್ಟ್ರ ಸರ್ಕಾರದೊಂದಿಗಿದೆ. ಪಕ್ಷದಲ್ಲಿ ಯಾವುದೇ ಒಡಕು ಇಲ್ಲ. ಮುಂದಿನ ದಿನಗಳಲ್ಲಿ ನಾವು ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ. ಪಕ್ಷದಲ್ಲಿ ಯಾವುದೇ ಒಡಕು ಇಲ್ಲ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಎನ್‌ಸಿಪಿ ಹೆಸರು ಮತ್ತು ಚಿಹ್ನೆಯ ಮೇಲೆ ಸ್ಪರ್ಧಿಸುತ್ತೇನೆ. ನನ್ನ ಸ್ಥಾನವನ್ನು ಜನರ ಕಲ್ಯಾಣಕ್ಕಾಗಿ, ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಬಳಸಲಾಗುವುದು” ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಇಂದು ಮಿಂಚಿನ ಬದಲಾವಣೆಗಳುಂಟಾಗಿ ಶರದ್‌ ಪವಾರ್‌ ವಿರುದ್ಧ ಸಿಡಿದೆದ್ದ ಅಜಿತ್‌ ಪವಾರ್ ತನ್ನ ಬಳಗದ ಶಾಸಕರೊಂದಿಗೆ ಶಿಂಧೆ – ಫಡ್ನವಿಸ್‌ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಇದರ ಭಾಗವಾಗಿ 8 ಸಚಿವರೊಂದಿಗೆ ತಾವು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೆ 54 ಎನ್‌ಸಿಪಿ ಶಾಸಕರಲ್ಲಿ ತಮ್ಮ ಬಳಿ 40 ಶಾಸಕರು ಹಾಗೂ 6 ಎಂಎಲ್‌ಸಿಗಳಿದ್ದಾರೆ ಎಂದು ಅವರು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X