ಶಿಬು ಸೊರೇನ್‌ ಸೊಸೆಯಂದಿರ ಫೈಟ್‌ | ಬಿಜೆಪಿ ನಂಬಿ ಬಂದಿದ್ದ ಸೀತಾ ಸೊರೇನ್‌ ಸೋಲು; ಉಪಚುನಾವಣೆಗೆ ಸ್ಪರ್ಧಿಸಿದ್ದ ಕಲ್ಪನಾ ಸೊರೇನ್‌ ಗೆಲುವು

Date:

Advertisements

ಸಂತಾಲ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರು ಭೂ ಹಗರಣ ಆರೋಪದ ಮೇಲೆ ಜೈಲುಪಾಲಾಗಿದ್ದಾರೆ. ಈ ಬೆಳವಣಿಗೆಯು ಮತದಾರರ ಮನಸ್ಥಿತಿಯನ್ನು ಸಂಪೂರ್ಣ ಬದಲಿಸಿದೆ. ರಾಜ್ಯಾದ್ಯಂತ ಬುಡಕಟ್ಟು ಹಕ್ಕುಗಳ ಸಂಘಟನೆಗಳು ಮತ್ತು ಗುಂಪುಗಳು ಸೊರೇನ್ ಬಂಧನವನ್ನು ಬುಡಕಟ್ಟು ಜನಾಂಗಗಳ ಮೇಲಿನ ಹಲ್ಲೆ ಎಂದೇ ಬಿಂಬಿಸಿದ್ದವು. ಪರಿಣಾಮವಾಗಿ, ಈ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯದಲ್ಲಿ ಬಿಜೆಪಿ ಸೋಲುಕಂಡಿದೆ.

ಜಾರ್ಖಂಡ್‌ನಲ್ಲಿ ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿಗೆ ಈ ಬಾರಿ ರಾಜ್ಯದ ಐದು ಬುಡಕಟ್ಟು ಕ್ಷೇತ್ರಗಳಾದ ಖುಂಟಿ, ಸಿಂಹ್‌ಭೂಮ್‌, ಲೋಹರ್‌ದಗಾ, ರಾಜ್‌ಮಹಲ್ ಮತ್ತು ದುಮ್ಕಾದಲ್ಲಿ ಗಮನಾರ್ಹ ಸೋಲಾಗಿದೆ.

ಶಿಬು ಸೊರೇನ್‌ ಸೊಸೆಯಂದಿರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಬಿಜೆಪಿ ನಂಬಿ ಬಂದಿದ್ದ ಸೀತಾ ಸೊರೇನ್‌ ಸೋಲನುಭವಿಸಿದರೆ, ಗಾಂಡೇ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿದ್ದ ಕಲ್ಪನಾ ಸೊರೇನ್‌ ಗೆಲುವು ಸಾಧಿಸಿದ್ದಾರೆ.

Advertisements

ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನೇತೃತ್ವದ ಮೈತ್ರಿಕೂಟವು ಎಲ್ಲ ಐದು ಸ್ಥಾನಗಳನ್ನು ಗೆದ್ದಿದೆ. ವಿಶೇಷವಾಗಿ ಸಿಂಹ್‌ಭೂಮ್, ರಾಜ್‌ಮಹಲ್ ಮತ್ತು ದುಮ್ಕಾದಲ್ಲಿ ಉತ್ತಮ ಪ್ರದರ್ಶನ ನೀಡಿದೆ.

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್‌ ಅವರ ಮೇಲೆ ಇಡಿ ಮತ್ತು ಸಿಬಿಐ ದಾಳಿಗಳು ಮತ್ತು ಕಾನೂನು ಸುವ್ಯವಸ್ಥೆ ವಿಷಯಗಳು ಸೇರಿದಂತೆ ಭ್ರಷ್ಟಾಚಾರದ ಮೇಲೆ ಕೇಂದ್ರೀಕರಿಸಿದ ಬಿಜೆಪಿಯ ಪ್ರಚಾರದ ಹೊರತಾಗಿಯೂ, ಸೊರೇನ್‌ ವಿರುದ್ಧದ ಅನ್ಯಾಯಗಳನ್ನು ಎತ್ತಿ ತೋರಿಸುವ ಮೂಲಕ ಬುಡಕಟ್ಟು ಭಾವನೆಗಳನ್ನು ಪ್ರಚೋದಿಸುವಲ್ಲಿ ಜೆಎಂಎಂ ಯಶಸ್ವಿಯಾಗಿದೆ.

ಖುಂಟಿ ಮತ್ತು ಲೋಹರ್‌ದಗಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಖುಂಟಿಯಲ್ಲಿ ಕೇಂದ್ರ ಸಚಿವ ಮತ್ತು ಹಾಲಿ ಸಂಸದ ಅರ್ಜುನ್ ಮುಂಡಾ ಅವರು ಕಾಂಗ್ರೆಸ್‌ನ ಕಾಳಿಚರಣ್ ಮುಂಡಾ ವಿರುದ್ಧ 1.49 ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ.

ಅದೇ ರೀತಿ ಲೋಹರ್‌ದಗಾದಲ್ಲಿ ಕಾಂಗ್ರೆಸ್‌ನ ಸುಖದೇವ್ ಭಗತ್ ಅವರು ಬಿಜೆಪಿಯ ಸಮೀರ್ ಒರಾನ್ ಅವರನ್ನು 1.39 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಸಿಂಹ್‌ಭೂಮ್‌ನಲ್ಲಿ ಜೆಎಂಎಂನ ಜೋಬಾ ಮಾಝಿ 1.68 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಬಿಜೆಪಿಯ ಗೀತಾ ಕೋರಾ ಅವರನ್ನು ಸೋಲಿಸಿದ್ದಾರೆ.

ರಾಜ್‌ಮಹಲ್‌ನಲ್ಲಿ ಜೆಎಂಎಂನ ವಿಜಯ್ ಹನ್ಸ್‌ದಾಕ್ 1.78 ಲಕ್ಷ ಮತಗಳ ಅಂತರದಿಂದ ಬಿಜೆಪಿಯ ತಾಲಾ ಮರಾಂಡಿ ಅವರನ್ನು ಸೋಲಿಸಿದ್ದಾರೆ.

ದುಮ್ಕಾದಲ್ಲಿ ಜೆಎಂಎಂನ ನಳಿನ್ ಸೊರೇನ್‌ ಅವರು ಬಿಜೆಪಿಯ ಸೀತಾ ಸೊರೇನ್‌ ಅವರನ್ನು 22,527 ಮತಗಳ ಅಂತರದಿಂದ ಮಣಿಸಿದ್ದಾರೆ.

ಮೂರು ಬಾರಿ ಜೆಎಂಎಂ ಶಾಸಕಿಯಾಗಿದ್ದ ಸೀತಾ ಸೊರೇನ್‌ ಅವರು ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿಗೆ ಸೇರಿದ್ದರು. ಇದು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿ ಆರಂಭದಲ್ಲಿ ಹಾಲಿ ಸಂಸದ ಸುನಿಲ್ ಸೊರೇನ್‌ ಅವರನ್ನು ತಮ್ಮ ಅಭ್ಯರ್ಥಿಯಾಗಿ ಘೋಷಿಸಿತ್ತು.‌ ಆದರೆ, ಜೆಎಂಎಂ ಕುಟುಂಬದ ಉಗುರಿನಿಂದಲೇ ಜೆಎಂಎಂ ಕಣ್ಣಿಗೆ ತಿವಿಯುವ ಕುತಂತ್ರದಿಂದ ಸುನಿಲ್‌ ಬದಲಿಗೆ ಸೀತಾ ಸೊರೆನ್ ಅವರನ್ನು ಕಣಕ್ಕಿಳಿಸಿತು. ಆದರೆ, ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿದೆ.

ಬಹುಕಾಲ ಜೆಎಂಎಂನಲ್ಲಿ ಆಡಳಿತ ನಡೆಸಿದ ಸೀತಾ‌ ಸೊರೇನ್‌ ಅವರು, “ಜೆಂಎಂಎಂ ಆಡಳಿತ ಪಕ್ಷದಲ್ಲಿ ನನ್ನನ್ನು ನಿರ್ಲಕ್ಷಸಲಾಗಿದ್ದು, ಪ್ರತ್ಯೇಕಿಸಲಾಗಿದೆ. ಹಾಗಾಗಿ ನಾನು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದೇನೆ” ಎಂದು ಹೇಳಿದ್ದರು.

2019ರಲ್ಲಿ ಬಿಜೆಪಿ ಖುಂಟಿ ಮತ್ತು ಲೋಹರ್‌ದಗಾ ಸ್ಥಾನಗಳನ್ನು ಗೆದ್ದಿದ್ದರೆ, ಸಿಂಹ್‌ಭೂಮ್‌ ಕಾಂಗ್ರೆಸ್, ದುಮ್ಕಾ ಬಿಜೆಪಿ ಮತ್ತು ರಾಜ್‌ಮಹಲ್ ಕ್ಷೇತ್ರವನ್ನು ಜೆಎಂಎಂ ಗೆದ್ದಿತ್ತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರ ಪತ್ನಿ ಕಲ್ಪನಾ ಸೊರೇನ್‌ ಸೇರಿದಂತೆ ಭಾರತೀಯ ಬಣದ ನಾಯಕರು ಜೆಎಂಎಂ ಪಕ್ಷವನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಸಂತಾಲ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರು ಭೂ ಹಗರಣ ಆರೋಪದ ಮೇಲೆ ಜೈಲುಪಾಲಾಗಿದ್ದಾರೆ. ಈ ಬೆಳವಣಿಗೆಯು ಮತದಾರರ ಮನಸ್ಥಿತಿಯನ್ನು ಸಂಪೂರ್ಣ ಬದಲಿಸಿದೆ. ರಾಜ್ಯಾದ್ಯಂತ ಬುಡಕಟ್ಟು ಹಕ್ಕುಗಳ ಸಂಘಟನೆಗಳು ಮತ್ತು ಗುಂಪುಗಳು ಸೊರೇನ್ ಬಂಧನವನ್ನು ಬುಡಕಟ್ಟು ಜನಾಂಗಗಳ ಮೇಲಿನ ಹಲ್ಲೆ ಎಂದೇ ಬಿಂಬಿಸಿದ್ದವು. ಪರಿಣಾಮವಾಗಿ, ಈ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯದಲ್ಲಿ ಬಿಜೆಪಿ ಸೋಲುಕಂಡಿದೆ.

ರಾಜ್ಯದ 14 ಲೋಕಸಭಾ ಸ್ಥಾನಗಳಲ್ಲಿ ಆರು ಸ್ಥಾನಗಳನ್ನು ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. 2019ರಲ್ಲಿ ಎನ್‌ಡಿಎ ರಾಜ್ಯದ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಮತ್ತು ಜೆಎಂಎಂ ತಲಾ ಒಂದು ಸ್ಥಾನವನ್ನು ಗಳಿಸಿತ್ತು.

2024ರಲ್ಲಿ ರಾಜ್ಯದ 14 ಸ್ಥಾನಗಳ ಪೈಕಿ ಎನ್‌ಡಿಎ 9 ಸ್ಥಾನಗಳನ್ನು, ಇಂಡಿಯಾ ಮೈತ್ರಿ ಕೂಟ 5 ಸ್ಥಾನಗಳನ್ನು ಗಳಿಸಿದೆ.

ಜೈಲಿನಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರ ಪತ್ನಿ ಕಲ್ಪನಾ ಮುರ್ಮು ಸೊರೇನ್‌ ಅವರು ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿ ಮೇ 20ರಂದು ಗಾಂಡೇ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಸೊರೇನ್‌ ಕುಟುಂಬದ ರಾಜಕೀಯ ಖ್ಯಾತಿಯನ್ನು ಎತ್ತಿ ಹಿಡಿದಿದ್ದರು.

ಕಲ್ಪನಾ ಸೊರೇನ್‌ ಈವರೆಗೂ ಗೃಹಿಣಿಯಾಗಿದ್ದು, ರಾಜಕೀಯ ಜೀವನದಿಂದ ದೂರ ಉಳಿದಿದ್ದರು. ಆದರೆ ಜಾರಿ ನಿರ್ದೇಶನಾಲಯವು ಅವರ ಪತಿ, ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರನ್ನು ಬಂಧಿಸಿದ ಬಳಿಕದ ಸಂದರ್ಭಗಳು ಅವರನ್ನು ರಾಜಕೀಯಕ್ಕೆ ಧುಮುಕುವಂತೆ ಮಾಡಿದವು. ಇದೇ ಮೊದಲ ಬಾರಿಗೆ ರಾಜಕೀಯ ರಂಗಕ್ಕೆ ಪ್ರವೇಶಿಸಿರುವ ಅವರು, ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲವು ಸಾಧಿಸಿದ್ದಾರೆ.

ಪತಿಯ ಬಂಧನದ ಬಳಿಕೆ ರಾಜಕೀಯ ಪ್ರವೇಶಿಸಿದ ಕಲ್ಪನಾ, ಗಾಂಡೇ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ 1,09,827 ಮತಗಳ ಗಳಿಸಿದ್ದು, ಪ್ರತಿಸ್ಪರ್ಧಿ ಬಿಜೆಪಿಯ ದಿಲೀಪ್ ವರ್ಮಾ ವಿರುದ್ಧ 26,490 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್ ವರ್ಮಾ 82,678 ಮತಗಳನ್ನು ಪಡೆದಿದ್ದು, 26,490 ಮತಗಳ ಅಂತರದಿಂದ ಸೋಲುಂಡಿದ್ದಾರೆ.

ಇದನ್ನೂ ಓದಿದ್ದೀರಾ? ಜಾರ್ಖಂಡ್‌| ಶಿಬು ಸೊರೇನ್‌ ಸೊಸೆಯಂದಿರ ನಡುವೆ ಲೋಕಸಭೆ ಚುನಾವಣೆ ಜಿದ್ದಾಜಿದ್ದಿ

ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು, “ಬುಡಕಟ್ಟು ಸ್ಥಾನಗಳಲ್ಲಿ ಇಂಡಿಯಾ ಬ್ಲಾಕ್‌ನ ಯಶಸ್ಸಿಗೆ ಅಪಾರ ಸಾರ್ವಜನಿಕ ಬೆಂಬಲವೇ ಕಾರಣ. ಸುಳ್ಳು ಆರೋಪಗಳು ಮತ್ತು ಅಪಪ್ರಚಾರದ ಹೊರತಾಗಿಯೂ ನೀವು ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿದ ರೀತಿ ನಮಗೆ ಮಹತ್ವದ್ದಾಗಿದೆ. ಬಿಜೆಪಿಯವರು ನಮ್ಮ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸಿದರೂ ಕೂಡ ವಿಫಲರಾಗಿದ್ದಾರೆ” ಎಂದಿದ್ದಾರೆ.‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಡಕಟ್ಟು ಜನಾಂಗದವರಿಗೆ, ವಿಶೇಷವಾಗಿ ಜಾರ್ಖಂಡ್‌ನ ಪ್ರಾಚೀನ ಬುಡಕಟ್ಟುಗಳಿಗೆ ಮೆಗಾ-ಅಭಿವೃದ್ಧಿ ಕಾರ್ಯಕ್ರಮವನ್ನು ಆರಂಭಿಸಿದ್ದರು. ಸರ್ಕಾರವು ಬುಡಕಟ್ಟು ಜನಾಂಗದ ಐಕಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ‘ಜನಜಾತಿಯ ಗೌರವ್ ದಿವಸ್’ ಎಂದು ಘೋಷಿಸಿತು. ಆದರೆ ತಮ್ಮ ಭೂಮಿ ಮತ್ತು ಅರಣ್ಯವನ್ನು ಉಳಿಸುವ ಭರವಸೆಯನ್ನು ಬಯಸಿದ ಆದಿವಾಸಿಗಳನ್ನು ಮನವೊಲಿಸಲು ಸಾಧ್ಯವಾಗಲಿಲ್ಲ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X