ಬಿಜೆಪಿಗೆ ಮುಳುವಾದ ‘ಚಾರ್ ಸೌ ಪಾರ್’

Date:

ಛಗನ್ ಭುಜಬಲ್ ಮಹಾರಾಷ್ಟ್ರ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ವ್ಯಕ್ತಿ. ಅಜಿತ್ ಪವಾರ್ ಬಣದ ಎನ್‌ಸಿಪಿ ನಾಯಕ ಕೂಡ‌. ಚುನಾವಣೆ ಮುಗಿದ ಮೇಲೆ ಮತ್ತು ಫಲಿತಾಂಶಕ್ಕೆ ಒಂದು ದಿನ ಮುಂಚೆ ಭುಜಬಲ್ ನೀಡಿದ ಹೇಳಿಕೆ ಗಮನಾರ್ಹ. “ಈ ಬಾರಿ ಬಿಜೆಪಿಗೆ ನಾಲ್ಕು ನೂರು ಸೀಟು (ಚಾರ್ ಸೌ ಪಾರ್) ಬರುತ್ತದೆ ಎಂದು ಪ್ರಚಾರ ಮಾಡಿದ್ದೇ ನಮಗೆ ಮುಳುವಾಗಿದೆ. ಮಹಾರಾಷ್ಟ್ರದಲ್ಲಿ ನಮಗೆ ಹಿನ್ನಡೆಯಾಗಲಿದೆ. ಬಿಜೆಪಿ ನಾಲ್ಕು ನೂರು ಸೀಟು ಗೆದ್ದರೆ ಸಂವಿಧಾನ ಬದಲಿಸುತ್ತಾರೆ, ಪ್ರಜಾತಂತ್ರ ಅಳಿಯುತ್ತದೆ ಎಂದು ದಲಿತರು ಭಾವಿಸಿದರು. ನಾವು ಅವರ ಮನವೊಲಿಸಲು ಪ್ರಚಾರದ ವೇಳೆ ಸಾಕಷ್ಟು ಪ್ರಯತ್ನಿಸಿದೆವು. ‘ಚಾರ್ ಸೌ ಪಾರ್’ ಅನ್ನಬಾರದಿತ್ತು” ಎಂದಿದ್ದರು ಭುಜಬಲ್.

- Advertisement -

ಬಿಜೆಪಿಯ ಹಿಡನ್ ಅಜೆಂಡಾವೇ ಸಂವಿಧಾನ ಬದಲಾವಣೆಯೆಂದು ಭಾವಿಸಲು ಮತ್ತು ಇದುವೇ ಬಿಜೆಪಿಯ ಮುಕ್ತ ಅಜೆಂಡಾ ಎಂದು ತಿಳಿಯುವುದಕ್ಕೆ ಕಾರಣವಾಗಿದ್ದು ಸ್ವತಃ ಬಿಜೆಪಿಗರು. ಸಂವಿಧಾನ ಬದಲಾವಣೆಗಾಗಿ ಮೋದಿಗೆ 400 ಸೀಟು ಕೊಡಿ ಎಂದು ಕರ್ನಾಟಕದ ಬಿಜೆಪಿ ಮುಖಂಡ ಅನಂತಕುಮಾರ್ ಹೆಗಡೆಯೇ ಸ್ಪಷ್ಟವಾಗಿ ಹೇಳಿದ್ದರು. ಇದೇ ರೀತಿಯ ಮಾತುಗಳನ್ನು ದೇಶದ ವಿವಿಧ ಭಾಗದಲ್ಲಿನ ಬಿಜೆಪಿ ಅಭ್ಯರ್ಥಿಗಳು ಆಡಿದರು. ಭುಜಬಲ್ ಆತಂಕ ನಿಜವಾಯಿತು. ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 30ರಲ್ಲಿ ಇಂಡಿಯಾ ಮೈತ್ರಿಕೂಟ ಗೆದ್ದು ಬೀಗಿದೆ. ತೀವ್ರ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನಾವಿಸ್ ರಾಜೀನಾಮೆ ನೀಡಿರುವ ಪ್ರಸಂಗವೂ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಹಿಂಸಾತ್ಮಕ ಚುನಾವಣೆಗೆ ಸಾಕ್ಷಿಯಾದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 2% ಮತಗಳನ್ನು ಹೆಚ್ಚಿಸಿಕೊಂಡು ಕಳೆದ ಲೋಕಸಭಾ ಚುನಾವಣೆಗಿಂತ 7 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ. ಈಗ ಟಿಎಂಸಿಯ ಬಲ 29. ಉತ್ತರ ಪ್ರದೇಶವಂತೂ ಬಹುದೊಡ್ಡ ಸಂದೇಶವನ್ನೇ ನೀಡಿದೆ‌. ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಫಾರ್ಮೂಲಾವನ್ನು ಬಳಸಿದ ಎಸ್‌ಪಿ-ಕಾಂಗ್ರೆಸ್ ಪೀನಿಕ್ಸ್ ನಂತೆ ಪುಟಿದೆದ್ದಿವೆ. 80ರಲ್ಲಿ 43 ಕ್ಷೇತ್ರಗಳನ್ನು ಇಂಡಿಯಾ ಬಣ ಗೆದ್ದಿರುವುದು ಸಾಮಾನ್ಯ ಸಾಧನೆಯಂತೂ ಅಲ್ಲ‌.

‘ಚಾರ್ ಸೌ ಪಾರ್’ ಎಂಬುದು ವಾಸ್ತವದಲ್ಲಿ ಅತಿ ಉತ್ಸಾಹದ ಹೇಳಿಕೆಯೇನೂ ಆಗಿರಲಿಲ್ಲ. ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ಚುನಾವಣಾ ಕಣದ ನೈಜ ಸಮಸ್ಯೆಗಳು ಬದಿಗೆ ಸರಿಸಲು ಸೃಷ್ಟಿಸಿದ ರಾಜಕೀಯ ಘೋಷಣೆಯಾಗಿತ್ತು. ವಾಜಪೇಯಿಯವರು ಪ್ರಧಾನಿ ಹುದ್ದೆಯನ್ನು ಮರು ಏರುವ ಕನಸಿನಲ್ಲಿ ‘ಇಂಡಿಯಾ ಶೈನಿಂಗ್’ ಎಂಬ ಕಲ್ಪಿತ ಪ್ರಚಾರವನ್ನು ಮಾಡಿದ್ದಂತೆಯೇ ‘ಚಾರ್ ಸೌ ಪಾರ್’ ಕೂಡ ಇತ್ತು. ಆದರೆ ಮೋದಿಯ ಸರ್ವಾಧಿಕಾರಿ ಧೋರಣೆಗಳು ಹೆಚ್ಚಾಗುತ್ತವೆ ಎಂಬುದನ್ನು ಚಾರ್ ಸೌ ಪಾರ್ ಘೋಷಣೆ ರವಾನಿಸಿತ್ತು.

ದುರ್ಯೋಧನನ ತೊಡೆ ಮುರಿದ ಭೀಮಗದೆ ಮತದಾರರ ತೋರುಬೆರಳು. ಗರ್ವಪಡುತ್ತಿದ್ದ ಮೋದಿ ನೇತೃತ್ವದ ಬಿಜೆಪಿಯನ್ನು ದೊಡ್ಡ ಪಕ್ಷವಾಗಿ ಗೆಲ್ಲಿಸಿದರೂ, ಮಿತ್ರಪಕ್ಷಗಳ ಹಂಗಿನಲ್ಲಿ ಒದ್ದಾಡಬೇಕಾದ ರೀತಿ ಫಲಿತಾಂಶವನ್ನು ದೇಶದ ಜನ ನೀಡಿದ್ದಾರೆ. ನಿರೀಕ್ಷೆಯಂತೆ ಕರ್ನಾಟಕ, ಬಿಹಾರದಲ್ಲಿ ಇಂಡಿಯಾ ಬಣ ಹೆಚ್ಚು ಸೀಟುಗಳನ್ನು ಗೆದ್ದಿದ್ದರೆ ಮೋದಿಗೆ ಅಧಿಕಾರದ ಅವಕಾಶವೂ ದೊರಕುತ್ತಿರಲಿಲ್ಲ.ಪ್ರಚಂಡ ಬಹುಮತ ನೀಡಿದ ಯೂಪಿ ಜನತೆ ಈ ಬಾರಿ ಎನ್.ಡಿ.ಎ.ಗೆ ತಕ್ಕ ಪಾಠ ಕಲಿಸಿದ್ದಾರೆ. ರಾಮಮಂದಿರದ ಯಾವುದೇ ಎಫೆಕ್ಟ್ ಯೂಪಿಯಲ್ಲಿ ಆಗದಿರುವುದು ಈ ಸಲದ ಚುನಾವಣೆಯ ಬಹುದೊಡ್ಡ ಸಂದೇಶ.

ಮೋದಿ ಮಾಡಿದ ವಿಷಕಾರಿ ಭಾಷಣಗಳು, ಏಕಚಕ್ರಾಧಿಪತ್ಯದ ಅಹಂಕಾರ ಎಲ್ಲವಕ್ಕೂ ಉತ್ತರ ಸಿಕ್ಕಿದೆ. ಚಾರ್ ಸೌ ಪಾರ್ ಎಂಬುದು ಈಗ ಟೀಕೆಯ ವಸ್ತುವಾಗಿದೆ. ಈವರೆಗೆ ಯಾರ ಹಂಗೂ ಇಲ್ಲದೆ ಮೆರೆದ ಮೋದಿಗೆ ಇತರರನ್ನು ಸಂಭಾಳಿಸುವುದು ತಿಳಿದಿದೆಯೊ ಇಲ್ಲವೋ ಸದ್ಯಕ್ಕೆ ಅರ್ಥವಾಗಲ್ಲ. ಜೆಡಿಯು ನಾಯಕ ನಿತೀಶ್ ಯಾವಾಗ ಬೇಕಾದರೂ ಉಲ್ಟಾ ಹೊಡೆಯುವ ಆಸಾಮಿ. ಟಿಡಿಪಿಯ ಚಂದ್ರಬಾಬು ನಾಯ್ಡು ಕೂಡ ಇದಕ್ಕೆ ಹೊರತಲ್ಲ. ಅಧಿಕಾರ ಕಳೆದುಕೊಳ್ಳುವ ತೂಗುಗತ್ತಿಯನ್ನು ಮೋದಿಯ ತಲೆಯ ಮೇಲೆ ಕಟ್ಟಿರುವುದು ಸ್ವತಃ ಮೋದಿಯೇ ಹೊರತು, ಯಾವ ಹೊರಗಿನವರೂ ಅಲ್ಲ. ಅಧಿಕಾರ ಎಂದಿಗೂ ಅಸ್ಥಿರವೆಂದು ತಿಳಿದಿದ್ದರೆ ಗರ್ವಭಂಗದ ಭಯವೂ ಬರುತ್ತಿರಲಿಲ್ಲ.

ಕೊನೆಯ ಮಾತು: ಈ ಬಾರಿ ಅಸಲಿಯಾಗಿ ಚುನಾವಣೆ ನಡೆದದ್ದು ಮಹಾರಾಷ್ಟ್ರ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಎಂದು ರಾಜಕೀಯ ವಿಶ್ಲೇಷಕರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದರು. ಇದಕ್ಕೆ ಕರ್ನಾಟಕದ ಕಾಂಗ್ರೆಸ್ ಮತ್ತು ಬಿಹಾರದ ಆರ್.ಜೆ.ಡಿ ನಾಯಕರು ಕಿವಿಯಾಗಿ, ಚುನಾವಣಾ ತಂತ್ರಗಾರಿಕೆಗಳನ್ನು ರೂಪಿಸಿದ್ದರೆ, ಬಿಜೆಪಿಗೆ 240 ಬರುವುದಿರಲಿ, ಎನ್.ಡಿ.ಎ ಬಣಕ್ಕೆ ಮ್ಯಾಜಿಕ್ ನಂಬರ್ ಕೂಡ ಸಿಗುತ್ತಿರಲಿಲ್ಲ ಎಂಬುದು ವಾಸ್ತವ. ಚಾರ್ ಸೌ ಪಾರ್ ಎಂಬ ಅಧಿಕಾರದ ಧಿಮಾಕು ಫಲಿತಾಂಶದ ಮೂಲಕ ಕೊನೆಯಾಗಿದೆ. ಹೊಸ ಸರ್ಕಾರ ಹೀಗೆ ಅಸ್ಥಿರವಾಗಿರಲಿ ಎಂದು ಬಯಸೋಣ. ಅಸ್ಥಿರತೆ ಇದ್ದಾಗ ಮಾತ್ರ ಅಧಿಕಾರವಂತರು ಭಯದಲ್ಲಿರುತ್ತಾರೆ, ಒಂದಿಷ್ಟಾದರೂ ಜನಪರ ಕೆಲಸ ಮಾಡುತ್ತಾರೆ ಅಲ್ಲವೇ?

– ವೈ.ಬಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಬಿಜೆಪಿ, ಪೊಲೀಸ್ ವ್ಯವಸ್ಥೆ ವಿರುದ್ಧ ಭದ್ರತಾ ಸಿಬ್ಬಂದಿ ಆಕ್ರೋಶ

ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ದಮನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಭಟನೆ...

ಪ್ರತಿಭಟನೆಗೆ ವಾಂಗ್‌ಚುಕ್ ಬೆಂಬಲ: ಲಡಾಖ್‌ನ ‘ನೀರಿನ ಜೈವಿಕ ಬಾಂಬ್‌ಗಳ’ ಕಡೆಗೆ ಗಮನ ಹರಿಸಲು ಮನವಿ

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿರುವ ಬೃಹತ್...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಸಿಪಿಐಎಂ, ಎಸ್‌ಎಫ್‌ಐ ನಾಯಕರು ಮತ್ತು ವಕೀಲರ ಬಂಧನ

ಸಿಜೆಪಿ ಕರೆಕೊಟ್ಟಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯ ಜಂತರ್‌ ಮಂತರ್‌ಗೆ ತೆರಳುತ್ತಿದ್ದ...