ಮೀಸಲಾತಿ ಘೋಷಣೆ ಎಂಬುದು ಈ ಸರ್ಕಾರಕ್ಕೆ ಮಕ್ಕಳ ಆಟಿಕೆಯಂತಾಗಿದೆ: ಕುಮಾರಸ್ವಾಮಿ ಕಿಡಿ

Date:

  • ಮೀಸಲಾತಿ ಘೋಷಣೆಗೆ ಮುನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದೀರಾ?
  • ಮೋದಿಗೆ ಕನ್ನಡಿಗರ ಮತ ಬೇಕು, ಆದರೆ, ಕನ್ನಡಿಗರಿಗೆ ಪ್ರಧಾನಿ ಕೊಡುಗೆ ಏನು?

ಮೀಸಲಾತಿ ಘೋಷಣೆ ಎಂಬುದು ಈ ಸರ್ಕಾರಕ್ಕೆ ಮಕ್ಕಳ ಆಟಿಕೆಯಂತಾಗಿದೆ. ರಾಜ್ಯ ಸರ್ಕಾರ ಯಾವ ಆಧಾರದಲ್ಲಿ ಮೀಸಲಾತಿ ಘೋಷಣೆ ಮಾಡಿದೆ. ಮೀಸಲಾತಿ ಘೋಷಣೆಗೆ ಮುನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದೀರಾ? ಯಾರ ಸಲಹೆ ಪಡೆದು ಮೀಸಲಾತಿ ಘೋಷಣೆ ಮಾಡಿದ್ದೀರಾ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಯಶಸ್ವಿ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

“ಈ ಸರ್ಕಾರದ ಸಾಧನೆ ಬಣ್ಣ ಬಣ್ಣದ ಜಾಹೀರಾತಿಗೆ ಸೀಮಿತವಾಗಿದೆ. ಉತ್ತರ ಕರ್ನಾಟಕ ಸಿಎಂ ಕ್ಷೇತ್ರದ ಬಡತನದ ಬಗ್ಗೆ ಕೇಂದ್ರ ವರದಿ ಮಾಡಿದೆ. ಅಪೌಷ್ಟಿಕತೆಯ ಬಗ್ಗೆಯೂ ಕೇಂದ್ರ ಸರ್ಕಾರ ವರದಿ ನೀಡಿದೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಹೇಳುತ್ತಾರೆ. ಬಡತನ ಅಪೌಷ್ಟಿಕತೆ ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ವಾಗ್ದಾಳಿ ನಡೆಸಿದರು.

ಮೋದಿ ಸಮಾಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಅವರನ್ನು ಸಮಾಧಿ ಮಾಡಲು ಯಾರಿಗೆ ಆಗುತ್ತದೆ. ಅಂಬೇಡ್ಕರ್ ಅವರ ಸಂವಿಧಾನ ಸಮಾಧಿ ಮಾಡಲು ಹೊರಟಿರುವುದೇ ಅವರು. ಒಬ್ಬ ಪ್ರಧಾನಿ ಬಾಯಿಂದ ಈ ರೀತಿಯ ಮಾತು ಎಷ್ಟರಮಟ್ಟಿಗೆ ಸರಿ? ಮೋದಿಗೆ ಕನ್ನಡಿಗರ ಮತ ಬೇಕು, ಕನ್ನಡಿಗರಿಗೆ ಅವರ ಕೊಡುಗೆ ಏನು” ಎಂದು ಪ್ರಶ್ನಿಸಿದರು.

“ಸಮಾವೇಶಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ಮುಂದಿನ ಏಪ್ರಿಲ್ 10ರವೆಗೂ ಪಂಚರತ್ನ ಯಾತ್ರೆ ಮುಂದುವರೆಯಲಿದೆ. ಬೆಂಗಳೂರ ನಗರದ ಕ್ಷೇತ್ರದಲ್ಲಿ ನಾಳೆಯಿಂದ ರಥಯಾತ್ರೆ ನಡೆಯಲಿದೆ. 6ರಂದು ಮೈಸೂರಿನ ಪಿರಿಯಾಪಟ್ಟಣ, 7 ರಂದು ಕೆಆರ್ ನಗರ ನಂತರ ಕೊಳ್ಳೇಗಾಲ ಹನೂರು ಗುಂಡ್ಲುಪೇಟೆ ಕ್ಷೇತ್ರದಲ್ಲಿ ರಥಯಾತ್ರೆ ನಡೆಸುತ್ತೇವೆ” ಎಂದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ | ಪ್ರತ್ಯೇಕ ಆಡಳಿತ ಕೋರಿದ್ದ 10 ಶಾಸಕರಿಗೆ ಶೋಕಾಸ್‌ ನೋಟಿಸ್

ರಾಜ್ಯ ವಿಧಾನಸಭೆಯ ಸವಲತ್ತುಗಳು ಮತ್ತು ನೀತಿ ಸಮಿತಿ ಶಾಸಕರಿಗೆ ಶೋಕಾಸ್‌ ನೋಟಿಸ್ ಕುಕಿ...

ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

ಭಾಲ್ಕಿ ಕ್ಷೇತ್ರದ ಕಳೆದ 70 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಮೂರು ಅವಧಿ...

ಧಾರವಾಡ ಲೋಕಸಭಾ ಕ್ಷೇತ್ರ | ಪ್ರಲ್ಹಾದ್‌ ಜೋಶಿ ಬದಲು ಹೊಸ ಮುಖಕ್ಕೆ ಮನ್ನಣೆ ನೀಡಲು ಲಿಂಗಾಯತರ ಒತ್ತಾಯ

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 13 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್‌...

ಆಗಸ್ಟ್‌ 1 ರಂದು ಗೃಹಜ್ಯೋತಿ, ಆಗಸ್ಟ್‌ 17-18 ರಂದು ಗೃಹಲಕ್ಷ್ಮಿ ಯೋಜನೆ ಜಾರಿ : ಸಿಎಂ ಸಿದ್ದರಾಮಯ್ಯ

ಯೋಜನೆಗಳ ಅನುಷ್ಠಾನ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ...