ರಾಜ್ಯದ 48 ಕಡೆ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಬೇಟೆ: ಕಂತೆ ಕಂತೆ ನೋಟು, ಅಕ್ರಮ ಆಸ್ತಿ ವಶಕ್ಕೆ

Date:

Advertisements


ರಾಜ್ಯದ ಬೆಂಗಳೂರು ನಗರ, ಚಿತ್ರದುರ್ಗ, ಮೈಸೂರು, ತುಮಕೂರು, ಬೀದರ್, ಧಾರವಾಡ, ದಾವಣಗೆರೆ, ರಾಯಚೂರು, ಮಡಿಕೇರಿಯ 48 ಕಡೆಗಳಲ್ಲಿ ಗುರುವಾರ ಬೆಳಗ್ಗೆ ಏಕಕಾಲದಲ್ಲಿ 200 ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಸರ್ಕಾರಿ ಅಧಿಕಾರಿಗಳ ಕೊಟ್ಯಂತರ ರೂ. ಅಕ್ರಮ ಆಸ್ತಿ ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ 23 ಸ್ಥಳಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಆದಾಯ ಮೀರಿ ಆಸ್ತಿ ಗಳಿಸಿದವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬೆಂಗಳೂರಿನ ಮಹದೇವಪುರ ಬಿಬಿಎಂಪಿ ಆರ್​ಐ ಆಗಿರುವ ನಟರಾಜ್​ ಮನೆ ಮೇಲೆ ದಾಳಿ ವೇಳೆ ಅಂದಾಜು 4.91 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆ ಆಗಿದೆ.

ಆರ್‌ಐ ಎಸ್.ನಟರಾಜ್‌ಗೆ ಸೇರಿದ 4 ಸ್ಥಳಗಳಲ್ಲಿ ದಾಳಿ ಮಾಡಿದ್ದು, 3.91 ಕೋಟಿ ರೂ. ಸ್ಥಿರಾಸ್ತಿ, 1 ಕೋಟಿ ರೂ. ಚರಾಸ್ತಿ, ನಿಗದಿತ ಆದಾಯಕ್ಕಿಂತ ಶೇ 391ಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿದೆ. ಗ್ರೇಡ್-2 ತಹಸೀಲ್ದಾರ್ ಶಿವರಾಜು ಮನೆ ಮೇಲೆ ದಾಳಿ ವೇಳೆ 3.50 ಕೋಟಿ ರೂ. ಸ್ಥಿರಾಸ್ತಿ, 65 ಲಕ್ಷ ರೂ. ಚರಾಸ್ತಿ ಸೇರಿದಂತೆ ಒಟ್ಟು 4.15 ಕೋಟಿ ರೂ. ಪತ್ತೆ ಆಗಿದೆ.

Advertisements

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿಗೆ ಸೇರಿದ್ದ 6 ಸ್ಥಳಗಳಲ್ಲಿ ದಾಳಿ ನಡೆದಿದ್ದು, 2.80 ಕೋಟಿ ರೂ. ಸ್ಥಿರಾಸ್ತಿ, 1.15 ಕೋಟಿ ರೂ. ಚರಾಸ್ತಿ ಸೇರಿದಂತೆ ಒಟ್ಟು 3.95 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಬಿಲ್ಕಿಸ್‌ ಬಾನೊ ಪ್ರಕರಣ | ಆಯ್ದ ವ್ಯಕ್ತಿಗಳಿಗೆ ಮಾತ್ರ ಏಕೆ ಕ್ಷಮಾದಾನ?; ಗುಜರಾತ್‌, ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಚಿತ್ರದುರ್ಗ: ಎ.ಇ. ಕೆ.ಮಹೇಶ್
ಚರಾಸ್ತಿ : ಅಂದಾಜು ಮೌಲ್ಯ -20 ಲಕ್ಷ ರೂ., ಸ್ಥಿರಾಸ್ತಿ: ಅಂದಾಜು ಮೌಲ್ಯ 88 ಲಕ್ಷ ರೂ. ಒಟ್ಟು ಮೌಲ್ಯ 1 ಕೋಟಿ 8 ಲಕ್ಷ ರೂ. ಅಂದಾಜು ಮೌಲ್ಯ ಶೇ. 211 ಹೆಚ್ಚಳ

ತುಮಕೂರು: ಜಂಟಿ ನಿರ್ದೇಶಕ ಕೆ.ಎನ್. ನಾಗರಾಜು
ಚರಾಸ್ತಿ: ಅಂದಾಜು ಮೌಲ್ಯ 41 ಲಕ್ಷ ರೂ., ಸ್ಥಿರಾಸ್ತಿ ಅಂದಾಜು ಮೌಲ್ಯ 3 ಕೋಟಿ ರೂ. ಒಟ್ಟು ಮೌಲ್ಯ 3.41 ಕೋಟಿ ರೂ. ಅಂದಾಜು ಮೌಲ್ಯ ಶೇ. 138.19 ಹೆಚ್ಚಳ

ಮಡಿಕೇರಿ: ಕಂದಾಯ ಇಲಾಖೆ ಅಧಿಕಾರಿ ಡಾ. ನಂಜುಂಡೇಗೌಡ
ಚರಾಸ್ತಿ: ಅಂದಾಜು ಮೌಲ್ಯ – 98 ಲಕ್ಷಕ್ಕೂ ಅಧಿಕ ಸ್ಥಿರಾಸ್ತಿ: ಅಂದಾಜು ಮೌಲ್ಯ – 2,55,00,000 ಒಟ್ಟು ಮೌಲ್ಯ-3,53,43,5 18 ಅಂದಾಜು ಮೌಲ್ಯ ಶೇ. 243.20 ಹೆಚ್ಚಳ

ಕೊಡಗು: ಎ.ಇ ಕೆ.ಕೆ. ರಘುಪತಿ
ಚರಾಸ್ತಿ: ಅಂದಾಜು ಮೌಲ್ಯ: 1,32 ಕೋಟಿ ರೂ., ಸ್ಥಿರಾಸ್ತಿ:ಅಂದಾಜು ಮೌಲ್ಯ: 2.34 ಕೋಟಿ ರೂ. ಒಟ್ಟು ಮೌಲ್ಯ-3.66 ಕೋಟಿ ರೂ. ಅಂದಾಜು ಮೌಲ್ಯ ಶೇ. 205 ಹೆಚ್ಚಳ

ದಾವಣಗೆರೆ: ಎಸ್.ಸತೀಶ್
ಚರಾಸ್ತಿ: ಅಂದಾಜು ಮೌಲ್ಯ: 46 ಲಕ್ಷ ರೂ. ಸ್ಥಿರಾಸ್ತಿ: ಅಂದಾಜು ಮೌಲ್ಯ: 1.16 ಕೋಟಿ ರೂ. ಒಟ್ಟು ಮೌಲ್ಯ: 1.62 ಕೋಟಿ ರೂ.

ಕೊಪ್ಪಳ: ಮಂಜುನಾಥ, ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರ

ಚರಾಸ್ತಿ: ಅಂದಾಜು ಮೌಲ್ಯ: 57 ಲಕ್ಷ ರೂ. ಸ್ಥಿರಾಸ್ತಿ: ಅಂದಾಜು ಮೌಲ್ಯ: 2.22 ಕೋಟಿ ರೂ. ಒಟ್ಟು ಮೌಲ್ಯ: 2.79 ಕೋಟಿ ರೂ. ಅಂದಾಜು ಮೌಲ್ಯ ಶೇ. 136 ಹೆಚ್ಚಳ

ಬೀದರ್: ಪೊಲೀಸ್ ಪೇದೆ ವಿಜಯಕುಮಾರ್
ಚರಾಸ್ತಿ: ಅಂದಾಜು ಮೌಲ್ಯ: 54 ಲಕ್ಷ ರೂ., ಸ್ಥಿರಾಸ್ತಿ: ಅಂದಾಜು ಮೌಲ್ಯ: 1.26 ಕೋಟಿ ರೂ. ಒಟ್ಟು ಮೌಲ್ಯ: 1.80 ಕೋಟಿ ರೂ. ಅಂದಾಜು ಮೌಲ್ಯ ಶೇ. 136 ರಷ್ಟು ಹೆಚ್ಚಳ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X