ಖರ್ಗೆ ಕುಟುಂಬದ ಮೇಲೆ ಮಾತನಾಡಿ ರಾತ್ರೋರಾತ್ರಿ ನಾಯಕರಾಗಲು ಹೊರಟಿದ್ದಾರೆ: ರಮೇಶ್‌ ಬಾಬು ಕಿಡಿ

Date:

Advertisements

ಸುಳ್ಳನ್ನೇ ಹಲವುಬಾರಿ ಪ್ರತಿಪಾದಿಸಿ ಸತ್ಯವೆಂದು ಬಿಂಬಿಸುವ ಪರಿಪಾಠವನ್ನು ಕರಗತಮಾಡಿಕೊಂಡಿರುವ ಬಿಜೆಪಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಹಂಚಿಕೆ ಆಗಿರುವ ನಾಗರೀಕ ನಿವೇಶನ ಕುರಿತು ಮತ್ತೆ ಮತ್ತೆ ಮೈ ಪರಚಿಕೊಳ್ಳುತ್ತಿದೆ ಎಂದು ಮಾಜಿ ಎಂಎಲ್‌ಸಿ ರಮೇಶ್‌ ಬಾಬು ಟೀಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ನಾಗರೀಕ ನಿವೇಶನದ ಹಂಚಿಕೆಯ ಕುರಿತು ಸಾಮಾನ್ಯ ಜ್ಞಾನವಿಲ್ಲದ ಬಿಜೆಪಿ ನಾಯಕರು ಪ್ರಿಯಾಂಕಾ ಖರ್ಗೆ ಮತ್ತು ಅವರ ಕುಟುಂಬದ ಮೇಲೆ ಆರೋಪ ಮಾಡಿ ರಾತ್ರೋರಾತ್ರಿ ನಾಯಕರಾಗಲು ಹೊರಟಿದ್ದಾರೆ” ಎಂದು ಕುಟುಕಿದರು.

“ಕೆಐಡಿಬಿ 07-02-2024 ರಲ್ಲಿ ಅಧಿಕೃತ ಜ್ಞಾಪನ ಪಾತ್ರದ ಮೂಲಕ ನಾಗರೀಕ ನಿವೇಶನಗಳನ್ನು ಹಂಚಿಕೆ ಮಾಡಲು ಕೆಲವು ನಿಯಮಾವಳಿಗಳನ್ನು ನೀಡಿರುತ್ತದೆ. ಇದಕ್ಕೆ ಪೂರಕವಾಗಿ ನಾಗರೀಕ ನಿವೇಶನಗಳಿಗೆ ಅರ್ಜಿಗಳನ್ನು ಕೋರಿ ಪತ್ರಿಕಾ ಜಾಹಿರಾತನ್ನು ನೀಡಿರುತ್ತದೆ ಮತ್ತು ತನ್ನ ವೆಬ್ಸೈಟ್ ನಲ್ಲಿ ಸಾರ್ವಜನಿಕ ಮಾಹಿತಿ ನೀಡಿರುತ್ತದೆ” ಎಂದರು.

Advertisements

“ಕೆಐಡಿಬಿ ಗೆ ಸೇರಿದ ಬೆಂಗಳೂರಿನ 3 ವಿಭಾಗ ಮತ್ತು ಇತರೆ 9 ನಗರಗಳ ಸುಮಾರು 193 ನಾಗರೀಕ ನಿವೇಶನಗಳಿಗೆ ಅರ್ಜಿಯನ್ನು ಕರೆದಿರುತ್ತದೆ. ಇದರ ಅನ್ವಯ ಬೆಂಗಳೂರಿನ 3 ವಲಯದಲ್ಲಿ ನಾಗರೀಕ ನಿವೇಶನಗಳಿಗೆ ಕ್ರಮವಾಗಿ 24,22 ಮತ್ತು 17 ಅರ್ಜಿಗಳು ಬಂದಿರುತ್ತದೆ. ಇವುಗಳಲ್ಲಿ ಹಲವು ಸಂಘ ಸಂಸ್ಥೆಗಳಿಗೆ ಸಿವಿಕ್ ನಿವೇಶನ ಹಂಚಿಕೆ ಆಗಿದ್ದು, ಅವುಗಳಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಸಹ ಒಂದಾಗಿದೆ” ಎಂದು ಹೇಳಿದರು.

“ನಾರಾಯಣಸ್ವಾಮಿ ಅವರು ವ್ಯಕ್ತಿಗತವಾಗಿ ಟೀಕೆ ಮಾಡುವ ಮೊದಲು ಮಾಹಿತಿ ಪಡೆದುಕೊಂಡು ಟೀಕೆ ಮಾಡಬೇಕು. ನಾರಾಯಣ ಸ್ವಾಮಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಬಿಡಿಎ ಉದಾಹರಣೆ ನೀಡಿದ್ದಾರೆ. ಅವರಿಗೆ ವಿಷಯದ ಕೊರತೆಯಿದೆ. 1983ರಲ್ಲಿ ತಂದ ತಿದ್ದುಪಡಿ ಪ್ರಕಾರ ಬಿಡಿಎ ಮೂಲೆ ನಿವೇಶನಗಳನ್ನು ಮಂಜೂರು ಮಾಡುವಂತಿಲ್ಲ ಹರಾಜು ಮಾಡಬೇಕು ಎನ್ನುವ ನಿಯಮ ತಿಳಿದು ಮಾಡನಾಡಬೇಕು. ಯಾವುದೇ ಕಾರಣಕ್ಕೂ ವ್ಯಕ್ತಿಗತವಾಗಿ ನಿವೇಶನಗಳನ್ನು ಪಡೆಯಲು ಆಗುವುದಿಲ್ಲ. ಇದನ್ನು ಸಂಘ, ಸಂಸ್ಥೆಗಳು ಮಾತ್ರ ಪಡೆಯಲು ಸಾಧ್ಯ” ಎಂದರು.

“ಪರಿಶಿಷ್ಟರ ಎಲ್ಲಾ ಸೌಲಭ್ಯಗಳನ್ನು ಖರ್ಗೆ ಅವರ ಕುಟುಂಬವೇ ಪಡೆದಿದೆ ಎನ್ನುವ ರೀತಿ ಮಾತನಾಡಿರುವುದು ಸರಿಯಿಲ್ಲ. ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಎರಡೂ ಕಡೆಯೂ ಒಂದಷ್ಟು ಕಡೆ ಅಧಿಕಾರ ಅನುಭವಿಸಿದರು. ಆಗ ಇವರು ಬೇಡ ಎಂದು ಹೇಳಬೇಕಿತ್ತು. ಮೈಸೂರು ಹಾಗೂ ಮಂಡ್ಯದಲ್ಲಿ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಈಗ ಅದನ್ನು ಹರಾಜು ಹಾಕಿದರೆ ಕೋಟ್ಯಂತರ ರೂಪಾಯಿ ಬರುತ್ತದೆ ಇದು ಯಾವ ಕೊಡುಗೆ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಪ್ರಶ್ನಿಸಿದರು.

“ದಲಿತ ನಾಯಕರಾಗಿ ಬೆಳೆಯುತ್ತಿರುವವರನ್ನು ದಲಿತ ನಾಯಕರನ್ನೇ ಇಟ್ಟುಕೊಂಡು ಹಣಿಯುವ ಕೆಲಸ ಮಾಡುತ್ತದೆ ಬಿಜೆಪಿ. ಕಸ ಪೊರಕೆಯಂತೆ ಬಳಸಿ ಬಿಸಾಡುತ್ತಾರೆ. ದಲಿತ ನಾಯಕರು ಬಿಜೆಪಿಗೆ ಹೋಗಿ ಬಲಿಯಾಗಬೇಡಿ. ಅಂಬೇಡ್ಕರ್ ಅನುಯಾಯಿಗಳು ಏಕೆ ಬಿಜೆಪಿಗೆ ಹೋಗಿ ನಾಶವಾಗುತ್ತಿದ್ದಾರೆ. ಇನ್ನಾದರೂ ನಾರಾಯಣಸ್ವಾಮಿಗಳು ಬುದ್ದಿ ಕಲಿಯಲಿ” ಎಂದು ವಾಗ್ದಾಳಿ ನಡೆಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X