ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿ ಮಂಗಳವಾರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ತಮಿಳು ನಟಿ, ರಾಜಕಾರಣಿ ರಂಜನಾ ನಾಚಿಯಾರ್ ಬುಧವಾರ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರ್ಪಡೆಯಾಗಿದ್ದಾರೆ.
ಎಂಟು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ರಂಜನಾ ಹಿಂದಿ ಹೇರಿಕೆ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ತೊರೆದಿದ್ದಾರೆ. ತ್ರಿಭಾಷಾ ನೀತಿ ಹೇರಿಕೆ ತಪ್ಪು” ಎಂದು ತನ್ನ ರಾಜೀನಾಮೆಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ತ್ರಿಭಾಷಾ ನೀತಿ ಹೇರಿಕೆಗೆ ವಿರೋಧ: ಬಿಜೆಪಿ ತೊರೆದ ತಮಿಳು ನಟಿ ರಂಜನಾ ನಾಚಿಯಾರ್
ಚೆನ್ನೈ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ವಿಜಯ್ ಆಯೋಜಿಸಿದ್ದ ಟಿವಿಕೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ ಉಪಸ್ಥಿತರಿದ್ದ ನಟಿ ರಂಜನಾ ಟಿವಿಕೆ ಸೇರಿದ್ದಾರೆ. ತಮ್ಮ ಸಭೆಯಲ್ಲಿ, ಟಿವಿಕೆ ಮುಖ್ಯಸ್ಥ ವಿಜಯ್ ಕೂಡ ಶಿಕ್ಷಣ ನೀತಿಯ ವಿರುದ್ಧ ಧ್ವನಿ ಎತ್ತಿದರು.
VIDEO | Tamil Nadu: Actor turned politician and BJP leader Ranjana Nachiyaar joins actor Vijay’s TVK party.
— Press Trust of India (@PTI_News) February 26, 2025
“Tamil Nadu people see him as the next MGR… He is the hope of Tamil Nadu," she says as she participates in TVK’s first-year anniversary celebrations in Mamallapuram,… pic.twitter.com/JPvAUdOHmf
“ತಮ್ಮ ರಾಜೀನಾಮೆ ಪತ್ರದಲ್ಲಿ, “ಒಬ್ಬ ತಮಿಳು ಮಹಿಳೆಯಾಗಿ, ತ್ರಿಭಾಷಾ ನೀತಿಯ ಹೇರಿಕೆ, ದ್ರಾವಿಡರ ಕಡೆಗೆ ಹೆಚ್ಚುತ್ತಿರುವ ದ್ವೇಷ ಮತ್ತು ತಮಿಳುನಾಡಿನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ನಿರ್ಲಕ್ಷಿಸುವುದನ್ನು ನಾನು ಒಪ್ಪಲು ಸಾಧ್ಯವಿಲ್ಲ” ಎಂದು ಬರೆದಿದ್ದಾರೆ.
ಸದ್ಯ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುವುದರ ವಿರುದ್ಧವಾಗಿ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ವಾಗ್ವಾದ ನಡೆಯುತ್ತಲೇ ಇದೆ. ಈ ನಡುವೆ ರಂಜನಾ ಬಿಜೆಪಿ ತೊರೆದು ಟಿವಿಕೆ ಸೇರಿದ್ದಾರೆ.
