ರಾಯಚೂರು | ಟೋಲ್ ಗೇಟ್ ತೆರವುಗೊಳಿಸಲು ರಸ್ತಾ ರುಕೋ ಪ್ರತಿಭಟನೆ

Date:

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗೊಬ್ಬುರ ಹೋಬಳಿ ವ್ಯಾಪ್ತಿಯ ಕಾಕರಗಲ್ ಬಳಿಯಿರುವ ಟೋಲ್‌ಗೇಟ್ ತೆರವುಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆ ರಸ್ತಾ ರುಕೊ ಪ್ರತಿಭಟನೆ ನಡೆಸಿತು.

ಕಲ್ಮಲ್‌ನಿಂದ ತಿಂಥಣಿ ಬ್ರಿಡ್ಜ್ ವರೆಗಿನ ರಾಜ್ಯ ಹೆದ್ದಾರಿ‌ವರೆಗೆ ‌ಅವೈಜ್ಞಾನಿಕವಾಗಿ ಟೋಲ್‌ಗೇಟ್ ನಿರ್ಮಾಣ ಮಾಡಿ ಹಣ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಕಲ್ಮಲ್ ಮತ್ತು ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಗೆ ಒಳಪಟ್ಟರೂ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕಾರ್ಖಾನೆಗಳಾಗಲಿ, ವಾಣಿಜ್ಯ ವ್ಯಾಪಾರಗಳಲೀ ನಡೆಯುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಜನ ಪ್ರತಿನಿಧಿಗಳು 2010ರಲ್ಲಿ 192 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದ್ದ ಅದೇ ರಸ್ತೆಗೆ ಕೆಆರ್‌ಡಿಸಿಎಲ್ ನಿಂದ 70 ಕೋಟಿ ವೆಚ್ಚದಲ್ಲಿ ಪ್ಯಾಚ್ ವರ್ಕ್ ಡಾಂಬರೀಕರಣ ಮಾಡಿದ್ದಾರೆ. ಈ ಸಮಸ್ಯೆಗಳನ್ನು ಬಗರೆಹರಿಸುವುದು ಬಿಟ್ಟು ಟೋಲ್‌ ನಿರ್ಮಿಸಿ ಸಾಮಾನ್ಯ ಜನರಿಂದ ಹಣ ಪೀಕುತ್ತಿದ್ದಾರೆ” ಎಂದು ಸಂಘಟನೆಯ ಸದಸ್ಯರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

“ದೇವದುರ್ಗ ತಾಲೂಕಿನಲ್ಲಿ ಬಹುತೇಕ ಶೇ. 80 ರಷ್ಟು ರೈತರು ಕೂಲಿಕಾರರು ಮತ್ತು ಕಾರ್ಮಿಕರಿಂದ ಕೂಡಿದ್ದು ದಿನನಿತ್ಯ ಹೊಲದ ಕೆಲಸಗಳಿಗೆ ಸಾಮಗ್ರಿ ತರಲು, ಎಣ್ಣೆ, ಗೊಬ್ಬರ, ಬೀಜ, ದವಸ ಧಾನ್ಯಗಳನ್ನು ಮಾರಾಟ ಮಾಡಲು ಹಾಗೂ ಎತ್ತು, ಹಸು, ಕುರಿ, ಖರೀದಿಸಲು ಮಾರಾಟ ಮಾಡಲು ಪಕ್ಕದ ದೇವದುರ್ಗಕ್ಕೆ ಪ್ರತಿದಿನ ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಮತ್ತು ಇಲ್ಲಿ ಯಾವುದೇ ಬೃಹತ್ ಕೈಗಾರಿಕ ಕಂಪನಿಗಳು ಇರುವುದಿಲ್ಲ ಈಗಾಗಲೇ ರೈತರು ಬರಗಾಲ ಬೆಳೆ ನಷ್ಟ ಅತೀವೃಷ್ಟಿ ಮತ್ತು ಬೆಲೆ ಇಳಿಕೆಯಿಂದ ತತ್ತರಿಸಿ ಹೋಗಿದ್ದು ಕೃಷಿ ಕ್ಷೇತ್ರದಲ್ಲಿ ವರ್ಷಕ್ಕಿಂತಲೂ ಈ ವರ್ಷ ತಾಲ್ಲೂಕಿನ ರೈತರು ಬಹಳ ನಷ್ಟದ ಹಂಚಿನಲ್ಲಿದ್ದಾರೆ ಜೊತೆಗೆ ಇಷ್ಟಾದರೂ ಸರಕಾರದ ಅಚಾತುರ್ಯದ ನಿರ್ಧಾರದಿಂದ ಟೋಲ್ ಗೇಟ್ ನಿರ್ಮಿಸಿ ಇಲ್ಲಿನ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಆಕ್ರೋಶಿಸಿದರು.

- Advertisement -

ಟೋಲ್ ಗೇಟ್ ನಿಂದ ಇನ್ನೊಂದು ಟೋಲ್ ಗೇಟ್ ವರೆಗೂ ನಿರ್ಮಿಸಲು ಸುಮಾರು 50 ರಿಂದ 60 ಕಿ.ಮೀ. ಅಂತರ ಇರಬೇಕು. ಒಂದೇ ರಸ್ತೆ ತಿಂಥಣಿ ಬ್ರಿಜ್ ವರೆಗೆ ಕೇವಲ 73 ಕಿ.ಮೀ. ಅಂತರದಲ್ಲಿ 02 ಟೋಲ್ಲೇಟ್ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಕೂಡಲೇ ರಾಜ್ಯ ಸರಕಾರ ರೈತರಿಂದ ಹಗಲು ದರೋಡೆ ಮಾಡುವುದನ್ನು ನಿಲ್ಲಿಸಿ ಟೋಲ್ ಗೇಟನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಸಾಂಕೇತಿಕ ಧರಣಿ ನಡೆಸಿ ಸ್ಥಳಕ್ಕೆ ರಾಯಚೂರು ಸಂಸದರಾದ ಜಿ ಕುಮಾರ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇದನ್ನೂ ಓದಿ: ರಾಯಚೂರು | ಮಾದಕ ವಸ್ತು ಮಾರಾಟ ಜಾಲ ಕಡಿವಾಣಕ್ಕೆ ಮನವಿ


ಈ ವೇಳೆ ರೈತ ಸಂಘದ ರಾಜ್ಯ ಮುಖಂಡ ಚಾಮರಸ ಮಾಲಿ ಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಇಂಗಳದಾಳ, ಬೂದಯ್ಯ ಸ್ವಾಮಿ, ರತ್ನಮ್ಮ ಇನ್ನಿತರರು ಹಾಜರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...