ಅಧಿವೇಶನ 2023 | ಗ್ಯಾರಂಟಿ ಯೋಜನೆ ಬಗ್ಗೆ ಚರ್ಚಿಸಲು ಪಟ್ಟು ಬಿಡದ ಬಿಜೆಪಿ, ಎರಡನೇ ಬಾರಿ ಸದನ ಮುಂದೂಡಿಕೆ

Date:

Advertisements

ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಚರ್ಚಿಸಲು ಅನುಕೂಲ ಮಾಡಿಕೊಡಲೇಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದು, ಮಧ್ಯಾಹ್ನ ಆರಂಭವಾದ ಕಲಾಪದಲ್ಲೂ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಮಂಗಳವಾರ ಸದನ ಆರಂಭವಾಗುತ್ತಿದ್ದಂತೆ ಪ್ರಶೋತ್ತರ ಅವಧಿ ಬದಿಗೊತ್ತಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು, ಗಲಾಟೆ ಮಾಡಿದ ಮೇಲೆ ಸಭಾಧ್ಯಕ್ಷರು ಕಲಾಪವನ್ನು 15 ನಿಮಿಷ ಮುಂದೂಡಿದ್ದರು. ಈಗ ಮತ್ತೆ ಬಿಜೆಪಿ ಸದಸ್ಯರು ಗ್ಯಾರಂಟಿ ಚರ್ಚೆಗೆ ಅವಕಾಶ ಬೇಕು ಎಂದು ಹಠ ಹಿಡಿದ ಕಾರಣ ಸಭಾಧ್ಯಕ್ಷರು ಮತ್ತೊಮ್ಮೆ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದ್ದಾರೆ.

ಬಸವರಾಜ ಬೊಮ್ಮಾಯಿ ಮಾತನಾಡಿ, “ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ವಿಚಾರದಲ್ಲಿ ಮೋಸ ಮಾಡಿದೆ.  ಜನರಿಗೆ ದೋಖಾ ಆಗಿದೆ. ಈ ಬಗ್ಗೆ ನಾವು ಬೆಳಗ್ಗೆ ಪ್ರಸ್ತಾಪ ಮಾಡಿದ್ದೆವು. ನಮಗೆ ಅವಕಾಶ ನೀಡಲಿಲ್ಲ. ಮಧ್ಯಾಹ್ನದ ನಂತರವಾದರೂ ಅವಕಾಶ ಮಾಡಿಕೊಡುತ್ತೀರಿ ಎಂದು ಭಾವಿಸಿದ್ದೆವು. ಆದರೆ, ಸಭಾಧ್ಯಕ್ಷರು ಆಡಳಿತ ಪಕ್ಷದ ಕಡೆಯೇ ವಾಲುತ್ತಿದ್ದೀರಿ. ನಮ್ಮ ಕಡೆಯೂ ವಾಲಿ” ಎಂದರು.

Advertisements

ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯಿಸಿ, “ಎರಡು ನಿಲುವಳಿ ಸೂಚನೆಗಳು ನನ್ನೆದುರು ಇವೆ. ಒಂದು ಎಚ್‌ ಡಿ ರೇವಣ್ಣ ಅವರು ರೈತರ ವಿಚಾರವಾಗಿ ನಿಲುವಳಿ ಸೂಚಿಸಿದ್ದಾರೆ. ಬೊಮ್ಮಾಯಿ ಅವರು ಗ್ಯಾರಂಟಿ ವಿಚಾರವಾಗಿ ನಿಲುವಳಿ ಸೂಚಿಸಿದ್ದಾರೆ. ನಾವು ರಾಜ್ಯಪಾಲರ ಭಾಷಣದ ಮೇಲೆ ಮೊದಲು ಚರ್ಚೆ ಮಾಡಬೇಕಿರುವುದರಿಂದ ರೈತರ ವಿಚಾರವಾಗಿ ನಿಲುವಳಿ ಸೂಚನೆಯನ್ನು 69ಕ್ಕೆ ಕನ್ವರ್ಟ್‌ ಮಾಡಿ ಅವಕಾಶ ಕೊಟ್ಟಿರುವೆ. ದಿನಕ್ಕೆ ಒಂದು ನಿಲುವಳಿ ಸೂಚನೆ ಚರ್ಚಿಸಲು ಅವಕಾಶ ಇರುವುದರಿಂದ ಮತ್ತೆ ನಿಮಗೆ ಅನುಕೂಲ ಮಾಡಿ ಕೊಡುವೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಅಧಿವೇಶನ 2023 | ಸದನದಲ್ಲಿ ಪ್ರತಿಭಟಿಸಲು ಬಿಜೆಪಿ ಸದಸ್ಯರಿಗೆ ನಾಚಿಕೆಯಾಗಬೇಕು: ಶಿವಲಿಂಗೇಗೌಡ ತರಾಟೆ

ಡಿಸಿಎಂ ಡಿಕೆ ಶಿವಕುಮಾರ್‌ ಎದ್ದು ನಿಂತು, “ರಾಜ್ಯಪಾಲರ ಭಾಷಣದಲ್ಲೇ ಗ್ಯಾರಂಟಿ ವಿಚಾರಗಳು ಇವೆ. ಆಕಾಶದೆತ್ತರಕ್ಕೆ ಮಾತನಾಡಿ. ಯಾವುದೇ ಕಾರಣಕ್ಕೂ ನಿಯಮ ಮೀರಿ ನಡೆದುಕೊಳ್ಳಬೇಡಿ” ಎಂದು ಸಭಾಧ್ಯಕ್ಷರನ್ನು ಕೋರಿದರು.

ಬೊಮ್ಮಾಯಿ ಉತ್ತರಿಸಿ, “ನಮ್ಮ ನಿಲುವಳಿ ಸೂಚನೆಯನ್ನು 69ಗೆ ಕನ್ವರ್ಟ್‌ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದೇವೆ. ಮೊದಲು ನಿಲುವಳಿ ಕೊಟ್ಟಿದ್ದು ನಾವು. ನಮಗೆ ಅವಕಾಶ ಮಾಡಿ ಕೊಡದೇ ಜೆಡಿಎಸ್‌ನವರಿಗೆ ಮಾಡಿಕೊಟ್ಟರೆ ಹೇಗೆ? ಚರ್ಚೆಗೆ ಅವಕಾಶ ಮಾಡಿಕೊಡಿ. ಈಗಲೇ ಧರಣಿ ಕೈಬಿಡುತ್ತೇವೆ. ಇಲ್ಲದಿದ್ದರೆ ನಾವು ಧರಣಿ ಕೈಬಿಡಲ್ಲ” ಎಂದರು.

ಸಭಾಧ್ಯಕ್ಷರು ಪ್ರತಿಕ್ರಿಯಿಸಿ, “ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಕೊಡುತ್ತಿದ್ದೇನೆ. ನಾನು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾರೆ. ನಿಯಮ ಮೀರಿ ನೀವೂ ನಡೆದುಕೊಳ್ಳಬೇಡಿ” ಎಂದು ವಿನಂತಿಸಿದರು.

ಎಚ್‌ ಡಿ ರೇವಣ್ಣ ಅವರು ಎದ್ದು ನಿಂತು, “ನಮಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ” ಎಂದು ಚರ್ಚೆಗೆ ಪಟ್ಟು ಹಿಡಿದರು. ಕೊನೆಗೆ ಸಭಾಧ್ಯಕ್ಷರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X