ನಿಗದಿತ ಸಮಯಕ್ಕೆ ಸದನಕ್ಕೆ ಬಂದವರಿಗೆ ಬಹುಮಾನ ಘೋಷಿಸಿದ ಸ್ಪೀಕರ್‌ ಯು ಟಿ ಖಾದರ್‌

Date:

Advertisements
  • ಜುಲೈ 21ರವರೆಗೆ ವಿಧಾನಮಂಡಲ ಅಧಿವೇಶನ ನಡೆಸಲು ನಿರ್ಧಾರ
  • ಬಹುಮಾನದ ಬದಲು ಪ್ರಮಾಣ ಪತ್ರ ನೀಡಿ ಎಂದು ಶಾಸಕರ ಮನವಿ

ನಿಗದಿತ ಸಮಯಕ್ಕೆ ಸದನಕ್ಕೆ ಬಂದವರಿಗೆ ಬಹುಮಾನ ಘೋಷಣೆ ಮಾಡಲಾಗುವುದು ಎಂದು ಶಾಸಕರಿಗೆ ಸ್ಪೀಕರ್ ಯು ಟಿ ಖಾದರ್ ಘೋಷಣೆ ಮಾಡಿದ್ದಾರೆ.

ಮಂಗಳವಾರ ಸದನಕ್ಕೆ ನಿಗದಿತ ಸಮಯದಲ್ಲಿ ಆಗಮಿಸಿದ ಶಾಸಕರ ಹೆಸರು ಓದಿದ ಸ್ಪೀಕರ್ ಶಾಸಕರ ಬಗ್ಗೆ ಮೆಚ್ಚುಗೆ ಸೂಚಿಸಿದರು. ನಿಗದಿತ ಸಮಯಕ್ಕೆ ಸದನಕ್ಕೆ ಆಗಮಿಸಿದ್ದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಕೌಜಲಗಿ ಮಹಾಂತೇಶ್, ಎಸ್ ಸುರೇಶ್ ಕುಮಾರ್, ಪ್ರದೀಪ್ ಈಶ್ವರ್, ಎಸ್ ಆರ್ ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಶಿವಲಿಂಗೇಗೌಡ ಸೇರಿದಂತೆ ಇತರ ಶಾಸಕರ ಹೆಸರು ಸ್ಪೀಕರ್ ಖಾದರ್ ಓದಿದರು.

ನಿಗದಿತ ಸಮಯಕ್ಕೆ ಸದನಕ್ಕೆ ಆಗಮಿಸಿದ ಶಾಸಕರಿಗೆ ಬಹುಮಾನ ಕೊಟ್ಟರೆ ತಪ್ಪು ಸಂದೇಶ ಹೋಗುತ್ತದೆ ಎಂದು ಸ್ಪೀಕರ್ ಖಾದರ್ ಅವರಿಗೆ ಶಾಸಕರೊಬ್ಬರು ಸಲಹೆ ಕೊಟ್ಟರು. ಬಹುಮಾನ ಘೋಷಣೆ ಬದಲಾಗಿ ಸರ್ಟಿಫಿಕೇಟ್ ಕೊಡಲು ಮನವಿ ಮಾಡಿದರು. ಬಹುಮಾನ ಎಂದರೆ ತಪ್ಪು ಸಂದೇಶ ಹೋಗುತ್ತದೆ. ಬದಲಾಗಿ ಪ್ರಮಾಣ ಪತ್ರ ನೀಡಿ ಎಂದು ಮನವಿ ಮಾಡಿದರು. ಶಾಸಕರ ಅಭಿಪ್ರಾಯಕ್ಕೆ ಸ್ಪೀಕರ್ ಸಮ್ಮತಿ ಸೂಚಿಸಿದರು.

Advertisements

“ನಾನು ಸದನಕ್ಕೆ ನಿನ್ನೆ ಸರಿಯಾದ ಸಮಯಕ್ಕೆ ಬಂದಿದ್ದೇನೆ. ಆದರೆ, ನನ್ನ ಹೆಸರು ಇಲ್ಲ” ಎಂದು ಸುನೀಲ್ ಕುಮಾರ್ ಹಾಗೂ ನಾಡಗೌಡ ಹೇಳಿದರು. ಬಯೋಮೇಟ್ರಿಕ್ ಹಾಕಿ ಎಂದೂ ನಾಡಗೌಡ ಸಲಹೆ ನೀಡಿದರು. ಮತ್ತೊಂದು ಕಡೆಯಲ್ಲಿ ಶಾಸಕರಿಗೂ ಮತ್ತು ಸಚಿವರಿಗೂ ಈ ನಿಯಮ ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ವಿಧಾನಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ತಿದ್ದುಪಡಿ ವಿದೇಯಕ ಮಂಡನೆ

ಜು. 21ರವರೆಗೆ ವಿಧಾನಮಂಡಲ ಅಧಿವೇಶನ

ಬಜೆಟ್ ಅಧಿವೇಶನವನ್ನು ಜು. 21ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಮಂಗಳವಾರ ನಡೆದ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪೀಕರ್‌ ಯು ಟಿ ಖಾದರ್ ವಿಧಾನಸಭೆಗೆ ವಿವರಣೆ ನೀಡಿದರು.

ಜು. 5ರಂದು ಈಗಾಗಲೇ ಸ್ವೀಕರಿಸಿರುವ ಮಸೂದೆಗಳನ್ನು ಮಂಡಿಸುವುದರ ಜೊತೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಸಲಾಗುವುದು. ಜು. 6ರಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ ಎಂದು ವಿವರಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X