ನಾವು ಆರಂಭಿಸಿದ್ದಲ್ಲ, ಆದರೆ ಯುದ್ಧವನ್ನು ನಾವೇ ಕೊನೆಗೊಳಿಸುತ್ತೇವೆ: ಇಸ್ರೇಲ್ ಪ್ರಧಾನಿ ನೆತನ್ಯಾಹು

Date:

Advertisements

ನಾವು ಯುದ್ಧವನ್ನು ಆರಂಭಿಸಿಲ್ಲ. ಆದರೆ ಇದನ್ನು ನಾವೇ ಕೊನೆಗೊಳಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆ ನೀಡಿದ್ದಾರೆ.

ಇಸ್ರೇಲ್ ಯುದ್ಧದ ಹಂತದಲ್ಲಿದೆ. ನಾವು ಈ ಯುದ್ಧವನ್ನು ಬಯಸಿರಲಿಲ್ಲ. ಆದರೆ ಅತ್ಯಂತ ಕ್ರೂರವಾಗಿ ನಮ್ಮ ಮೇಲೆ ಹೇರಲಾಯಿತು ಎಂದು ಹೇಳಿಕೆ ನೀಡಿದ್ದಾರೆ.

ನಮ್ಮ ಮೇಲೆ ರಾಕೆಟ್‌ಗಳನ್ನು ಹಾರಿಸುವ ಮೂಲಕ ಈ ಯುದ್ಧವನ್ನು ಆರಂಭಿಸಿದ್ದು ಹಮಾಸ್. ಹಾಗಾಗಿ, ಹಮಾಸ್ ಇದಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಅಲ್ಲದೇ, ದೀರ್ಘಕಾಲ ಇದರ ಆಘಾತವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದು ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.

Advertisements

ಇಸ್ರೇಲ್‌ನ ಇತಿಹಾಸದಲ್ಲಿ ನಮ್ಮ ಮೇಲೆ ದಾಳಿ ಮಾಡಿ ಹಮಾಸ್ ದೊಡ್ಡ ತಪ್ಪು ಮಾಡಿದೆ. ಇದರ ಪರಿಣಾಮ ಏನು ಎಂಬುದು ಹಮಾಸ್‌ಗೆ ಶೀಘ್ರದಲ್ಲೇ ಅರಿವಾಗಲಿದೆ. ಮುಂಬರುವ ದಶಕಗಳಲ್ಲಿ ಇಸ್ರೇಲ್‌ನ ಇತರೆ ಶತ್ರುಗಳೂ ಕೂಡ ನೆನಪಿನಲ್ಲಿಟ್ಟುಕೊಳ್ಳುವಂತಹ ಬೆಲೆಯನ್ನೇ ಹಮಾಸ್ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಹೇಳಿದ್ದಾರೆ.

ಪ್ಯಾಲೆಸ್ತೀನ್‌ಗಾಗಿ ಹೋರಾಡುತ್ತಿರುವುದಾಗಿ ಹೇಳುತ್ತಿರುವ ಹಮಾಸ್‌, ಮಕ್ಕಳು, ಮಹಿಳೆಯರು ಸೇರಿದಂತೆ ಇಸ್ರೇಲ್ ಜನರನ್ನು ಒತ್ತೆಯಾಳುಗಳಾಗಿ ಇರಿಸಿ ಚಿತ್ರಹಿಂಸೆ ನೀಡುತ್ತದೆ. ಹತ್ಯೆಗೈಯುತ್ತಿರುವ ಶೈಲಿಯು ಐಸಿಸ್‌ ಉಗ್ರ ಸಂಘಟನೆಗೂ ಹಮಾಸ್‌ಗೂ ಏನು ವ್ಯತ್ಯಾಸವಿದೆ ಎಂದು ನೆತನ್ಯಾಹು ಹೋಲಿಕೆ ಮಾಡಿದ್ದಾರೆ.

ಐಸಿಸ್ ನಿರ್ಮೂಲನೆ ಮಾಡಲು ಆಧುನಿಕ ನಾಗರಿಕ ಶಕ್ತಿಗಳು ಒಗ್ಗೂಡಿದಂತೆ ಹಮಾಸ್ ನಿರ್ಮೂಲನೆ ಮಾಡಲು ಆಧುನಿಕ ನಾಗರಿಕ ಶಕ್ತಿಗಳು ಮತ್ತೆ ಒಂದಾಗಬೇಕು. ಇಸ್ರೇಲ್‌ಗೆ ಬೆಂಬಲ ನೀಡಿರುವ ಅಮೆರಿಕ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ಈ ಯುದ್ಧದಲ್ಲಿ ಇಸ್ರೇಲ್ ಗೆಲ್ಲಲಿದೆ. ಇಸ್ರೇಲ್‌ನೊಂದಿಗೆ ಇಡೀ ನಾಗರಿಕ ಜಗತ್ತು ಕೂಡ ಗೆಲ್ಲುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X