ತಿಪಟೂರು ಜಿಲ್ಲೆ ಕನಸು ಐದು ಗ್ಯಾರಂಟಿಗಳಿಂದಾಗಿ ಸದ್ಯ ನನಸಾಗಲ್ಲ. ಈ ಐದು ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದು ಸ್ವತಃ ತಿಪಟೂರು ಕಾಂಗ್ರೆಸ್ ಶಾಸಕ ಕೆ ಷಡಕ್ಷರಿ ಹೇಳಿಕೆ ನೀಡಿದ್ದಾರೆ.
ತಿಪಟೂರಿನಲ್ಲಿ ಅ.2ರಂದು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ತಿಪಟೂರು ಜಿಲ್ಲೆ ಮಾಡಬೇಕು ಎಂಬ ಹೋರಾಟ ನನ್ನದು. ಆದರೆ ಮುಂದಿನ ಬಜೆಟ್‌ವರೆಗೆ ಸರ್ಕಾರದ ಬಳಿ ಹಣ ಇಲ್ಲ. ಈ ಐದು ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ. ಸದ್ಯದ ಪರಿಸ್ಥಿತಿಯಲ್ಲಿ ತಿಪಟೂರು ಜಿಲ್ಲೆ ಕನಸು ನನಸಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ತಿಪಟೂರು ಜಿಲ್ಲೆ ಕನಸು ಐದು ಗ್ಯಾರಂಟಿಗಳಿಂದಾಗಿ ಸದ್ಯ ನನಸಾಗಲ್ಲ. ಆದರೂ ಸಿಎಂ ಸಿದ್ದರಾಮಯ್ಯ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಐದು ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದ ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ
— eedina.com (@eedinanews) October 3, 2023
ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ತಿಪಟೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ#KShadakshari @INCKarnataka pic.twitter.com/6oLUIH2OQb
“ಜಿಲ್ಲೆ ಮಾಡಬೇಕು ಅಂದರೆ ಮೊದಲು ಬೆಳಗಾವಿಯನ್ನು ಮಾಡಬೇಕು. 18 ವಿಧಾನಸಭಾ ಕ್ಷೇತ್ರಗಳಿವೆ. ಅಲ್ಲಿ ಎರಡು ಜಿಲ್ಲೆ ಮಾಡಿದ ನಂತರ ನಮ್ಮ ತಿಪಟೂರು ಕೂಡ ಒಂದು ಜಿಲ್ಲೆ ಮಾಡಬೇಕು. ಮುಂದಿನ ಬಜೆಟ್‌ವರೆಗೂ ಸರ್ಕಾರದ ಬಳಿ ದುಡ್ಡಿಲ್ಲ” ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿಗಳ ಬಳಿ ತಿಪಟೂರು ಜಿಲ್ಲೆ ಮಾಡುವ ಬೇಡಿಕೆ ಇಟ್ಟಿದ್ದೆ ಆದರೆ ಮುಖ್ಯಮಂತ್ರಿಗಳು ಅದನ್ನು ಒಪ್ಪಿಕೊಂಡಿಲ್ಲ. ಹೊಸದಾಗಿ ಮಾಡಿದ ಜಿಲ್ಲೆಗಳಿಗೆ ಕುರ್ಚಿ, ಮೇಜು ಕೊಡೋದಕ್ಕೆನೇ ದುಡ್ಡಿಲ್ಲ, ಇನ್ನು ಹೊಸ ಜಿಲ್ಲೆ ಮಾಡೋಕಾಗುತ್ತಾ? ಎಂದು ನನ್ನನ್ನು ಸುಮ್ಮನಿರಿಸಿದ್ದಾರೆ. ಆದರೂ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ನನಗೂ ಆಗಲ್ಲ, ಅವರಿಗೂ ಆಗಲ್ಲ” ಎಂದು ಶಾಸಕ ಷಡಕ್ಷರಿ ತಿಳಿಸಿದ್ದಾರೆ.