ಆರೆಸ್ಸೆಸ್‌ ಸಿದ್ಧಾಂತಕ್ಕೆ ಇಂದು ಮೋದಿ ಮುಖ – ನಾಳೆ ಮತ್ತೊಬ್ಬರ ಮುಖ: ಸ್ಟಾಲಿನ್

Date:

Advertisements

ಆರೆಸ್ಸೆಸ್ ತನ್ನ ಸಿದ್ಧಾಂತವನ್ನು ಜಾರಿಗೆ ತರಲು ಮೋದಿಯನ್ನು ಮುಂದಾಳನ್ನಾಗಿ ಮಾಡಿಕೊಂಡಿದೆ. ಈ ಮುಂದಾಳತ್ವದ ಮುಖ ನಿನ್ನೆ ಬೇರೊಬ್ಬರಾದ್ದಾಗಿತ್ತು. ನಾಳೆ ಮತ್ತೊಬ್ಬರದ್ದಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.

“ಈ ಬಾರಿಯ ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವಕ್ಕಾಗಿನ ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ. ಪ್ರಸ್ತುತ, ಎರಡನೇ ಹೋರಾಟದ ಮಧ್ಯೆ ನಾವಿದ್ದೇವೆ ಎಂಬಂತೆ ಭಾಸವಾಗುತ್ತಿದೆ. ಭಾರತದ ಆಶಯಗಳನ್ನು ರಕ್ಷಿಸುವುದು; ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ನಮ್ಮ ಬಹುತ್ವ ಸಮಾಜ, ಫೆಡರಲಿಸಂನ ತತ್ವವನ್ನು ರಕ್ಷಿಸುವ ಹೋರಾಟವಾಗಿದೆ” ಎಂದು ಅವರು ಹೇಳಿದ್ದಾರೆ.

“ಬಿಜೆಪಿಗೆ ಮೋದಿ ಅವರು ಪ್ರಮುಖ ಅಸ್ತ್ರವಾಗಿದ್ದಾರೆ. ಅವರನ್ನು ‘ಜೀವನಕ್ಕಿಂತ ದೊಡ್ಡ ವ್ಯಕ್ತಿ’ ಎಂದು ಬಿಜೆಪಿ ಬಿಂಬಿಸುತ್ತಿದೆ. ಪ್ರತಿಪಕ್ಷಗಳು ‘ಬಲವಾದ ಒಗ್ಗಟ್ಟು’ ಹೊಂದಿವೆ. ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಮಮತಾ ಬ್ಯಾನರ್ಜಿ ಮತ್ತು ತೇಜಸ್ವಿ ಯಾದವ್ ಅವರಂತಹ ನಾಯಕರು ನಮ್ಮೊಂದಿಗೆ ಇದ್ದಾರೆ. ಈ ಹೋರಾಟದಲ್ಲಿ ನಾವು ಒಗ್ಗಟ್ಟಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿಯಂತಹ ಕ್ರಿಯಾಶೀಲ ಯುವ ನಾಯಕ ಮೋದಿಯ ಚಿತ್ರಣ ಮತ್ತು ಆರ್‌ಎಸ್‌ಎಸ್ ನಿರೂಪಣೆಯನ್ನು ಕೆಡವಲು ಸಜ್ಜಾಗಿದ್ದಾರೆ” ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಟಾಲಿನ್ ಹೇಳಿದ್ದಾರೆ.

Advertisements

“10 ವರ್ಷ ಆಡಳಿತ ನಡೆಸಿರುವ ಮೋದಿ ಸರ್ಕಾರವು ತಮ್ಮ ಸಾಧನೆಗಳನ್ನು ತೋರಿಸುವ ಬದಲು, ಹಿಂದಿನದ್ದನ್ನೇ ಕೆದಕುವ ಕೆಲಸದಲ್ಲಿ ನಿರತವಾಗಿದೆ. ನೆಹರೂ ಮತ್ತು ಇಂದಿರಾ ಗಾಂಧಿಯಂತಹ ದಿಗ್ಗಜರತ್ತ ಬೆರಳು ಮಾಡುತ್ತಿದೆ. ಈಗ ಬಿಜೆಪಿ ಮುಖ್ಯ ಅಜೆಂಡಾ ಪ್ರತಿಪಕ್ಷಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು. ವಿಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದು, ಇಲ್ಲವೇ ಬಂಧಿಸುವುದು” ಎಂದು ಆರೋಪಿಸಿದ್ದಾರೆ.

“ಬಿಜೆಪಿ ತನ್ನ ರಾಜಕೀಯಕ್ಕಾಗಿ ಕಚ್ಛತೀವು ವಿಚಾರವನ್ನು ಮತ್ತೆ ಕೆದಕುತ್ತಿದೆ. ಮೋದಿಯವರ ಮಾತುಗಳನ್ನು ಇನ್ನು ಮುಂದೆ ಜನರು ನಂಬುವುದಿಲ್ಲ ಎಂಬ ಭಯದಿಂದ ಅವರು ಇಂತಹ ವಿಚಾರಗಳನ್ನು ಕೆದಕುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಡಿಎಂಕೆ ಯಾವಾಗಲು ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಬದ್ದವಾಗಿದೆ. ‘ಎಲ್ಲರಿಗೂ ಎಲ್ಲವೂ’ ಎಂಬ ತತ್ವದ ಮೇಲೆ ಪಕ್ಷ ನಿಂತಿದೆ. ಆದರೆ, ಬಿಜೆಪಿ ಧಾರ್ಮಿಕ ಭಾವನೆ ಮೇಲೆ ರಾಜಕೀಯ ಮಾಡುತ್ತಿದೆ. ದ್ವೇಷವನ್ನು ಭಿತ್ತುತ್ತಿದೆ. ಆರೆಸ್ಸೆಸ್ ಸಿದ್ಧಾಂತವನ್ನು ಜಾರಿಗೆ ತರಲು ಮೋದಿಯನ್ನು ಮುಂದಾಳನ್ನಾಗಿ ಮಾಡಿಕೊಂಡಿದೆ. ಈ ಮುಂದಾಳತ್ವದ ಮುಖ ನಿನ್ನೆ ಬೇರೊಬ್ಬರಾದ್ದಾಗಿತ್ತು. ನಾಳೆ ಮತ್ತೊಬ್ಬರದ್ದಾಗುತ್ತದೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X