ಮಹಾರಾಷ್ಟ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಕಿರಿಟ್ ಸೋಮಯ್ಯ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸ್ಥಳೀಯ ಮಾರಾಠಿ ನ್ಯೂಸ್ ಚಾನಲ್‌ಗಳಲ್ಲಿ ಪ್ರಸಾರವಾಗಿದೆ.
ಈ ವಿಷಯ ಮಹಾರಾಷ್ಟ್ರ ರಾಜಕೀಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ. ವಿರೋಧಿಗಳು ವಿಡಿಯೋ ಕಿರಿಟ್ ಸೋಮಯ್ಯ ಅವರದ್ದೇ ಎನ್ನುತ್ತಿದ್ದರೆ, ಈ ವಿಡಿಯೋ ನನ್ನದಲ್ಲ. ನನ್ನ ಹೆಸರಿನಲ್ಲಿ ತಿರುಚಿದ ವಿಡಿಯೋಗಳನ್ನು ಬಿತ್ತರಿಸಲಾಗಿದೆ ಎಂದು ಸೋಮಯ್ಯ ಚಾನಲ್ ವಿರುದ್ಧ ಆರೋಪಿಸಿದ್ದಾರೆ.
ನಾನು ಯಾವುದೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿಲ್ಲ. ವಿಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿ ಕ್ರಮ ಜರುಗಿಸಬೇಕು ಎಂದು ಮಹಾರಾಷ್ಟ್ರದ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.
ವಿಡಿಯೋದಲ್ಲಿರುವಂತೆ ಕಿರಿಟ್ ಸೋಮಯ್ಯ ಮಹಿಳೆಯೊಬ್ಬರ ಜೊತೆ ಅಶ್ಲೀಲವಾಗಿ ಮಾತನಾಡುತ್ತಾ ಅಶ್ಲೀಲ ಹಾವಭಾವ ಪ್ರದರ್ಶಿಸುತ್ತಾ, ಬೆತ್ತಲೆ ದೇಹ ಪ್ರದರ್ಶನ ಮಾಡಿರುವುದು ತೋರುತ್ತದೆ.
ಕಿರಿಟ್ ಸೋಮಯ್ಯ ಒಂದು ಬಾರಿ ಶಾಸಕ ಹಾಗೂ ಎರಡು ಅವಧಿಗೆ ಬಿಜೆಪಿಯಿಂದ ಲೋಕಸಭೆ ಸದಸ್ಯರಾಗಿದ್ದರು. ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಘಟನೆಯ ಬಗ್ಗೆ ತನಿಖೆಗೆ ಒತ್ತಾಯಿಸಿದೆ. ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ – ಶಿವಸೇನೆ – ಎನ್‌ಸಿಪಿ ಸರ್ಕಾರವು ಬೆಳವಣಿಗೆಯ ಬಗ್ಗೆ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ.
ಈ ಸುದ್ದಿ ಓದಿದ್ದೀರಾ? ಬೀದರ್ | ಮಂಜುರಾದರೂ ಅಲೆಮಾರಿಗಳಿಗೆ ದಕ್ಕದ ನಿವೇಶನ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ
ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ಪ್ರೊ. ವರ್ಷಾ ಗಾಯಕ್ವಾಡ್, “ಮರಾಠಿ ಸುದ್ದಿ ವಾಹಿನಿಯೊಂದು ಬಹಿರಂಗಪಡಿಸಿದ ಸೋಮಯ್ಯನವರ ವಿಡಿಯೋದಿಂದ ಬೇಸರವಾಗಿದೆ. ಈ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ವ್ಯಕ್ತಿಯಂತೆ ನಟಿಸುತ್ತಾರೆ. ಆದರೆ ಮಾಡುವುದೆಲ್ಲವೂ ಅನಾಚಾರ. ಒಂದು ಕಡೆ ಅವರ ಪಕ್ಷದವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಮಾತನಾಡುತ್ತಿದ್ದರೆ ಮತ್ತೊಂದೆಡೆ ಅವರ ಪಕ್ಷದ ನಾಯಕರು ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆ ಹೆಣ್ಣು ಮಕ್ಕಳನ್ನು ಬಿಜೆಪಿಯ ನಾಯಕರಿಂದ ರಕ್ಷಿಸುವುದೇ ಹೊರತು ಬೇರೇನೂ ಇಲ್ಲ ಎಂಬುದು ಪದೇಪದೇ ಸಾಬೀತಾಗಿದೆ. ವಿರೋಧ ಪಕ್ಷದ ನಾಯಕರ ಅಕ್ರಮಗಳನ್ನು ಬಿಜೆಪಿ ಯಾವಾಗಲೂ ಖಂಡಿಸುತ್ತದೆ. ಈಗ ಅದು ತನ್ನದೇ ಆದ ಒಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆಯೇ ಅಥವಾ ಇಲ್ಲವೇ?” ಎಂದು ಟೀಕಿಸಿದ್ದಾರೆ.
Social work