ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ಥಾನೇದಾರ್ ನೇತೃತ್ವದಲ್ಲಿ ಅಮೆರಿಕ ಸಂಸದರ ಗುಂಪು ಸಂಸತ್ತಿನ ಕೆಳಮನೆಯಲ್ಲಿ ಆಗಸ್ಟ್ 15 ರ ಭಾರತದ ಸ್ವಾತಂತ್ರ್ಯ ದಿನವನ್ನು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ‘ರಾಷ್ಟ್ರೀಯ ಆಚರಣೆಯ ದಿನ’ವೆಂದು ಘೋಷಿಸಲು ನಿರ್ಣಯವನ್ನು ಮಂಡಿಸಿದೆ.
ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಬೇರೂರಿರುವ ಅಮೆರಿಕ ಮತ್ತು ಭಾರತದ ನಡುವಿನ ಬಲವಾದ ಪಾಲುದಾರಿಕೆಯು ಜಾಗತಿಕ ಪ್ರಜಾಪ್ರಭುತ್ವವನ್ನು ಮುಂದುವರಿಸಲು ಮತ್ತು ಎಲ್ಲ ರಾಷ್ಟ್ರಗಳಿಗೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಇವೆರೆಡು ರಾಷ್ಟ್ರಗಳು ಉತ್ತೇಜಿಸುತ್ತದೆ ಎಂಬ ನಂಬಿಕೆಯನ್ನು ನಿರ್ಣಯದಲ್ಲಿ ವ್ಯಕ್ತಪಡಿಸಲಾಗಿದೆ.
ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗರಾದ ಬಡಿ ಕಾರ್ಟರ್ ಮತ್ತು ಬ್ರಾಡ್ ಶರ್ಮನ್ ನಿರ್ಣಯದ ಸಹಪ್ರಾಯೋಜಕರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂದರ್ಶನದಲ್ಲಿ ‘ದಲಿತ’ ಪದ ಬಳಕೆ: ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್ ದಾಖಲು
ಅಮೆರಿಕ ಮತ್ತು ಭಾರತ ಸಾಮಾನ್ಯ ಹಿತಾಸಕ್ತಿಗಳ ಆಧಾರದ ಮೇಲೆ ಉನ್ನತ ಹಂತದ ನಂಬಿಕೆ, ಪರಸ್ಪರ ತಿಳುವಳಿಕೆ ಮತ್ತು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಬಹುತ್ವ, ಕಾನೂನಿನ ನಿಯಮ ಮತ್ತು ಮಾನವ ಹಕ್ಕುಗಳ ಗೌರವದ ಬಗ್ಗೆ ಬದ್ಧತೆಯನ್ನು ಹೊಂದಿವೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಭಾರತೀಯ-ಅಮೆರಿಕನ್ನರು ಸರ್ಕಾರಿ ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ ಮತ್ತು ಕಾನೂನು ಜಾರಿ ಅಧಿಕಾರಿಗಳಾಗಿ ದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಮೆರಿಕ ಸಂವಿಧಾನವನ್ನು ಎತ್ತಿಹಿಡಿಯುತ್ತಾರೆ. ಅಲ್ಲದೆ ರಾಷ್ಟ್ರದ ಶ್ರೀಮಂತ ವೈವಿಧ್ಯತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಆಗಸ್ಟ್ 15 ರ ದಿನವನ್ನು ಭಾರತೀಯ ಜನರೊಂದಿಗೆ ಆಚರಿಸಲು ಮತ್ತು ಎರಡು ರಾಷ್ಟ್ರಗಳಲ್ಲಿ ಜನ್ಮತಾಳಿದ ಪ್ರಜಾಪ್ರಭುತ್ವದ ತತ್ವಗಳನ್ನು ವಿಶ್ವಾದ್ಯಂತ ಪಸರಿಸಲು ಇದು ಸಹಕಾರಿಯಾಗಿದೆ ಎಂದು ನಿರ್ಣಯ ಹೇಳಿದೆ.
ಪ್ರಧಾನಿ ಮೋದಿ ಅವರು ಅಮೆರಿಕ ಕಾಂಗ್ರೆಸ್ ಅನ್ನು ಎರಡು ಬಾರಿ ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ತಮ್ಮ ಭಾಷಣದಲ್ಲಿ ಮಹಿಳಾ ಸಬಲೀಕರಣ ಮತ್ತು ಉಕ್ರೇನ್ ಯುದ್ಧ ಸೇರಿದಂತೆ ಹಲವಾರು ವಿಷಯಗಳ ಕುರಿತು ಅವರು ಮಾತನಾಡಿದ್ದರು.