ಉತ್ತರಾಖಂಡದ ರಾಜ್ಯ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಮಂಡಿಸಿದ್ದಾರೆ.
ನಾಳೆ(ಫೆ.7) ಮಸೂದೆಯು ಅಂಗೀಕರಿಸುವ ಸಾಧ್ಯತೆ ಇದ್ದು, ಅಂಗೀಕಾರಗೊಂಡರೆ ಸ್ವಾತಂತ್ರ್ಯದ ನಂತರ ಯುಸಿಸಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲಿದೆ.
ಸಂವಿಧಾನದ ಮೂಲ ಪ್ರತಿಯೊಂದಿಗೆ ಸದನಕ್ಕೆ ಆಗಮಿಸಿದ್ದ ಸಿಎಂ ಪುಷ್ಕರ್ ಸಿಂಗ್ ಧಾಮಿ, ಮಸೂದೆ ಮಂಡಿಸಿದರು. ಈ ವೇಳೆ ಸದನದಲ್ಲಿದ್ದ ಆಡಳಿತ ಪಕ್ಷದ ಶಾಸಕರು ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿದರೆ, ವಿಪಕ್ಷಗಳ ಸದಸ್ಯರು ಚರ್ಚೆ ನಡೆಸುವಂತೆ ಪಟ್ಟು ಹಿಡಿದರು.
विधानसभा में ऐतिहासिक “समान नागरिक संहिता विधेयक” पेश किया। #UCCInUttarakhand pic.twitter.com/uJS1abmeo7
— Pushkar Singh Dhami (@pushkardhami) February 6, 2024
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ತರುವ ಉದ್ದೇಶದಿಂದಲೇ ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನ ಸೋಮವಾರ ಆರಂಭವಾಗಿದೆ. ಅಧಿವೇಶನದ ಎರಡನೇ ದಿನವಾದ ಮಂಗಳವಾರ ಈ ಮಸೂದೆಯನ್ನು ಮಂಡಿಸಲಾಯಿತು. ಫೆಬ್ರವರಿ 5 ರಿಂದ 8 ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದೆ. ಅಧಿವೇಶನದ ನಿಮಿತ್ತ ಪೊಲೀಸರು ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಸಮಾನ ನಾಗರಿಕ ಸಂಹಿತೆಯ ಒಂದು ಕರಡನ್ನು ಮುಖ್ಯಮಂತ್ರಿಗೆ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ ಪಂಚ ಸದಸ್ಯರ ಪೀಠ ಹಸ್ತಾಂತರಿಸಿತ್ತು. ಈ ಕರಡು ನಾಲ್ಕು ಸಂಪುಟಗಳಲ್ಲಿ 749 ಪುಟಗಳನ್ನು ಹೊಂದಿದೆ.
“विधानसभा जाने से पूर्व देश के संविधान की मूल प्रति…”
देश के संविधान निर्माताओं की अपेक्षाओं के अनुरूप भारत के संविधान के अनुच्छेद 44 को सार्थकता प्रदान करने की दिशा में आज का दिन देवभूमि उत्तराखण्ड के लिए विशेष है।
देश का संविधान हमें समानता और समरसता के लिए प्रेरित करता है… pic.twitter.com/EfvPjTXN50
— Pushkar Singh Dhami (@pushkardhami) February 6, 2024
ಕಾನೂನು ಜಾರಿಗೆ ಬಂದಲ್ಲಿ ಸ್ವಾತಂತ್ರ್ಯದ ನಂತರ ಯುಸಿಸಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಉತ್ತರಾಖಂಡ ಆಗಲಿದೆ. ಪೋರ್ಚುಗೀಸರ ಆಳ್ವಿಕೆಯ ಕಾಲದಿಂದಲೂ ಗೋವಾದಲ್ಲಿ ಯುಸಿಸಿ ಜಾರಿಯಲ್ಲಿದೆ. ಯುಸಿಸಿಯ ಅಡಿಯಲ್ಲಿ, ಮದುವೆ, ವಿಚ್ಛೇದನ, ಜೀವನಾಂಶ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಅದೇ ಕಾನೂನುಗಳು ಅವರ ಧರ್ಮವನ್ನು ಲೆಕ್ಕಿಸದೆ ರಾಜ್ಯದ ಎಲ್ಲ ನಾಗರಿಕರಿಗೆ ಅನ್ವಯಿಸಲಿವೆ.
ಸಮಾನ ನಾಗರಿಕ ಸಂಹಿತೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುವುದು ಎಂದು 2022ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯು ಆಶ್ವಾಸನೆ ನೀಡಿತ್ತು.
ಏಕರೂಪ ನಾಗರಿಕ ಸಂಹಿತೆಗೆ ನಮ್ಮ ವಿರೋಧವಿಲ್ಲ, ಆದರೆ: ವಿಪಕ್ಷ ನಾಯಕ ಯಶ್ಪಾಲ್
ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಯಾಗುತ್ತಿದ್ದಂತೆ, ಉತ್ತರಾಖಂಡ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಶಪಾಲ್ ಆರ್ಯ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಏಕರೂಪ ನಾಗರಿಕ ಸಂಹಿತೆ ನಮ್ಮ ವಿರೋಧವಿಲ್ಲ. ಆದರೆ ಬಿಜೆಪಿಯು ಸದನದ ನೀತಿ ನಿಯಮಗಳನ್ನು ನಿರ್ಲಕ್ಷಿಸಿದೆ” ಎಂದು ತಿಳಿಸಿದ್ದಾರೆ.
#WATCH | Dehradun: On UCC, Uttarakhand Assembly LoP Yashpal Arya says, “We are not against it (Uniform Civil Code). The House is governed by the rules of conduct of business but BJP is continuously ignoring it and wants to suppress the voice of the MLAs based on the strength of… pic.twitter.com/6hxa3enEgf
— ANI (@ANI) February 6, 2024
“ಆಡಳಿತ ಪಕ್ಷ ಬಿಜೆಪಿಯು ಸದನದ ನೀತಿ ನಿಯಮಗಳನ್ನು ಉಲ್ಲಂಘಿಸಿದೆ. ಸಂಖ್ಯಾಬಲದ ಆಧಾರದ ಮೇಲೆ ವಿಪಕ್ಷ ಶಾಸಕರ ಧ್ವನಿಯನ್ನು ಹತ್ತಿಕ್ಕಲು ಬಯಸಿದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? SSLC ಪರೀಕ್ಷೆಗೂ ದ್ವೇಷ ಹರಡಿರುವ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸುತ್ತೇವೆ: ಸಚಿವ ಮಧು ಬಂಗಾರಪ್ಪ
“ನಾವು ಏಕರೂಪ ನಾಗರಿಕ ಸಂಹಿತೆ ವಿರುದ್ಧವಾಗಿಲ್ಲ. ಶಾಸಕರು ಸದನದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು, ಪ್ರಶ್ನೋತ್ತರ ಅವಧಿಯಲ್ಲಿ, ನಿಯಮ 58 ಅಥವಾ ಇತರ ನಿಯಮಗಳ ಅಡಿಯಲ್ಲಿ ಪ್ರಸ್ತಾವನೆಯನ್ನು ಹೊಂದಿದ್ದರೂ, ವಿಧಾನಸಭೆಯಲ್ಲಿ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಹಕ್ಕು ಇದೆ. ಆದರೆ ಅದ್ಯಾವುದಕ್ಕೂ ಅವಕಾಶ ನೀಡುತ್ತಿಲ್ಲ” ಎಂದು ಯಶಪಾಲ್ ಆರ್ಯ ತಿಳಿಸಿದ್ದಾರೆ.