ವಿಧಾನಸೌಧದ ಆವರಣದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಪುಸ್ತಕ ಮೇಳಕ್ಕೆ ಸೋಮವಾರ ಕರ್ನಾಟಕ ವಿಧಾನ ಪರಿಷತ್ನ ಸರ್ಕಾರಿ ಮುಖ್ಯ ಸಚೇತಕ, ಸಲೀಂ ಅಹ್ಮದ್ ಭೇಟಿ ನೀಡಿದರು.
ಈ ವೇಳೆ ಹಲವು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದ ಅವರು, ಹಲವಾರು ಪುಸ್ತಕಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹ ನೀಡಿದರು.
ವಿಧಾನಸೌಧದ ಆವರಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಮೇಳಕ್ಕೆ ಇಂದು ಭೇಟಿ ನೀಡಿ ಹಲವು ಪುಸ್ತಕಗಳನ್ನು ಖರೀದಿಸಿದೆ.#ಪುಸ್ತಕಮೇಳ pic.twitter.com/egJSIs5DOk
— Saleem Ahmed (@SaleemAhmadINC) March 3, 2025
ಇಂದಿನ ಮೊಬೈಲ್ ಯುಗದಲ್ಲಿ ಜನರು ಓದುವ ಹವ್ಯಾಸ ದೂರ ಮಾಡುತ್ತಿದ್ದಾರೆ. ಓದುವ ಹವ್ಯಾಸ ಬೆಳೆಸಿಕೊಂಡಾಗ ನಮ್ಮ ಜ್ಞಾನ ಕೂಡ ವೃದ್ಧಿಯಾಗುತ್ತದೆ. ರಾಜ್ಯದ ಶಕ್ತಿ ಕೇಂದ್ರದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿ, ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶ ನೀಡಿರುವುದು ಒಳ್ಳೆಯ ನಡೆ. ಮೇಳಕ್ಕೆ ಬರುವ ಸಾರ್ವಜನಿಕರು ಪುಸ್ತಕ ಖರೀದಿಸಿ, ಪ್ರಕಾಶಕರನ್ನು ಕೂಡ ಬೆಂಬಲಿಸಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.
