2023ರ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 296 ಮಂದಿ ಜೀವ ಕಳೆದುಕೊಂಡಿದ್ದರು. ಅದಾಗಿ ಒಂದು ವರ್ಷದಲ್ಲಿಯೇ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸೋಮವಾರ ಕಾಂಚನಜುಂಗಾ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲು ಅಪಘಾತಕ್ಕೀಡಾಗಿದೆ.
ಈ ಎರಡೂ ಅಪಘಾತ ಪ್ರಕರಣಗಳಲ್ಲಿ, ಇಂತಹ ಅವಘಡಗಳನ್ನು ತಡೆಯುವ ಸಲುವಾಗಿಯೇ ನಿರ್ಮಿಸಲಾಗಿರುವ ಮೇಡ್ ಇನ್ ಇಂಡಿಯಾ ವ್ಯವಸ್ಥೆಯಾದ ‘ಕವಚ್’ ತಂತ್ರಜ್ಞಾನ ಇಲ್ಲದಿದ್ದದ್ದು ಈಗ ಚರ್ಚೆಗೆ ಬಂದಿದೆ. ಮೋದಿ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೊಂಡು, ಪ್ರಚಾರಗಿಟ್ಟಿಸಿಕೊಂಡಿದ್ದರು. ಈಗ ಅದೇ ‘ಕವಚ್’ ತಂತ್ರಜ್ಞಾನ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
All this was just a drama to fool people, no work happened on ground.
This government is running only because of heavy PR & manipulating media 📺 🤮#WestBengal #Darjeeling #Balasore #KanchanajungaExpress #Kavach
— Veena Jain (@DrJain21) June 17, 2024
ಎರಡು ರೈಲುಗಳು ಒಂದೇ ಹಳಿಯ ಮೇಲೆ ಸಾಗುತ್ತಿದ್ದರೆ, ರೈಲ್ವೆ ಪೈಲಟ್‌ಗಳಿಗೆ ಎಚ್ಚರಿಕೆ ರವಾನಿಸುವ ಮೂಲಕ ಅಪಘಾತಗಳನ್ನು ತಡೆಯುವ ವ್ಯವಸ್ಥೆ ಇದಾಗಿದೆ. ಆದರೆ ಡಾರ್ಜಿಲಿಂಗ್‌ನ ಈ ಮಾರ್ಗದಲ್ಲಿ ಕವಚ್ ವ್ಯವಸ್ಥೆ ಇರಲಿಲ್ಲ. ಕೋಲ್ಕತಾಕ್ಕೆ ತೆರಳುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ, ಅದೇ ಹಳಿಯಲ್ಲಿ ಬಂದ ಸರಕು ಸಾಗಣೆ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಲೋಕೋ ಪೈಲಟ್ ಸೇರಿದಂತೆ 10 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2022ರ ಮಾರ್ಚ್ 4ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ತೆಲಂಗಾಣದ ಸಿಕಂದರಾಬಾದ್ ಬಳಿ ರೈಲು ಅಪಘಾತ ತಪ್ಪಿಸುವ ಸಲುವಾಗಿ ಜಾರಿಗೆ ತಂದಿದ್ದ ‘ಕವಚ್’ ತಂತ್ರಜ್ಞಾನವನ್ನು ಪರೀಕ್ಷೆ ಮಾಡಿದ್ದರು. ಸಚಿವರು ಕುಳಿತುಕೊಂಡಿದ್ದ ರೈಲಿನ ಇಂಜಿನ್ ಸಾಗುವ ಹಳಿಯಲ್ಲಿ ಬೇರೊಂದು ರೈಲಿನ ಇಂಜಿನ್ ಅನ್ನು ಉದ್ದೇಶಪೂರ್ವಕವಾಗಿ ತಂದು ನಿಲ್ಲಿಸಲಾಗಿತ್ತು. ಸಚಿವರಿದ್ದ ರೈಲು ಇಂಜಿನ್, ತಾನು ಸಾಗುತ್ತಿದ್ದ ಮಾರ್ಗದಲ್ಲಿ ಬೇರೊಂದು ಇಂಜಿನ್ ಅನ್ನು ಗುರುತಿಸಿದ ಕೂಡಲೇ ಸ್ವಯಂಚಾಲಿತವಾಗಿ ಸುಮಾರು ಅರ್ಧ ಕಿ.ಮೀ. ಮುಂಚಿತವಾಗಿಯೇ ನಿಂತು ಬಿಟ್ಟಿತು. ಪರೀಕ್ಷೆ ಯಶಸ್ವಿಯಾದ ನಂತರ ರೈಲ್ವೆ ಸಚಿವರು ಇನ್ನೂ ಮುಂದೆ ದೇಶದಲ್ಲಿ ರೈಲು ಅಪಘಾತ ಸಾಧ್ಯವೇ ಇಲ್ಲ ಅಂತ ಹೇಳಿಬಿಟ್ಟರು. ಆದರೆ ವಾಸ್ತವ ಮಾತ್ರ ಬೇರೆಯೇ ಇದೆ.
Can anyone tell me where this Kavach is?
Or was this just Jaishankar level Hawabaazi?#TrainAccident
pic.twitter.com/R5DOUyRyrW— Roshan Rai (@RoshanKrRaii) June 17, 2024
ಕವಚ್ ಪರೀಕ್ಷೆ ಮುಗಿದ ನಂತರವೂ ಈ ದೇಶದಲ್ಲಿ ಅತ್ಯಂತ ಭೀಕರ ರೈಲು ಅಪಘಾತಗಳು ಸಂಭವಿಸಿವೆ. ಅಕ್ಟೋಬರ್ 29, 2023ರಂದು ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದ ರೈಲು ಅಪಘಾತದಲ್ಲಿ 14 ಜನರು ಸಾವನ್ನಪ್ಪಿದ್ದರು. ಜೂನ್ 2, 2023ರಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ನಡೆದ ದುರಂತವನ್ನು ಮರೆಯೋಕೆ ಸಾಧ್ಯವೇ ಇಲ್ಲ. ದೇಶದ ಇತಿಹಾಸದಲ್ಲೇ ಅತಿ ದೊಡ್ಡ ರೈಲು ಅಪಘಾತ ಎಂದು ಕರೆಯುವ ಈ ದುರ್ಘಟನೆಯಲ್ಲಿ ಸುಮಾರು 300 ಜನರು ಪ್ರಾಣ ಕಳೆದುಕೊಂಡಿದ್ದರೆ, 1200 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಜೂನ್ 17, 2024ರಂದು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ರೈಲ್ವೆ ಅಪಘಾತದಲ್ಲಿ 15 ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.
ಇವುಗಳನ್ನು ನೋಡಿದ ಮೇಲೆ ನಮ್ಮಲ್ಲಿ ಬರುವ ಮೊದಲ ಪ್ರಶ್ನೆ ಅಂದರೆ, ಇಷ್ಟೆಲ್ಲಾ ಅವಘಡಗಳು ನಡೆಯುತ್ತಿದ್ದರೂ ರೈಲ್ವೆ ಸಚಿವರು 2022ರಲ್ಲಿ ಹೇಳಿದ್ದ ‘ಕವಚ್’ ತಂತ್ರಜ್ಞಾನ ಏನು ಮಾಡುತ್ತಿದೆ? ರೈಲ್ವೆ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಅಪಘಾತ ನಡೆದ ಈ ಸ್ಥಳಗಳಲ್ಲಿ ಕವಚ್ ತಂತ್ರಜ್ಞಾನವನ್ನು ಅಳವಡಿಸಿರಲಿಲ್ಲ. ರೈಲ್ವೆ ಸಚಿವರೇ ನೀಡಿರುವ ಮಾಹಿತಿಯಂತೆ ಇಲ್ಲಿಯವರೆಗೂ ಕೇವಲ 1500 ಕಿ.ಮೀ . ಉದ್ದದ ಮಾರ್ಗ ದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜನರ ಉಪಯೋಗಕ್ಕೆ ಬಾರದ ಕೆಲಸಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವ ಈ ಸರ್ಕಾರ ಜನರ ಪ್ರಾಣ ಉಳಿಸುವ ಈ ಯೋಜನೆ ಜಾರಿಗೆ ನಿರ್ಲಕ್ಷ್ಯ ಮಾಡುತ್ತಿರುವುದು ಏಕೆ?
Creating Safety & Security Envelope around Trains!
KAVACH, an Automatic Train Protection System stops the train automatically, if another train approaches. The seamless functioning of this system will effectively enhance safety and efficiency.#BharatKaKavach pic.twitter.com/UooZJjh56d
— Ministry of Railways (@RailMinIndia) March 4, 2022
ರೈಲ್ವೆ ಇಲಾಖೆಯ RDSO ಸಂಸ್ಥೆ ಸುಮಾರು 17 ಕೋಟಿ ರೂಪಾಯಿ ವೆಚ್ಚದಲ್ಲಿ ಈ ‘ಕವಚ’ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿತ್ತು. ರೈಲುಗಳ ಮಧ್ಯೆ ಮುಖಾಮುಖಿ ಆಗುವ ಡಿಕ್ಕಿಯನ್ನು ‘ಕವಚ್’ ತಪ್ಪಿಸುತ್ತದೆ. ರೈಲು ರೆಡ್ ಸಿಗ್ನಲ್ ದಾಟದಂತೆ ತಡೆಯುತ್ತದೆ. ಎದುರುಗಡೆಯಿಂದ ಮತ್ತೊಂದು ರೈಲು ಬರುತ್ತಿದ್ದರೆ, ಬೇರೆ ರೈಲು ಅದೇ ಹಳಿಯ ಮೇಲೆ ನಿಂತಿದ್ದರೆ ಅಥವಾ ರೈಲು ಹಳಿಯ ಮೇಲೆ ಮರದ ದಿಮ್ಮಿ, ಅನ್ಯ ವಾಹನಗಳು ನಿಂತಿದ್ದರೆ ಅದನ್ನು ಕವಚ್‌ನ ಸೆನ್ಸರ್‌ಗಳು ದೂರದಿಂದಲೇ ಗ್ರಹಿಸಿ, ತನ್ನಲ್ಲಿನ ಆಂತರಿಕ ನಿರ್ವಹಣಾ ವ್ಯವಸ್ಥೆಗೆ ಅಪಾಯದ ಸಿಗ್ನಲ್‌ಗಳನ್ನು ರವಾನಿಸುತ್ತದೆ. ಈ ಸಿಗ್ನಲ್‌ಗಳ ಸಹಾಯದಿಂದ ಆಂತರಿಕ ನಿರ್ವಹಣಾ ವ್ಯವಸ್ಥೆಯು ಆಟೋಮ್ಯಾಟಿಕ್ ಆಗಿ ರೈಲುಗಳ ಬ್ರೇಕ್‌ಗಳನ್ನು ಹಾಕುತ್ತದೆ.
ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆಯುವುದರಿಂದ ದೂರದಲ್ಲಿ ಹಳಿಯ ಮೇಲೆ ಅಡ್ಡವಾಗಿರುವ ವಾಹನಗಳು, ವಸ್ತುಗಳಿಂದ ಸುಮಾರು 380 ಮೀಟರ್‌ಗಳಷ್ಟು ದೂರದಲ್ಲೇ ರೈಲು ಆಟೋಮ್ಯಾಟಿಕ್ ಆಗಿ ನಿಂತುಬಿಡುತ್ತದೆ. ರೈಲ್ವೆ ಕ್ರಾಸಿಂಗ್ ಗೇಟ್ ಸಮೀಪಿಸುತ್ತಿದ್ದಂತೆಯೇ ಜೋರಾಗಿ ವಿಷಲ್ ಶಬ್ದ ಹೊಮ್ಮಿಸಿ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಲೊಕೊ ಪೈಲಟ್ ಓವರ್ ಸ್ಪೀಡಿಂಗ್ ತಪ್ಪಿಸಲು ನೆರವಾಗುತ್ತದೆ. ಅತ್ಯಂತ ದಟ್ಟವಾದ ಮಂಜಿನ ವಾತಾವರಣದಲ್ಲೂ ರೈಲು ಸುರಕ್ಷತೆಯಿಂದ ಚಲಿಸಲು ನೆರವಾಗುತ್ತದೆ ಅಂತ ಕವಚ್ ತಂತ್ರಜ್ಞಾನದ ರೈಲ್ವೆ ಇಲಾಖೆ ಹೇಳಿಕೊಂಡಿತ್ತು.
ದೇಶದಲ್ಲಿ 35,736 ಕಿ.ಮೀ . ಉದ್ದ ಮಾರ್ಗ ದಲ್ಲಿ ‘ಕವಚ’ ವ್ಯವಸ್ಥೆ ಅಳವಡಿಕೆಗೆ ಮಂಜೂರಾತಿ ನೀಡಲಾಗಿದೆ ಅಂತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಆದರೆ ಯೋಜನೆ ಪೂರ್ಣಗೊಳಿಸಲು ತಡ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಇಷ್ಟೆಲ್ಲಾ ಅಪಘಾತಗಳು ನಡೆಯುತ್ತಿದ್ದರೂ ರೈಲ್ವೆ ಸಚಿವರೂ ಮಾತ್ರ ನೈತಿಕ ಹೊಣೆ ಹೊರುತ್ತಲೇ ಇಲ್ಲ. ಅಪಘಾತದ ನಡುವೆಯೂ ಅವರ ಪಿಆರ್ ಸ್ಟಂಟ್‌ಗಳು ನಿಂತಿಲ್ಲ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್‌ಗೆ ಸಿಎಂ ಸಿದ್ದರಾಮಯ್ಯ ಸಲಹೆ ಕೇಳಿದ ನಿರ್ಮಲಾ ಸೀತಾರಾಮನ್
ಕಳೆದ ಒಂದು ದಶಕದಿಂದ ರೈಲುಗಳ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಬಡ ಜನರ ಪ್ಯಾಸೆಂಜರ್ ರೈಲುಗಳಿಗೆ ಕತ್ತರಿ ಹಾಕಿ, ಶ್ರೀಮಂತರ ವಂದೇ ಭಾರತಕ್ಕೆ ಮಣೆ ಹಾಕಲಾಗಿದೆ. ಅದರ ಪರಿಣಾಮ ರೈಲುಗಳಲ್ಲಿ ಭಾರಿ ಜನದಟ್ಟಣೆ, ಅವ್ಯವಸ್ಥೆ ಕಾಣಿಸಿಕೊಳ್ಳತೊಡಗಿದೆ. ಜನಸಾಮಾನ್ಯರ ಆಕ್ರೋಶದ ಕಟ್ಟೆ ಒಡೆಯುವ ಮೊದಲೇ ಮೋದಿ ಸರ್ಕಾರ ರೈಲು ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಾ, ಅನ್ನೋದನ್ನು ಕಾದು ನೋಡಬೇಕಿದೆ.
