2024ರ ಲೋಕಸಭಾ ಚುನಾವಣೆಯ ಮತದಾನ ಮುಗಿದಿದ್ದು, ಹಲವಾರು ಸಂಸ್ಥೆಗಳು ಮತ್ತು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸುತ್ತಿವೆ. ಎಲ್ಲ ಸಮೀಕ್ಷೆಗಳು ಬಿಜೆಪಿ ಮತ್ತು ಎನ್‌ಡಿಎ ಪರವಾಗಿದ್ದು, ಮೂರನೇ ಅವಧಿಗೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ಹೇಳುತ್ತಿವೆ. ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗ್ರೌಂಡ್‌ನಲ್ಲಿ ಕೆಲಸ ಮಾಡಿರುವ ಕೆಲವು ನಾಗರಿಕ ಸಂಘಟನೆಗಳು ಮತ್ತು ಮುಖಂಡರು ಕೂಡ ತಮ್ಮ ಅಭಿಪ್ರಾಯಗಳನ್ನು ತಿಳಿಸಿದೆ. ಬೇರೆಯದ್ದೇ ಭವಿಷ್ಯ ಹೇಳುತ್ತಿದ್ದಾರೆ.
ನಾಗರಿಕ ಸಂಘಟನೆಗಳ ಪ್ರಕಾರ, ಈ ಬಾರಿಯ ಚುನಾವಣೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗವು ಈ ಬಾರಿಯ ಚುನಾವಣೆಯಲ್ಲಿ ಮುಖ್ಯ ವಿಚಾರವಾಗಿತ್ತು. ಇಂಡಿಯಾ ಒಕ್ಕೂಟವು ಸುಮಾರು 267 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಅಭಿಪ್ರಾಯಿಸಿದೆ.
ಕರ್ನಾಟಕ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 15ರಲ್ಲಿ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು 13ರಲ್ಲಿ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯಿಸಿದೆ.
ಅತಿ ಹೆಚ್ಚು ಅಂದರೆ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟವು 30ರಲ್ಲಿ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯಿಸಿದೆ.
ಇನ್ನು ಪಂಜಾಬ್‌ನಲ್ಲಿ 11, ಹರಿಯಾಣದಲ್ಲಿ 7, ರಾಜಸ್ಥಾನದಲ್ಲಿ 8 ರಿಂದ 12, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 30, ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟವು 30, ಬಿಹಾರದಲ್ಲಿ 14, ಉತ್ತರಾಖಂಡದಲ್ಲಿ 3, ಛತ್ತೀಸ್‌ಗಢದಲ್ಲಿ 7 ಸ್ಥಾನ, ತಮಿಳುನಾಡಿನಲ್ಲಿ 39, ಕೇರಳದಲ್ಲಿ 20, ಹಿಮಾಚಲ ಪ್ರದೇಶದಲ್ಲಿ 2, ತೆಲಂಗಾಣದಲ್ಲಿ 10, ದೆಹಲಿಯಲ್ಲಿ 4, ಅಸ್ಸಾಂ + ಈಶಾನ್ಯದಲ್ಲಿ 10 ಸ್ಥಾನ, ಗುಜರಾತ್‌ನಲ್ಲಿ 3, ಜಮ್ಮು ಕಾಶ್ಮೀರದಲ್ಲಿ 4, ಜಾರ್ಖಂಡಿನಲ್ಲಿ 10 ಸೇರಿದಂತೆ ಒಟ್ಟು 267 ಸ್ಥಾನಗಳು ಗೆಲ್ಲಲಿದೆ ಎಂದು ಅಂದಾಜಿಸಿದ್ದಾರೆ.
ಉತ್ತರ ಪ್ರದೇಶದ ಸಾಮಾಜಿಕ ಕಾರ್ಯಕರ್ತರಾಗಿರುವ ಮನೀಶ್ ಶರ್ಮಾ, ಜಾಗೋ ತೆಲಂಗಾಣದ ಮುಖಂಡರಾದ ಅಕುನುರಿ ಮುರಳಿ, ತಮಿಳುನಾಡು ಹಾಗೂ ಕೇರಳದ ರಾಜಕೀಯ ಬಗ್ಗೆ ಅನುಭವ ಹೊಂದಿರುವ ಶ್ರೀಧರ್ ರಾಧಾಕೃಷ್ಣನ್, ಮಧ್ಯಪ್ರದೇಶದ ಡಾ. ಸುನಿಲಮ್, ಛತ್ತೀಸ್‌ಘಡದ ಸಂಜಯ್ ಪರಾಟೆ, ಮಹಾರಾಷ್ಟ್ರದ ನಿಶ್ಚಯ್, ಉತ್ತರಾಖಂಡದ ಅಜಯ್ ಜೋಶಿ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಿಸಿದ್ದಾರೆ.
ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು, ಅಗ್ನಿವೀರ್ ಹಾಗೂ ರೈತರ ಸಮಸ್ಯೆಗಳು, ಸಂವಿಧಾನ ಬದಲಾವಣೆಯ ವಿಚಾರ. ಮೀಸಲಾತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯಗಳಾಗಿತ್ತು ಎಂದು ಗ್ರೌಂಡ್‌ನಲ್ಲಿ ಕೆಲಸ ಮಾಡಿರುವ ನಾಗರಿಕ ಸಂಘಟನೆಗಳ ಮುಖಂಡರು ಅಭಿಪ್ರಾಯಿಸಿದ್ದಾರೆ. ಯಾವುದಕ್ಕೂ ಜೂನ್ 4ರವರೆಗೆ ಕಾದು ನೋಡಬೇಕಿದೆ.
ವಿಡಿಯೋ ನೋಡಿ

Congress lead INDIA will form the next government.