ಮೋದಿ ಯಾಕೆ ಮೀನು, ಮಾಂಸದ ಬಗ್ಗೆ ಮಾತನಾಡುತ್ತಾರೆ?; ಅವರ 10 ವರ್ಷಗಳ ಸಾಧನೆ ಏನು ಗೊತ್ತೇ?

Date:

Advertisements

ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಅಬ್ಬರ ಭಾಷಣ ಮಾಡುತ್ತಿದ್ದಾರೆ. ‘ಅಬ್‌ ಕಿ ಬಾರ್ – ಚಾರ್ ಸೊ ಪಾರ್’ ಎಂದು ಹೇಳುತ್ತಿದ್ದಾರೆ. ಅಲ್ಲದೆ, ತಮ್ಮ ಭಾಷಣಗಳಲ್ಲಿ ವಿಪಕ್ಷಗಳ ನಾಯಕರು ಮಾಂಸ ತಿಂದರು, ಮೀನು ತಿಂದರು ಎಂದು ಟೀಕೆ ಮಾಡುವುದಕ್ಕೆ ಸಮೀತವಾಗುತ್ತಿದ್ದಾರೆ. ಆದರೆ, ದೇಶದ ಪರಿಸ್ಥಿತಿಯ ಬಗ್ಗೆ ಅವರು ಹೆಚ್ಚಿಗೆ ಮಾತನಾಡುತ್ತಿಲ್ಲ.

ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆಯು ದೇಶದ ಜನರು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ ಎಂಬುದನ್ನು ತೋರಿಸಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆಯು ಜನರ ಜೀವನ ಮಟ್ಟದ ಮೇಲೆ ಭಾರೀ ಪರಿಣಾಮ ಬೀರಿದೆ. ಇನ್ನು, ‘ಕಳೆದ ಐದು ವರ್ಷಗಳ ಹಿಂದನ ಪರಿಸ್ಥಿತಿಗೆ ಹೋಲಿಸಿದರೆ, ಇಂದು ಉದ್ಯೋಗವನ್ನು ಪಡೆಯುವುದು ತುಂಬಾ ಸುಲಭವೆಂದು ಭಾವಿಸುತ್ತೀರಾ ಅಥವಾ ಕಷ್ಟಕರವಾಗಿದೆಯೇ’ ಎಂಬ ಪ್ರಶ್ನೆಗೆ ಸಮೀಕ್ಷೆ ಒಳಪಟ್ಟವರಲ್ಲಿ 62%ಗೂ ಹೆಚ್ಚು ಜನರು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

ಬೆಲೆ ಏರಿಕೆ ಕುರಿತ, ‘ಬೆಲೆ ಏರಿಕೆಯ ಬಗ್ಗೆ ಅಭಿಪ್ರಾಯವೇನು? ಕಳೆದ ಐದು ವರ್ಷಗಳಲ್ಲಿ ಬೆಲೆ ಏರಿಕೆ ಹೆಚ್ಚಿದೆಯೇ ಅಥವಾ ಕಡಿಮೆಯಾಗಿದೆಯೇ’ ಎಂಬ ಪ್ರಶ್ನೆಗೆ 71%ರಷ್ಟು ಮಂದಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

Advertisements

ಹತ್ತು ವರ್ಷಗಳ ದೀರ್ಘಾವಧಿಯ ಆಡಳಿತ ನಡೆಸಿರುವ ಮೋದಿ ಮತ್ತು ಬಿಜೆಪಿ ಪುನರಾಯ್ಕೆಯ ಭರವಸೆಯೊಂದಿಗೆ ಮಾತನಾಡುತ್ತಿದ್ದಾರೆ. ಮೂರನೇ ಗೆಲುವಿಗಾಗಿ ಪ್ರಚಾರಕ್ಕೆ ಹೋಗುತ್ತಿರುವ ಅವರು, ಬೆಲೆ ಏರಿಕೆ, ನಿರುದ್ಯೋಗ ಹಾಗೂ 140 ಕೋಟಿ ಜನರು ಅಥವಾ 97 ಕೋಟಿ ಮತದಾರರ ಬದುಕಿನ ಬಗ್ಗೆ ಮಾತನಾಡುತ್ತಿದ್ದಾರೆಯೇ? ಖಂಡಿತಾ ಇಲ್ಲ. ಬದಲಾಗಿ, ವಿಪಕ್ಷಗಳ ನಾಯಕರು ಶ್ರಾವಣ ಮಾಸದಲ್ಲಿ ಮಾಂಸ ತಿಂದರು, ಮೀನು ತಿಂದರು ಎಂಬುದರ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ.

ಪ್ರಧಾನಿ ಮೋದಿ ನಿಜವಾಗಿಯೂ ಮಾತನಾಡಬೇಕಿರುವ ಅಸಲಿ ವಿಚಾರಗಳು ಮತ್ತು ಅವರೇಕೆ ಮೀನು-ಮಾಂಸದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಆರ್ಥ ಮಾಡಿಕೊಳ್ಳಲು ಕಾರಣಗಳು ಇಲ್ಲಿವೆ;

ನಿರುದ್ಯೋಗ

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಯಲ್ಲಿ ಭಾರತದ ನಿರುದ್ಯೋಗ ದರವು ಪ್ರಸ್ತುತ 8%ಗೆ ಏರಿಕೆಯಾಗಿದೆ. ಈ ನಿರುದ್ಯೋಗಿಗಳಲ್ಲಿ 83% ಮಂದಿ ಯುವಜನರೇ ಆಗಿದ್ದಾರೆ ಎಂಬುದನ್ನು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣೆ ಕೇಂದ್ರ (ಸಿಎಂಐಇ) ವಿವರಿಸಿದೆ.

ಸಿಎಂಐಇ ಅಂಕಿಅಂಶಗಳ ಪ್ರಕಾರ, ಸಕ್ರಿಯವಾಗಿ ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿಗಳ ಸಂಖ್ಯೆಯು ಸುಮಾರು 3.7 ಕೋಟಿಗೆ ಏರಿಕೆಯಾಗಿದೆ. 2020-21ರಲ್ಲಿ ನಿರುದ್ಯೋಗದರವು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ಏರಿಕೆಯಾಗಿತ್ತು. ಆ ವರ್ಷ ನಿರುದ್ಯೋಗ ದರ 8%ಅನ್ನು ದಾಟಿತ್ತು.

ಹೆಚ್ಚುವರಿಯಾಗಿ, ಕಾರ್ಮಿಕ ಮಾರುಕಟ್ಟೆಯಲ್ಲಿ ಕಾರ್ಮಿಕ ಭಾಗವಹಿಸುವಿಕೆಯ ದರವು ಕೊರೊನಾ ನಂತರದಲ್ಲಿ ಚೇತರಿಸಿಕೊಂಡಿಯೇ ಇಲ್ಲ. 2016-17ರಲ್ಲಿ ಕಾರ್ಮಿಕ ಭಾಗವಹಿಸುವಿಕೆ ದರ 46.2% ರಷ್ಟಿತ್ತು. 2023-24ರಲ್ಲಿ 40.4%ಗೆ ಕುಸಿದಿದೆ.

ಬೆಲೆ ಏರಿಕೆ

ನಿಶ್ಚಲವಾದ ಆದಾಯ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳಿಂದ ಜನರ ಬದುಕು ತತ್ತರಿಸುತ್ತಿದೆ. ಹೆಚ್ಚುತ್ತಿರುವ ಹಣದುಬ್ಬರವು ಭಾರತೀಯರ ಮೇಲೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಪರಿಣಾಮ ಬೀರುತ್ತಿದೆ.

2023-24ಕ್ಕೆ ಹೋಲಿಸಿದರೆ 2012-13ರಲ್ಲಿ ಹಣದುಬ್ಬರ ಹೆಚ್ಚಾಗಿತ್ತು. ಆದರೆ, ನಿರುದ್ಯೋಗ ದರ ಈಗಿನಷ್ಟು ಹೆಚ್ಚಿರಲಿಲ್ಲ. ಹಣದುಬ್ಬರವು  ಪ್ರಸ್ತುತ ವರ್ಷದಲ್ಲಿ ಜನರಿಗೆ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಿದೆ.

ಗ್ರಾಮೀಣ ಪ್ರದೇಶದಲ್ಲಿ ಮನರೇಗಾ ಉದ್ಯೋಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು, ಗ್ರಾಮೀಣ ಭಾಗದಲ್ಲಿ ಬೆಲೆ ಏರಿಕೆಯಿಂದಾಗಿ ಎದುರಾಗುತ್ತಿರುವ ಸಂಕಷ್ಟಗಳಿಗೆ ಕನ್ನಡಿ ಹಿಡಿಯುತ್ತದೆ. ಅಲ್ಲದೆ, ಪರಿಣಾಮಗಳನ್ನು ತೆರೆದಿಡುತ್ತದೆ.

ನಗರ ಪ್ರದೇಶದಲ್ಲಿಯೂ ಅಸಂಗಟಿತ ಕಾರ್ಮಿಕರ ಪರಿಸ್ಥಿತಿ ಕೂಡ ಅಂತದ್ದೇ ಪರಿಣಾಮಗಳಿಗೆ ಗುರಿಯಾಗಿದೆ.

ಉಳಿತಾಯ

2023ರ ಆರ್ಥಿಕ ವರ್ಷದಲ್ಲಿ ಮನೆಯ ಉಳಿತಾಯವು ಕೆಳದ 50 ವರ್ಷಗಳಲ್ಲಿಯೂ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಇದೇ ಸಮಯದಲ್ಲಿ ಸಾಲದ ಮಟ್ಟವು ಹೆಚ್ಚಾಗಿದೆ.

ಪತ್ರಕರ್ತ ತಮಾಲ್ ಬಂಡೋಪಾಧ್ಯಾಯ ಅವರು 2023ರ ನವೆಂಬರ್‌ನಲ್ಲಿ ಆರ್‌ಬಿಐ ಡೆಪ್ಯುಟಿ ಗವರ್ನರ್ ಸ್ವಾಮಿನಾಥನ್ ಜೆ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಕಳೆದ ಎರಡು ವರ್ಷಗಳಲ್ಲಿ ಅಸುರಕ್ಷಿತ ಸಾಲಗಳು 23%ರಷ್ಟು ಹೆಚ್ಚಾಗಿವೆ ಎಂದು ವಿವರಿಸಿದ್ದರು.

ಇಂಧನ ಬೆಲೆ

ದತ್ತಾಂಶಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವು 2013-14ರಿಂದ ಗಣನೀಯವಾಗಿ ಹೆಚ್ಚುತ್ತಿದೆ. ಪರಿಣಾಮವಾಗಿ, 2013-14ಕ್ಕಿಂತ ಪ್ರಸ್ತುತ ಕಚ್ಛಾ ತೈಲದ ಬೆಲೆಯು ಕಡಿಯೆ ಇದ್ದರೂ, ಪೆಟ್ರೋಲ್-ಡೀಸೆಲ್ ಬೆಲೆ ಗಗನ ನೂರರ ಗಡಿ ದಾಟಿದೆ.

ಪ್ರಜಾಸತ್ತಾತ್ಮಕ ವಿಶ್ವಾಸಾರ್ಹತೆ

ಪ್ರಜಾಪ್ರಭುತ್ವದ ಕುರಿತು ಅಧ್ಯಯನ ಮಾಡುತ್ತಿರುವ ಜಾಗತಿಕ ಸಂಸ್ಥೆಗಳು, ಭಾರತದ ಪ್ರಜಾಪ್ರಭುತ್ವದ ಸೂಚ್ಯಂಕವನ್ನು ಹಿನ್ನಡೆ ಅನುಭವಿಸುತ್ತಿದೆ ಎಂಬುದನ್ನು ಗುರುತಿಸಿವೆ. ಫ್ರೀಡಂ ಹೌಸ್, ವಿ-ಡೆಮ್, ಐಡಿಇಎ, ದಿ ಎಕನಾಮಿಸ್ಟ್ಸ್ ಇಂಡೆಕ್ಸ್ – ಸಮೀಕ್ಷೆಗಳು ಮತ್ತು ಸೂಚ್ಯಂಕಗಳು ಭಾರವು ಅತ್ಯಂತ ವೇಗವಾಗಿ ನಿರಂಕುಶವಾದದತ್ತ ಚಲಿಸುತ್ತಿದೆ ಎಂದು ಹೇಳುತ್ತವೆ. ಇದನ್ನು ‘ಚುನಾವಣಾ ನಿರಂಕುಶಪ್ರಭುತ್ವ’ ಎಂದು ವರ್ಗೀಕರಿಸಿವೆ.

ಅಸಮಾನತೆ

ಭಾರತದಲ್ಲಿ ಅಸಮಾನತೆ ತೀವ್ರವಾಗಿ ಏರಿದೆ. ಪ್ರಸ್ತುತ ಸಂದರ್ಭದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತ ಹೆಚ್ಚು ಅಸಮಾನತೆ ಭಾರತದಲ್ಲಿದೆ. ವಿಶ್ವ ಅಸಮಾನತೆ ಅಧ್ಯಯನವು ಭಾರತದಲ್ಲಿ 1% ಶ್ರೀಮಂತರ ಬಳಿ 22% ದೇಶದ ಸಂಪತ್ತು ಕೇಂದ್ರಿಕರಣವಾಗಿದೆ ಎಂದು ಹೇಳಿದೆ. ಇದು ಬಿಲಿಯನೇರ್ ರಾಜ್ ಉದಯ ಎಂದು ಕರೆದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X