ಜಾರ್ಖಂಡ್‌ | ವಿಧವಾ ಪುನರ್ವಿವಾಹ ಯೋಜನೆ ಪ್ರಾರಂಭ; 2 ಲಕ್ಷ ರೂ. ಪ್ರೋತ್ಸಾಹ ಧನ!

Date:

Advertisements

ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ವಿಧವಾ ಪುನರ್ವಿವಾಹ ಪ್ರೋತ್ಸಾಧನ ಯೋಜನೆಗೆ ಬುಧವಾರ ಚಾಲನೆ ನೀಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಪತಿಯ ಮರಣದ ನಂತರ ಮತ್ತೆ ವಿವಾಹವಾಗಲು ನಿರ್ಧರಿಸುವ ಮಹಿಳೆಯರಿಗೆ ಸರ್ಕಾರದಿಂದ 2 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಅಧಿಕಾರಿಗಳ ಪ್ರಕಾರ, ಈ ಯೋಜನೆಯ ಫಲಾನುಭವಿಗಳು ಮರು ವಿವಾಹವಾಗುವ ವಯಸ್ಸಿವರಾಗಿರಬೇಕು. ಹಾಗೆಯೇ ಸರ್ಕಾರಿ ಉದ್ಯೋಗಿ, ಪಿಂಚಣಿದಾರರು ಮತ್ತು ಆದಾಯ ತೆರಿಗೆ ಪಾವತಿದಾರರು ಆಗಿರಬಾರದು. ಈ ಯೋಜನೆಯ ಲಾಭವನ್ನು ಪಡೆಯಲು ಫಲಾನುಭವಿಗಳು ಮರು ವಿವಾಹವಾದ ಒಂದು ವರ್ಷದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಪತಿಯ ಮರಣ ಪ್ರಮಾಣಪತ್ರವನ್ನೂ ಸಲ್ಲಿಸಬೇಕು.

ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣಾ ಇಲಾಖೆ ಅಧಿಕಾರಿ ಮನೋಜ್ ಕುಮಾರ್, “ಪತಿಯ ಮರಣದ ಬಳಿಕ ಸಮಾಜದಲ್ಲಿ ಒಬ್ಬಂಟಿಯಾಗಿ ಜೀವಿಸುವ ಮಹಿಳೆಯು ಅಸಹಾಯಕರಾಗಿರುತ್ತಾರೆ ಮತ್ತು ಆ ಮಹಿಳೆಯರಿಗೆ ಹೊಸ ಜೀವನ ನಡೆಸುವ ಬಯಕೆ ಇರುತ್ತದೆ. ಈ ರೀತಿ ಮರು ವಿವಾಹವಾಗಲು ನಿರ್ಧಾರ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರವು ಹಣಕಾಸು ಸಹಾಯ ಮಾಡಲಿದೆ,” ಎಂದು ತಿಳಿಸಿದ್ದಾರೆ.

Advertisements

“ಮಹಿಳಾ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಈ ವಿಧವಾ ಪುನರ್ವಿವಾಹ ಪ್ರೋತ್ಸಾಹ ಯೋಜನೆಯನ್ನು ಮುಖ್ಯಮಂತ್ರಿ ಚಂಪೈ ಸೊರೆನ್ ಬುಧವಾರ ಆರಂಭಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಎರಡು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಯೋಜನೆಯು ವಿಧವೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಮಹಿಳೆ ಪುನರ್ವಿವಾಹವಾಗುವ ವಿಚಾರದಲ್ಲಿ ಸಮಾಜದಲ್ಲಿರುವ ಅಭಿಪ್ರಾಯವನ್ನು ಬದಲಾಯಿಸುತ್ತದೆ,” ಎಂದು ಹೇಳಿದರು.

ಬುಧವಾರ ರಾಂಚಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಟ್ಟು ಏಳು ಫಲಾನುಭವಿಗಳಿಗೆ ತಲಾ ಎರಡು ಲಕ್ಷ ರೂಪಾಯಿಯಂತೆ 14 ಲಕ್ಷ ರೂಪಾಯಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂಪೈ ಸೊರೆನ್ ಅಂಗನವಾಡಿ ಕಾರ್ಯಕರ್ತರಿಗೆ 9,500 ರೂಪಾಯಿ ಮತ್ತು ಸಹಾಯಕರಿಗೆ 4750 ರೂಪಾಯಿ ಮಾಸಿಕ ಭತ್ಯೆಯನ್ನು ಘೋಷಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ವಿಧವಾ ಪುನರ್ವಿವಾಹ ಯೋಜನೆಯಿದ್ದು, ಈ ಯೋಜನೆಯಡಿಯಲ್ಲಿ 25, 000 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಈ ಪೈಕಿ 10,000 ರೂಪಾಯಿ ವಿವಾಹ ಸಂದರ್ಭ ನೀಡಿದರೆ, 15,000 ರೂಪಾಯಿ ಪತಿ ಪತ್ನಿಯ ಹೆಸರಲ್ಲಿ ಐದು ವರ್ಷಗಳ ಕಾಲಕ್ಕೆ ಎಫ್‌ಡಿ ಮಾಡಲಾಗುತ್ತದೆ.

ತಮಿಳುನಾಡಿನಲ್ಲಿ ವಿಧವಾ ಪುನರ್ವಿವಾಹ ಯೋಜನೆಯಡಿಯಲ್ಲಿ ಮರು ವಿವಾಹವಾದ ಮಹಿಳೆಯರಿಗೆ 25,000 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಈ ಪೈಕಿ 15,000 ರೂಪಾಯಿ ನೇರವಾಗಿ ವರ್ಗಾಯಿಸಿದರೆ, ಉಳಿದ 10,000 ರೂಪಾಯಿಯ ಮೊತ್ತವನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಹೂಡಿಕೆ ಖಾತೆ ಮಾಡಿಸಿಕೊಡಲಾಗುತ್ತದೆ. ಜೊತೆಗೆ ನಾಲ್ಕು ಗ್ರಾಂ ಚಿನ್ನವನ್ನು ನೀಡಲಾಗುತ್ತದೆ.

ಕೇರಳದಲ್ಲಿ 18ರಿಂದ 50 ವರ್ಷದೊಳಗಿನ ವಿಧವೆ ಅಥವಾ ವಿಚ್ಛೇದನ ಪಡೆದ ಮಹಿಳೆ ಮರು ವಿವಾಹವಾದರೆ 25000 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಆದರೆ ಜಾರ್ಖಂಡ್‌ನಲ್ಲಿ ಎರಡು ಲಕ್ಷ ರೂಪಾಯಿಯನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದ್ದು, ದೇಶದಲ್ಲೇ ಅಧಿಕ ಮೊತ್ತ ಪ್ರೋತ್ಸಾಹ ಧನವಾಗಿ ನೀಡುವ ದೇಶ ಎಂದು ಹೇಳಬಹುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X