ಬಿಜೆಪಿ ಸೋತರೆ – ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವರೇ ಮೋದಿ? ಜೂನ್ 4ರ ನಂತರ ಏನಾಗಬಹುದು?!

Date:

Advertisements

ಲೋಕಸಭಾ ಚುನಾವಣೆ ಭರದಿಂದ ಸಾಗುತ್ತಿದೆ. 5 ಹಂತದ ಮತದಾನ ಮುಗಿದಿದ್ದು, ಇನ್ನೆರಡು ಹಂತಗಳ ಮತದಾನವಷ್ಟೇ ಬಾಕಿ ಇದೆ. ಭಿನ್ನವಾದ ಸಮೀಕ್ಷೆಗಳು, ವಿಶ್ಲೇಷಣೆಗಳು ಹೊರ ಬರುತ್ತಿವೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸೋಲಬಹುದು ಎಂಬ ಅಭಿಪ್ರಾಯಗಳೇ ಹೆಚ್ಚಾಗಿವೆ. ಒಂದು ವೇಳೆ ಹಾಗಾದರೆ ಏನಾಗಲಿದೆ. ಸೋಲಿನ ಆತಂಕವನ್ನು ಎದುರಿಸುತ್ತಿರುವ ಬಿಜೆಪಿ ಈಗಾಗಲೇ ಎದುರಾಳಿಗಳನ್ನು ಸ್ಪರ್ಧೆಯಿಂದ ಪರಿಣಾಮಕಾರಿಯಾಗಿ ಹೊರದಬ್ಬುವ ಯತ್ನಗಳು ನಡೆಯುತ್ತಿವೆ. ಅದಾಗಿಯೂ, ತಮ್ಮೆಲ್ಲ ತಂತ್ರಗಳು ವಿಫಲವಾದರೆ, ಫಲಿತಾಂಶ ತಮ್ಮ ವಿರುದ್ಧ ಬಂದರೆ, ಮೋದಿ ಹತಾಶರಾದರೆ, ಅಧಿಕಾರ ಹಸ್ತಾಂತರ ಶಾಂತಿಯುತವಾಗಿ ನೆರವೇರುವುದೇ? ಅಥವಾ ಅವಾಂತರ ಸೃಷ್ಟಿಸಬಹುದೇ? ಎಂಬ ಪ್ರಶ್ನೆಗಳು ಕೇಳಿಬರತೊಡಗಿವೆ.

ಸಾಮಾನ್ಯವಾಗಿ ಎರಡು ರೀತಿಯಲ್ಲಿ ಚುನಾವಣೆಗಳು ನಡೆಯುತ್ತವೆ. ಅವು ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಆಳುವ ವ್ಯಕ್ತಿಗೆ ಪೂರಕವಾಗಿದೆಯೇ ಅಥವಾ ಹಾನಿಕಾರಕವಾಗಿದೆಯೇ ಎಂಬುದರ ಮೇಲೆ ನಿರ್ಧರಿತವಾಗಿರುತ್ತವೆ.

ಆಳುವ ವ್ಯಕ್ತಿಗೆ ಹೆಚ್ಚು ಹಾನಿಕಾರಕ ಸಂದರ್ಭವಿದ್ದರೆ, ಎದುರಾಳಿಗಳೇ ಕಣ್ಮರೆಯಾಗಿಬಿಡುತ್ತಾರೆ. ಗದ್ದಲ ಉದ್ಭವಿಸುತ್ತದೆ. ಶಸ್ತ್ರಸಜ್ಜಿತ ವ್ಯಕ್ತಿಗಳು ಬಹಿರಂಗವಾಗಿ ದಾಳಿ ಮಾಡುತ್ತಾರೆ. ಅವರಲ್ಲಿ, ಸೇನಾ ತುಕಡಿಗಳ ಪಾತ್ರ ಹೆಚ್ಚಾಗುತ್ತದೆ. ಡಮ್ಮಿ ಪ್ರತಿಸ್ಪರ್ಧಿಗಳು ಮಾತ್ರವೇ ಕಣದಲ್ಲಿರುತ್ತಾರೆ. ನಾಯಕ ಬಹುತೇಕ ಎಲ್ಲ ಮತಗಳನ್ನು ಪಡೆಯುತ್ತಾನೆ.

Advertisements

ಒಂದು ವೇಳೆ, ಸಂದರ್ಭವು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿದ್ದರೆ, ನಾಯಕ ಆರಾಮದಾಯಕವಾಗಿ ಗೆಲ್ಲುಲು ಯತ್ನಿಸುತ್ತಾನೆ. ತನ್ನ ಪರವಾದ ಫಲಿತಾಂಶ ಬರಲು ಅಗತ್ಯವಿರುವ ಎಲ್ಲ ರೀತಿಯಲ್ಲಿಯೂ ತಂತ್ರಗಳನ್ನು ಹೆಣೆಯಲಾಗುತ್ತದೆ. ಮತದಾರರು ತಮ್ಮ ಭವಿಷ್ಯವನ್ನು ಖಾತ್ರಿಪಡಿಸುವ ರೀತಿಯಲ್ಲಿ ಕಾರ್ಯಸೂಚಿಗಳು ಜಾರಿಗೆ ಬರುತ್ತವೆ. ಚುನಾವಣೆ ನಡೆಸುವ ಅಧಿಕಾರವನ್ನೂ ಆತನೇ ಪಡೆದು, ಗೆಲ್ಲುವ ವಿಶ್ವಾಸ ಹೊಂದಿರುತ್ತಾನೆ.

ಸದ್ಯ, ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯು ಎರಡನೇ ರೀತಿಯಲ್ಲಿದೆ. ಚುನಾವಣಾ ಫಲಿತಾಂಶಗಳು ಆಳುವ ಬಿಜೆಪಿ ಪರವಾಗಿರುತ್ತವೆ ಎಂಬ ಸಂದೇಶವುಳ್ಳ ಸಮೀಕ್ಷೆಗಳನ್ನ ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ. ವಿಭಿನ್ನ ಫಲಿತಾಂಶ ಸೂಚಿಸುವ ಸಮೀಕ್ಷೆಗಳನ್ನು ಹೊರಗಿಡಲಾಗುತ್ತಿದೆ. ಅಷ್ಟೇ ಏಕೆ? ಚುನಾವಣಾ ಆಯೋಗವನ್ನೇ ತಮಗೆ ಬೇಕಾದಂತೆ ಬದಲಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುವ ಕೆಲವೇ ತಿಂಗಳುಗಳ ಮೊದಲು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಕಾನೂನನ್ನೇ ಬದಲಿಸಲಾಗಿದೆ. ಆಯ್ಕೆಯಲ್ಲಿ ಆಳುವ ಪಕ್ಷದವರ ಬಹುಮತ ಇರುವಂತೆ ಮಾಡಲಾಗಿದೆ. ಅದೇ ರೀತಿ, ಆಯುಕ್ತರ ಆಯ್ಕೆಯೂ ನಡೆದಿದೆ. ಇದೀಗ, ಮತದಾನದ ಅಂಕಿಅಂಶಗಳನ್ನು ನೀಡಲು ಆಯೋಗ ವಿಳಂಬ ಮಾಡುತ್ತಲೇ ಇದೆ. ಈ ವಿಳಂಬವು ಬಿಜೆಪಿ ನಡೆಸುತ್ತಿರುವ ಚುನಾವಣಾ ಅಕ್ರಮಕ್ಕೆ ಪೂರಕವಾಗಿದೆ ಎಂದು ಆರೋಪಿಸಲಾಗುತ್ತಿದೆ.

ಅಲ್ಲದೆ, ಚುನಾವಣೆ ಘೋಷಣೆಯ ಸಮಯದಲ್ಲೇ ಪ್ರಮುಖ ರಾಷ್ಟ್ರೀಯ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಯಿತು. ಇದರಿಂದಾಗಿ, ಪಕ್ಷವು ಹೆಚ್ಚಾಗಿ ಪ್ರಚಾರ ಮಾಡದಂತೆ, ಹೆಚ್ಚು ಚುನಾವಣಾ ಕೆಲಸ ಮಾಡದಂತೆ ತಡೆಯಬಹುದು ಎಂಬುದು ಮೋದಿ ನೇತೃತ್ವದ ಬಿಜೆಪಿಯ ಕುತಂತ್ರವಾಗಿತ್ತು. ಅದಕ್ಕೂ ಮುನ್ನ, ಸಂಸತ್ತಿನಲ್ಲಿ ಸರ್ಕಾರದ ಉದ್ದೇಶಗಳ ಬಗ್ಗೆ ನಿರ್ಭೀತಿಯಿಂದ ಪ್ರಶ್ನೆ ಎತ್ತುವವರನ್ನು ಸಂಸತ್ತಿನಿಂದ ಉಚ್ಚಾಟಿಸಲಾಗಿತ್ತು. ಬಳಿಕ, ಭ್ರಷ್ಟಾಚಾರದ ಆರೋಪದ ಮೇಲೆ ಇಬ್ಬರು ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ವಿಚಾರಣೆಯನ್ನೇ ನಡೆಸದೆ ಜೈಲಿಗೆ ದಬ್ಬಲಾಯಿತು. ಜೊತೆಗೆ, ಕಾನೂನುಬದ್ಧ ತನಿಖಾ ಸಂಸ್ಥೆಗಳನ್ನು ಮೋದಿ ಸರ್ಕಾರ ತನ್ನ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದೆ.

ಇದು ಸರ್ವಾಧಿಕಾರವನ್ನು ಸೂಚಿಸುತ್ತದೆ. ಆದರೆ, ಈ ಸರ್ವಾಧಿಕಾರಕ್ಕೆ ಜನರಲ್ಲಿ ಮನ್ನಣೆ ಇಲ್ಲ. ಭಾರತವು ಅನೇಕ ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಪದ್ಧತಿಗಳು, ವಿಭಿನ್ನ ಸಾಮಾಜಿಕ ವ್ಯವಸ್ಥೆಗಳು ಹಾಗೂ ಸಾಂಸ್ಕೃತಿಕ – ರಾಜಕೀಯ ಇತಿಹಾಸಗಳಿಂದ ಜನರು ಪ್ರೇರೇಪಿತರಾಗಿದ್ದಾರೆ. ಭಾರತದ ಸಂವಿಧಾನವು ಪ್ರದೇಶಗಳು ಮತ್ತು ರಾಜ್ಯಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಧರ್ಮಗಳು, ಸಂಸ್ಕೃತಿಗಳು ಮತ್ತು ಭಾಷೆಗಳಿಗೆ ತನ್ನದೇ ಆದ ಮೌಲ್ಯಗಳನ್ನು ನೀಡಿದೆ. ಅವುಗಳನ್ನು ಫೆಡರಲ್ ರಚನೆಯಲ್ಲಿ ಬೆಸೆದಿದೆ ಮತ್ತು ಸಬಲಗೊಳಿಸಿದೆ.

ಇಂತಹ ವೈವಿಧ್ಯಮಯ ರಾಷ್ಟ್ರದಲ್ಲಿ ಒಂದು ಪಕ್ಷ ಅಥವಾ ನಾಯಕನ ಸರ್ವಾಧಿಕಾರದ ಪ್ರವೃತ್ತಿಗೆ ಆಸ್ಪದವಿಲ್ಲ. ಅಂತಹ ಧೋರಣೆಗಳನ್ನು ಖಡಾಖಂಡಿತವಾಗಿ ವಿರೋಧಿಸಲಾಗುತ್ತದೆ. ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಅವರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಆದ್ದರಿಂದಲೇ, ಮೋದಿ ಅವರು ಜಾಣತನದಿಂದಲೂ, ಕಪಟತನದಿಂದಲೂ ಏಕತೆಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಒಂದು ರಾಷ್ಟ್ರ-ಒಂದು ಚುನಾವಣೆ, ಒಂದು ರಾಷ್ಟ್ರ-ಒಂದು ಪಡಿತರ ಚೀಟಿ, ಒಂದು ರಾಷ್ಟ್ರ-ಒಂದು ಸರ್ವೋಚ್ಚ ಧರ್ಮ ಎಂಬ ಪ್ರತಿಪಾದನೆಯೊಂದಿಗೆ ಹಿಂದು ರಾಷ್ಟ್ರೀಯವಾದವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ಮುಸ್ಲಿಂ ವಿರೋಧಿ ದ್ವೇಷದ ವಿಷವನ್ನೂ ತಲೆಗೆ ತುಂಬುತ್ತಿದ್ದಾರೆ. ಇದೆಲ್ಲದರೊಂದಿಗೆ, ‘ಒಂದು ರಾಷ್ಟ್ರ-ಒಬ್ಬ ನಾಯಕ’ ಎಂಬ ತಮ್ಮ ಅಘೋಷಿತ ಮಹತ್ವಾಕಾಂಕ್ಷೆಯ ಹಿಡನ್ ಅಜೆಂಡಾವನ್ನು ಸಾಧಿಸಲು ಯತ್ನಿಸುತ್ತಿದ್ದಾರೆ. ಇದೊಂದಿಗೆ, ಪೂರ್ಣ ಪ್ರಮಾಣದ ಸರ್ವಾಧಿಕಾರಕ್ಕಾಗಿ ಮೋದಿ-ಶಾ ಜೋಡಿ ತಂತ್ರ ಹೆಣೆಯುತ್ತಿದೆ.

ಈ ‘ಒಂದು ಪಕ್ಷ – ಒಬ್ಬ ನಾಯಕ’ ಎನ್ನುವ ಸರ್ವಾಧಿಕಾರವು ಶ್ರೀಮಂತ ವರ್ಗಗಳ, ಅದರಲ್ಲೂ ನಿರ್ದಿಷ್ಟವಾಗಿ ದೊಡ್ಡ ಬಂಡವಾಳಿಗರ ಸೇವೆಗಾಗಿ ಸಂಪೂರ್ಣ ಅಧಿಕಾರವನ್ನು ಆಟದ ವಸ್ತುವಂತೆ ಬಳಸುತ್ತದೆ. ಈ ಸರ್ವಾಧಿಕಾರಿ ಆಡಳಿತದಲ್ಲಿ ಧರ್ಮನಿಷ್ಠ ಹಿಂದುಗಳನ್ನು ಕೂಡ ನಂತರದಲ್ಲಿ ಮೂಲೆಗೆ ಸರಿಸಲಾಗುತ್ತದೆ.

ಆದರೆ, ಮೋದಿಯ ಈ ಸರ್ವಾಧಿಕಾರಿ-ಬಂಡವಾಳಶಾಹಿ ಕನಸಿನ ಯೋಜನೆಗೆ ಭಾರತೀಯ ಜನರ ಬಹುತ್ವ ಮತ್ತು ವೈವಿಧ್ಯತೆ ಅಡಚಣೆಯಾಗಿದೆ. ದೇಶದ ವಿವಿಧ ಭಾಗಗಳ ಜನರು ತಮ್ಮ ಪ್ರಬಲ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲವಾಗಿದ್ದಾರೆ. ಹೆಚ್ಚು ಜನರ ಬೆಂಬಲ ಹೊಂದಿರುವ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದಲ್ಲಿವೆ. ಈ ಮೈತ್ರಿಕೂಟವು ಮೋದಿ ಆಡಳಿತವನ್ನು ಹಿಮ್ಮೆಟ್ಟಲು, ಮೋದಿ ಆಡಳಿತದ ಅಪಾಯಕಾರಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ನಿರ್ದೇಶನದಿಂದ ಭಾರತವನ್ನು ಬದಲಾವಣೆಯ ಹಾದಿಯಲ್ಲಿ ಕೊಂಡೊಯ್ಯಲು ಪಣತೊಟ್ಟಿವೆ.

ಈ ವರದಿ ಓದಿದ್ದೀರಾ?: ಕಠೋರ ಸತ್ಯ | ಹಿಂದಿನ ಸರ್ಕಾರಗಳಿಗಿಂತ ಮೋದಿ ‘ಟ್ರ್ಯಾಕ್‌ ರೆಕಾರ್ಡ್‌’ ಅತ್ಯದ್ಭುತವೇ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಟ್ಟಿಯಾಗಿ ಮತ್ತು ಬಿರುಸಾಗಿ ಅಖಾಡದಲ್ಲಿದ್ದಾರೆ. ಬದಲಾವಣೆಯ ಶಕ್ತಿಯನ್ನು ಪೂರೈಕೆ ಮಾಡುತ್ತಿದ್ದಾರೆ. ಮೂರನೇ ಬಾರಿಗೆ ಮೋದಿ ಗೆಲುವು ಸಾಧಿಸುವ ಸಾಧ್ಯತೆಯಿಲ್ಲ ಎಂದು ಭಾವಿಸಲಾಗಿದೆ. ಆದರೆ, ಒಂದು ವೇಳೆ ಮೋದಿ ಸೋತರೆ, ಶಾಂತಿಯುತ ಅಧಿಕಾರದ ಹಸ್ತಾಂತರ ಸಾಧ್ಯವೇ ಎಂಬ ಪ್ರಶ್ನೆ ಮುನ್ನೆಲೆಯಲ್ಲಿದೆ.

ಅಗಾಧವಾದ ಸಂಪನ್ಮೂಲಗಳನ್ನು ಸಂಗ್ರಹಿಸಿರುವ ಮೋದಿ ಮತ್ತು ಅವರ ಬಿಜೆಪಿ ರಾಜಕೀಯ ಗದ್ದಲ, ದಂಗೆಕೋರ ದೃಷ್ಟಿಕೋನ ಹಾಗೂ ‘ಅಸಂವಿಧಾನಿಕ’ವಾದ ಯಾವುದನ್ನಾದರೂ ಮಾಡಲು ಮುಂದಾಗಬಹುದು. ರಾಜಕೀಯ ಅಸ್ಥಿರತೆ ಉಂಟಾಗಬಹುದು. ರಾಷ್ಟ್ರಪತಿಗಳು ‘ಇಂಡಿಯಾ’ ಮೈತ್ರಿಕೂಟವಲ್ಲದೆ, ಯಾವುದಾದರೂ ಪಕ್ಷವನ್ನು ಸರ್ಕಾರ ರಚಿಸುವ ಹಕ್ಕು ಮಂಡನೆಗೆ ಕರೆಯಬಹುದು. ರಾಷ್ಟ್ರಪತಿಗಳು ತುರ್ತುಪರಿಸ್ಥಿತಿಯನ್ನೂ ಹೇರಬಹುದು.

ಇದೆಲ್ಲವೂ ಆತಂಕ, ಕಳವಳ, ಊಹೆಗಳಾಗಿವೆ. ಈ ಪ್ರಶ್ನೆಗಳು ದೇಶದಲ್ಲಿ ಬದಲಾವಣೆ ಬಯಸುತ್ತಿರುವ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ತುಡಿಯುತ್ತಿರುವ ಹಲವಾರು ದೇಶವಾಸಿಗಳಲ್ಲಿ ಆಳವಾಗಿ ಬೇರೂರಿವೆ. ಏನಾಗಲಿದೆ ಎಂಬುದಕ್ಕೆ ಮುಂದಿನ ದಿನಗಳು ಉತ್ತರಿಸಲಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X