ಉತ್ತರ ಭಾರತ ಮತ್ತು ಈಶಾನ್ಯದ ರಾಜ್ಯಗಳಿಗೆ ಹೋಲಿಸಿದಲ್ಲಿ ಭಾರತದ ಆದಿಮ ಸಮಾಜಗಳಿರುವುದು ದಕ್ಷಿಣ ಭಾರತದಲ್ಲಿ ಎಂಬ ಸಂಗತಿ ಈಚೆಗೆ ಮುಂಚೂಣಿಗೆ ಬರುತ್ತಿದೆ. ಭಾರತದ ಓಡಿಶಾ ರಾಜ್ಯದಲ್ಲಿ 62 ಸಮುದಾಯಗಳನ್ನು ಅನುಸೂಚಿತ ಬುಡಕಟ್ಟುಗಳು (Scheduled Tribes) ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ 50 ಸಮುದಾಯಗಳನ್ನು ಅನುಸೂಚಿತ ಬುಡಕಟ್ಟುಗಳು ಎಂದು ಪಟ್ಟಿ ಮಾಡಲಾಗಿದೆ. ಹೀಗಾಗಿ ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ. ಇನ್ನು ಬಡತನದ ರೇಖೆಗಿಂತ ಕೆಳಗೆ ಬದುಕುತ್ತಿರುವ ಆದಿವಾಸಿಗಳು ಹೆಚ್ಚಿರುವುದು ಉತ್ತರಾಖಂಡ್ ರಾಜ್ಯದಲ್ಲಿ. ಉತ್ತರಾಖಂಡ…

ಡಾ. ಎ. ಎಸ್. ಪ್ರಭಾಕರ
ಎ.ಎಸ್. ಪ್ರಭಾಕರ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯರಬಳ್ಳಿಯವರು. ಪ್ರಸ್ತುತ ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 26 ವರ್ಷಗಳ ಬೋಧನಾ ಅನುಭವ ಹೊಂದಿದ್ದು ಬುಡಕಟ್ಟು ಸಮುದಾಯಗಳ ಅಧ್ಯಯನ ಅವರ ವಿಶೇಷ ಪರಿಣತಿ ಕ್ಷೇತ್ರವಾಗಿದೆ. `ಚಹರೆಗಳೆಂದರೆ ಗಾಯಗಳು ಹೌದು’ ಮತ್ತು ‘ಆದಿವಾಸಿಗಳ ಅಭಿವೃದ್ಧಿ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.