ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ವೊಂದು ವೈರಲ್ ಆಗುತ್ತಿತ್ತು. ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾವೊಂದರ ದೃಶ್ಯವನ್ನು ಆ ಪೋಸ್ಟರ್‌ನಲ್ಲಿ ಬಳಸಿಕೊಳ್ಳಲಾಗಿತ್ತು. ವಿಷಯ ಇಷ್ಟೇ: ಬೆಂಗಳೂರಿನ ರಸ್ತೆಯೊಂದರಲ್ಲಿ ಹಾಕಲಾದ ಮಾರ್ಗಸೂಚಿ ಬೋರ್ಡ್‌ಗೆ ಸಂಬಂಧಿಸಿದ ಟ್ರೋಲ್ ಅದಾಗಿತ್ತು. ವಿಜಯನಗರ, ಕಾಮಾಕ್ಷಿಪಾಳ್ಯ, ಮಾಗಡಿ, ಕೆಂಗೇರಿಯ ಮಾರ್ಗಸೂಚಿಸುವ ಬೋರ್ಡ್‌ನಲ್ಲಿ, ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಬಳಸಲಾಗಿತ್ತು. ಕನ್ನಡದ ಅಕ್ಷರಗಳಿರುವಲ್ಲಿ ಎಡಕ್ಕೆ ಹೋಗುವಂತೆ ಬಾಣದ ಗುರುತನ್ನು, VIJAYANAGARA, KAMAKSHIPALYA, MAGADI, KENGERI ಎಂದು ಇಂಗ್ಲಿಷ್‌ನಲ್ಲಿ ಬರೆದಿರುವಲ್ಲಿ ಬಲಕ್ಕೆ ಹೋಗುವಂತೆಯೂ ಬಾಣದ ಗುರುತನ್ನು ತೋರಿಸಲಾಗಿತ್ತು. ಈ ಟ್ರೋಲ್…

ಸೌಮ್ಯ ಕೋಡೂರು
ಶಿವಮೊಗ್ಗ ಜಿಲ್ಲೆಯ ಕೋಡೂರಿನವರಾದ ಸೌಮ್ಯ ಅವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು. ಉತ್ತಮ ವಾಗ್ಮಿಯೂ ಹೌದು