(ಮುಂದುವರಿದ ಭಾಗ..) ಕಳೆದ ಐದು ದಶಕಗಳಲ್ಲಿ ಕ್ರೈಸ್ತ ಕೊಂಕಣಿಯ ಸುಗಮ ಸಂಗೀತ ಕ್ಷೇತ್ರವು ಹುಲುಸಾಗಿ ಬೆಳೆಯುತ್ತಿದೆ. ವಿದೇಶಗಳಲ್ಲೂ ಕಾರ್ಯಕ್ರಮಗಳು ನಡೆಯುತ್ತಿವೆ. ಬಹಳಷ್ಟು ಸಂಗೀತ ಆಲ್ಬಂಗಳೂ ಜನಪ್ರಿಯವಾಗುತ್ತಿವೆ. ಕೊಂಕಣಿ ಮತ್ತು ತುಳು ಭಾಷೆಗಳಲ್ಲಿ ಹಾಡಿ ದಂತಕತೆಯಾಗಿದ್ದ ವಿಲ್ಫಿ ರೆಬಿಂಬಸ್ ಮೊದಲಾದವರು ಇದಕ್ಕೆ ಅಡಿಪಾಯ ಹಾಕಿದವರು. ಕೊಂಕಣಿ ನಾಟಕ ರಂಗದಲ್ಲಿಯೂ ಕ್ರೈಸ್ತರದ್ದೇ ಕಾರುಬಾರು. 60, 70, 80ರ ದಶಕಗಳಲ್ಲಿ ಮಂಗಳೂರಿನ ಡಾನ್‌ಬೋಸ್ಕೋ ಹಾಲ್ ಕೊಂಕಣಿ ನಾಟಕಗಳಿಗೇ ಮೀಸಲಾಗಿದೆಯೊ ಎಂಬಂತಿದ್ದು, ಈಗ ಕಡಿಮೆಯಾಗಿದ್ದರೂ, ನಾಟಕಗಳು, ಟಿವಿ ಸೀರಿಯಲ್‌ಗಳು ಬರುತ್ತಲೇ ಇವೆ. ಕೊಂಕಣಿ…

ನಿಖಿಲ್ ಕೋಲ್ಪೆ
ದಕ್ಷಿಣ ಕನ್ನಡದ ಬಂಟ್ವಾಳದವರಾದ ನಿಖಿಲ್ ಕೋಲ್ಪೆಯವರು ಅಪಾರ ಅನುಭವ ಹೊಂದಿರುವ ಹಿರಿಯ ಪತ್ರಕರ್ತರು. 80ರ ದಶಕದಲ್ಲಿ ಮುಂಬೈನಲ್ಲಿ ಹಲವು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು ನಂತರ ದಕ್ಷಿಣ ಕನ್ನಡದ ಪ್ರಜ್ಞಾವಂತ ಪತ್ರಿಕೆಗಳಾದ ಮುಂಗಾರು ಮತ್ತು ಜನವಾಹಿನಿ ಪತ್ರಿಕೆಗಳಲ್ಲಿ ದುಡಿದವರು. ಇಂದಿಗೂ ವಾರ್ತಾಭಾರತಿ, ನ್ಯಾಯಪಥ ಸೇರಿದಂತೆ ಹಲವು ಪತ್ರಿಕೆಗಳಿಗೆ ನಿರಂತರವಾಗಿ ಲೇಖನಗಳನ್ನು ಬರೆಯುತ್ತಾ, ಅನುವಾದ ಮಾಡುವ ವೃತ್ತಿಯನ್ನೂ ಮುಂದುವರಿಸಿದ್ದಾರೆ.