ಎನ್‌ಸಿಆರ್‌ಬಿಯ ವಾರ್ಷಿಕ ವರದಿಯಾದ ‘ಭಾರತದಲ್ಲಿ ಅಪರಾಧ 2022’ರಲ್ಲಿನ ಅಂಕಿಅಂಶಗಳು, ಒಟ್ಟು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿ 66.4ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ಮೇಲಿನ ಅಪರಾಧದ ದರಗಳನ್ನು ದಾಖಲಿಸಿವೆ ಎಂದು ತೋರಿಸುತ್ತದೆ. ದೆಹಲಿಯು 144.4ರಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಹರಿಯಾಣ (118.7), ತೆಲಂಗಾಣ (117), ರಾಜಸ್ಥಾನ (115.1), ಒಡಿಶಾ (103.3), ಆಂಧ್ರಪ್ರದೇಶ (96.2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (93.7), ಕೇರಳ (82), ಅಸ್ಸಾಂ (81.2), ಮಧ್ಯಪ್ರದೇಶ (78.8). ಉತ್ತರಾಖಂಡ (77), ಮಹಾರಾಷ್ಟ್ರ (75.1), ಮತ್ತು…

ಮಲ್ಲಿಗೆ ಸಿರಿಮನೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರಾದ ಮಲ್ಲಿಗೆಯವರು 2 ದಶಕಕ್ಕೂ ಹೆಚ್ಚು ಕಾಲ ಜನ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಮಹಿಳಾ ಹೋರಾಟ, ಆಸಿಡ್ ದಾಳಿ ವಿರುದ್ಧದ ಪ್ರಚಾರಾಂದೋಲನ, ಅತ್ಯಾಚಾರ ತಡೆಗಾಗಿ ಜನಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಸದ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಎದ್ದೇಳು ಕರ್ನಾಟಕ ಪ್ರಯೋಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.