(ಮುಂದುವರಿದ ಭಾಗ…) ಡಿಜಿಟಲ್ ಯುಗದಲ್ಲಿ ಡಿಜಿಟಲ್ ಹಿಂಸೆ: ಡಿಜಿಟಲ್ ರಂಗದಲ್ಲಿ ಬೆಳೆಯುತ್ತಿರುವ ಮಾಧ್ಯಮಗಳು ಮತ್ತು ಅವುಗಳ ವ್ಯಾಪಕವಾದ ಪ್ರಭಾವದ ಕಾರಣಕ್ಕೆ ಅನೇಕ ರೀತಿಗಳಲ್ಲಿ ಮಹಿಳೆಯರ ಮೇಲಿನ ಹಿಂಸೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ನಡೆಸುವ ಅಪಾಯಕರವಾದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಮಹಿಳೆಯರನ್ನು ಆಧರಿಸಿ ತಮ್ಮ ವ್ಯಾಪಾರಿ ಜಾಲವನ್ನೂ, ಲಾಭದ ಪ್ರಮಾಣವನ್ನೂ ಭಾರೀ ಮಟ್ಟದಲ್ಲಿ ಹೆಚ್ಚಿಸಿಕೊಳ್ಳುತ್ತಿರುವ ವಿವಿಧ ಬಗೆಯ ಸರಕುಗಳನ್ನು ಉತ್ಪಾದಿಸುವ ದೊಡ್ಡ ಕಂಪೆನಿಗಳು ಮತ್ತು ಮನರಂಜನಾ ಉದ್ದಿಮೆ, ತಮ್ಮ ಲಾಭದಾಸೆಗೆ ಕೆಟ್ಟ ಮಹಿಳಾ ವಿರೋಧಿ ದೃಷ್ಟಿಯನ್ನು ಸಮಾಜದಲ್ಲಿ…

ಮಲ್ಲಿಗೆ ಸಿರಿಮನೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರಾದ ಮಲ್ಲಿಗೆಯವರು 2 ದಶಕಕ್ಕೂ ಹೆಚ್ಚು ಕಾಲ ಜನ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಮಹಿಳಾ ಹೋರಾಟ, ಆಸಿಡ್ ದಾಳಿ ವಿರುದ್ಧದ ಪ್ರಚಾರಾಂದೋಲನ, ಅತ್ಯಾಚಾರ ತಡೆಗಾಗಿ ಜನಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಸದ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಎದ್ದೇಳು ಕರ್ನಾಟಕ ಪ್ರಯೋಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.