(ಮುಂದುವರಿದ ಭಾಗ..) ‘ವೀಸಾಗಾಗಿ ಕಾಯುತ್ತಾ’ ಲೇಖನದ ಮೂರನೇ ಭಾಗದಲ್ಲಿ ಬಾಬಾಸಾಹೇಬರು ದಾಖಲಿಸುವ ಘಟನೆ 1929ರಲ್ಲಿ ನಡೆದದ್ದು. ಅಸ್ಪೃಶ್ಯರ ಕುಂದು ಕೊರತೆಗಳ ಅಧ್ಯಯನಕ್ಕೆಂದು ಸರ್ಕಾರ ಮಾಡಿದ ಸಮಿತಿಯಲ್ಲಿ ಇವರು ಸದಸ್ಯರಾಗಿರುತ್ತಾರೆ. ದಲಿತರ ಮೇಲೆ ಜಾತಿಯ ಕಾರಣದಿಂದ ನಡೆಯುವ ದೌರ್ಜನ್ಯ- ದಬ್ಬಾಳಿಕೆಗಳ ಸತ್ಯಶೋಧನೆ ನಡೆಸಲು ಇಡೀ ಸಮಿತಿ ಪ್ರವಾಸ ಮಾಡಬೇಕಾಗಿರುತ್ತದೆ. ಖಾಂದೇಶದಿಂದ ಬಾಂಬೆಗೆ ತೆರಳುವ ಧುಲಿಯಾ ಮಾರ್ಗದಲ್ಲಿರುವ ಒಂದು ಹಳ್ಳಿಯಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಆ ಹಳ್ಳಿಗೆ ಹೋಗಬೇಕಾದರೆ ಚಾಲೀಸಗಾಂವ್‌ನಲ್ಲಿ ರೈಲು ಇಳಿಯಬೇಕಿತ್ತು. ಹಳ್ಳಿಗೆ ಹೋಗಿ ಹಿಂದಿರುಗಿದ ಬಾಬಾಸಾಹೇಬರನ್ನು…

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.