ಭಾರತದಲ್ಲಿ ಆಧುನಿಕ ರಾಜಕೀಯ ಚಿಂತನೆಯ ಇತಿಹಾಸವು, ‘ವಿಚಾರಗಳು ಮತ್ತು ದೃಷ್ಟಿಕೋನ, ಬೌದ್ಧಿಕ ವಲಯದ ಚಿಂತಕರು ಮತ್ತು ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು’ ಈ ಮೂರು ಧಾರೆಗಳನ್ನು ಒಳಗೊಂಡಿದೆ. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ ಈ ಚಿಂತನೆಯನ್ನು ಸಮಾಜ, ಸಾಮಾಜಿಕತೆ, ರಾಜಕಾರಣ ಮತ್ತು ಆರ್ಥಿಕತೆಯ ಆಯಾಮಗಳಲ್ಲಿ ವಿಶ್ಲೇಷಿಸಬೇಕಿದೆ. ಪ್ರೊ.ಬಿದ್ಯುತ್ ಚಕ್ರವರ್ತಿ ಮತ್ತು ರಾಜೇಂದ್ರಕುಮಾರ ಪಾಂಡೆ, “ಭಾರತದ ರಾಜಕೀಯ ಚಿಂತನೆಯು, ‘ದೇಶ’, ‘ರಾಷ್ಟ್ರೀಯತೆ’, ‘ರಾಷ್ಟ್ರೀಯ ಅಸ್ಮಿತೆ’ ಎನ್ನುವ ಮೂರು ವಿಚಾರಗಳನ್ನು ಒಳಗೊಂಡಿದೆ” ಎಂದು ಹೇಳುತ್ತಾರೆ. ಈ ವಿಚಾರಗಳ ಹಿನ್ನಲೆಯಲ್ಲಿ ಕಳೆದ…

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ